ಕಲಿಕೆಗೆ ವಯಸ್ಸಿನ ಮೀತಿ ಇಲ್ಲ ಅಂತಾರೆ. ಅದನ್ನು ಸಾಬೀತು ಮಾಡಿ ತೋರಿಸಿರೋ ಧಾರವಾಡದ ಹಿರಿಯಜ್ಜ ತಮ್ಮ 89ನೇ ಇಳಿವಯಸ್ಸಿನಲ್ಲಿ ಪಿ.ಎಚ್.ಡಿ ಪದವಿ (Karnatak University) ಪಡೆದುಕೊಳ್ಳುವ ಮೂಲಕ, ರಾಜ್ಯದ ಮೊದಲ ಹಿರಿ ವಯಸ್ಸಿನ (Karnaraka State) ಪಿ.ಎಚ್.ಡಿ ಪದವೀಧರ ಎಂಬ ಹೆಗ್ಗಳ್ಳಿಕೆಯ ವಿದ್ವತ್ ಸಾಧಿಸಿಕೊಂಡಿದ್ದಾರೆ. ಹಾಗಾದರೆ ಯಾರದು ಆ ಡಾಕ್ಟರೇಟ್ ಅಜ್ಜ? ಬನ್ನಿ ನೋಡೋಣ… ಹೀಗೆ ಬರೆಯುತ್ತ, ಅಧ್ಯಯನ ಮಾಡುತ್ತಾ ಕುಳಿತಿರೋ ಇವರ ಹೆಸರು ಮಾರ್ಕಂಡೇಯ ದೊಡ್ಡಮನಿ. ವಯಸ್ಸು 89 ವರ್ಷ. ಇವರೀಗ ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿರೋ ಖ್ಯಾತಿ ಪಡೆದಿದ್ದಾರೆ. ಹೌದು; ಧಾರವಾಡ ಜಯನಗರದ ನಿವಾಸಿಯಾಗಿರೋ ಮಾರ್ಕಂಡೇಯ ದೊಡ್ಡಮನಿ ನಿವೃತ್ತ ಶಿಕ್ಷಕರು (PhD graduate Markandeya).
ಸಾಹಿತ್ಯದಲ್ಲಿಯೂ ಸಾಕಷ್ಟು ಹೆಸರು ಮಾಡಿರೋ ಇವರು ಸತತ 18 ವರ್ಷಗಳ ಕಾಲ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ ’ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಇದೀಗ ಅವರ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ಹೀಗಾಗಿ ಅವರೀಗ ಡಾ. ಮಾರ್ಕಂಡೇಯ ಆಗಿ ಹೊರಹೊಮ್ಮಿದ್ದಾರೆ!
ಡೋಹರ ಕಕ್ಕಯ್ಯನವರ ಕೇವಲ 6 ವಚನಗಳು ಮಾತ್ರವೇ ಲಭ್ಯ ಇರೋದು. ಹೀಗಾಗಿ ಯಾರೂ ಸಹ ಇಲ್ಲಿಯವರೆಗೆ ಈ ಬಗ್ಗೆ ಅಧ್ಯಯನ ಮಾಡುವ ವಿಚಾರ ಮಾಡಿರಲಿಲ್ಲ. ಆದರೆ ಇತರೆ ಶರಣರ ವಚನಗಳಲ್ಲಿ ಕಕ್ಕಯ್ಯನವರ ಪ್ರಸ್ತಾಪವಾಗಿದೆ. ಅದನ್ನೆಲ್ಲ ಪರಿಶೀಲಿಸಿ, ಕಕ್ಕಯ್ಯನವರು ಭೇಟಿ ನೀಡಿದ್ದ ಕಾದ್ರೊಳ್ಳಿ, ಕಕ್ಕೇರಿ ಸ್ಥಳಗಳಿಗೂ ಭೇಟಿ ನೀಡಿ, ಸಂಪೂರ್ಣವಾಗಿ ಸಂಶೋಧನಾತ್ಮಕವಾಗಿ 150 ಪುಟಗಳ ಈ ಅಧ್ಯಯನ ಮಹಾಪ್ರಬಂಧ ಸಿದ್ಧಪಡಿಸಿದ್ದಾರೆ.
ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಇಲ್ಲಿಯವರೆಗೆ 79 ವರ್ಷ ವಯಸ್ಸಿನವರೆಗೂ ಪಿಎಚ್.ಡಿ ಪದವಿ ಪಡೆದುಕೊಂಡವರಿದ್ದಾರೆ. ಆದರೆ ಅದನ್ನೆಲ್ಲ ಸರಿಗಟ್ಟಿ ತಮ್ಮ ಹೆಸರಿನಲ್ಲಿ ಆ ದಾಖಲೆ ಉಳಿಯುವಂತೆ ಮಾಡಿದ್ದಾರೆ. ಇನ್ನು ಇವರ ಈ ಸಾಧನೆ ಮನೆಯವರಿಗೆ ಖುಷಿ ತಂದಿದೆ ಎನ್ನುತ್ತಾರೆ ಮಾರ್ಕಂಡೇಯವರ ಪತ್ನಿ ಸುಶೀಲಾ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ