ಬೆಂಗಳೂರು ಟ್ರಾಫಿಕ್ಗೆ ಬ್ರೇಕ್ ಹಾಕಲು ಕೈ ಜೋಡಿಸಿದ ಕಂಪನಿಗಳು: ಉದ್ಯೋಗಿಗಳಿಗಾಗಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಖರೀದಿಗೆ ಚಿಂತನೆ
ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಇರುವ ಹಲವಾರು ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ಉತ್ತೇಜಿಸಲು ದಿಟ್ಟ ಹೆಜ್ಜೆ ಇಟ್ಟಿದ್ದು ಈ ಪ್ರಯತ್ನದಲ್ಲಿ ನಾಗರಿಕ ಕಾರ್ಯಕರ್ತರು ಮತ್ತು ಇತರ ಮಧ್ಯಸ್ಥಗಾರರ ಜೊತೆ ಕೈ ಜೋಡಿಸಿವೆ.
ಬೆಂಗಳೂರು, ಅ.12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದೆ (Bengaluru Traffic). ಹೀಗಾಗಿ ಅನೇಕ ಮಂದಿ ಮೆಟ್ರೋ ಮೊರೆ ಹೋಗುತ್ತಿದ್ದಾರೆ (Namma Metro). ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐಟಿ ಬಿಟಿ ಕಂಪನಿಗಳು ಕೂಡ ಮುಂದಾಗಿವೆ (Bengaluru IT BT Companies). ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಇರುವ ಹಲವಾರು ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ಉತ್ತೇಜಿಸಲು ದಿಟ್ಟ ಹೆಜ್ಜೆ ಇಟ್ಟಿದ್ದು ಈ ಪ್ರಯತ್ನದಲ್ಲಿ ನಾಗರಿಕ ಕಾರ್ಯಕರ್ತರು ಮತ್ತು ಇತರ ಮಧ್ಯಸ್ಥಗಾರರ ಜೊತೆ ಕೈ ಜೋಡಿಸಿವೆ.
ನಿನ್ನೆ (ಅ.11) ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ ಮುಂದೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ರು. ಈ ವೇಳೆ ಅನೇಕ ಕಂಪನಿಯ ಮುಖಂಡರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇನ್ಮುಂದೆ ಐಟಿ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಬಳಕೆ ಮಾಡಲಿದ್ದಾರೆ ಕನಿಷ್ಟ ಎರಡು ದಿನ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸ್ತೇವೆ ಅಂತ ಐಟಿ ಕಂಪನಿಗಳ ಸಿಇಓ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮುಂದೆ ಇಂದು ಇಕೋ ಸ್ಪೇಸ್ ನಲ್ಲಿ ಐಟಿ ಉದ್ಯೋಗಿಗಳು ಪ್ರತಿಜ್ಞೆ ಮಾಡಿ ಸಹಿ ಹಾಕಿದ್ರು. ಔಟರ್ ರಿಂಗ್ ರೋಡ್ ನಲ್ಲಿ 18 ಐಟಿ ಸೆಕ್ಟರ್ ಇವೆ. ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳಿಂದ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ 3.5 ಲಕ್ಷ ಪ್ರತಿನಿತ್ಯ ಐಟಿ ಉದ್ಯೋಗಿ ಖಾಸಗಿ ವಾಹನ ಬಳಸುತ್ತಾರೆ. ಟ್ರಾಫಿಕ್ ಕಡಿವಾಣಕ್ಕೆ ಐಟಿ ಉದ್ಯೋಗಿಗಳು ಮೆಟ್ರೋ, ಬಿಎಂಟಿಸಿ ಬಳಕೆ ಅವಶ್ಯ. ಈ ಕುರಿತು ಸಾರಿಗೆ ಸಚಿವರ ಮುಂದೆ ಐಟಿ ಉದ್ಯೋಗಿಗಳು ಪ್ರತಿಜ್ಞೆ ಮಾಡಿದ್ರು.
ಇದನ್ನೂ ಓದಿ: ಬೆಂಗಳೂರಿನ ಈ ಮಾರ್ಗದಲ್ಲಿ ಹೆಚ್ಚುವರಿ ಫೀಡರ್ ಬಸ್ ಆರಂಭಿಸಿದ ಬಿಎಂಟಿಸಿ, ಇಲ್ಲಿದೆ ವೇಳಾಪಟ್ಟಿ
ಇನ್ನು ಈ ಕಂಪನಿಗಳು ತಮ್ಮ ಸಿಬ್ಬಂದಿಗಾಗಿ ಬೃಹತ್ ಪ್ರಮಾಣದಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಖರೀದಿಸುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನೊಂದಿಗೆ ಸಕ್ರಿಯವಾಗಿ ಚರ್ಚೆಗಳನ್ನು ನಡೆಸುತ್ತಿದೆ. ಸ್ಮಾರ್ಟ್ ಕಾರ್ಡ್‌ಗಳ ಬೃಹತ್ ಖರೀದಿಗೆ ಸಂಬಂಧಿಸಿದಂತೆ ORR ಮತ್ತು ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಗಳ ಜೊತೆ ಚರ್ಚೆ ನಡೆಯುತ್ತಿದೆ ಎಂದು BMRCL ದೃಢಪಡಿಸಿದೆ. ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿರುವ ಪ್ರಕಾರ, ವೈಟ್‌ಫೀಲ್ಡ್ ಮೂಲದ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ ಈಗಾಗಲೇ 500 ಸ್ಮಾರ್ಟ್ ಕಾರ್ಡ್‌ಗಳನ್ನು ಖರೀದಿಸಿದೆ ಎನ್ನಲಾಗುತ್ತಿದೆ.
BMRCL ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ BL ಯಶವಂತ ಚವಾಣ್ ಅವರು ಮಾತನಾಡಿ, ಸ್ಮಾರ್ಟ್ ಕಾರ್ಡ್‌ಗಳ ಬೃಹತ್ ಖರೀದಿಗಳನ್ನು ಮಾಡಲು ಬಯಸುವ ಕಂಪನಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ, ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಮೆಟ್ರೋ ಕಾರ್ಡ್‌ಗಳು ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಚವಾಣ್ ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ