ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ: ಪ್ರಧಾನಿಯನ್ನು ಮನೆಗೆ ಕರೆಯುವ ಇಂಗಿತ ವ್ಯಕ್ತಪಡಿಸಿದ ಕುನಾಲ್​​

| Updated By: ವಿವೇಕ ಬಿರಾದಾರ

Updated on: Jan 13, 2023 | 1:39 PM

ನನಗೆ ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್​ ಹ್ಯಾಂಡ್​ ಮಾಡಬೇಕೆಂಬ ಆಸೆ ಇತ್ತು ಎಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ ಮನದಾಳದ ಮಾತು ಇಲ್ಲಿದೆ.

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ: ಪ್ರಧಾನಿಯನ್ನು ಮನೆಗೆ ಕರೆಯುವ ಇಂಗಿತ ವ್ಯಕ್ತಪಡಿಸಿದ ಕುನಾಲ್​​
ಪ್ರಧಾನಿ ಮೋದಿ ಅವರಿಗೆ ಹಾರ ಹಾಕಲು ಯತ್ನಿಸಿದ ಬಾಲಕ ಕುನಾಲ್​
Follow us on

ಹುಬ್ಬಳ್ಳಿ: ನಿನ್ನೆ (ಜ.12) ಪ್ರಧಾನಿ ನರೇಂದ್ರ ಮೋದಿ (PM Narendra Modi) ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (Hubli Airport) ರೈಲ್ವೆ ಮೈದಾನಕ್ಕೆ ವಾಹನದಲ್ಲಿ ಹೋಗವ ವೇಳೆ ಪ್ರಧಾನಿಗೆ ಬಾಲಕನೋರ್ವ ಹಾರ ಹಾಕಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಬಾಲಕ ಕುನಾಲ್ ಟಿವಿ9ನೊಂದಿಗೆ ಮಾತನಾಡಿ ನನಗೆ (ಕುನಾಲ್​) ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಹೀಗಾಗಿ ಪ್ರಧಾನಿ ಮೋದಿ ನೋಡಲು ನನ್ನ ಅಜ್ಜ, ಮಾವ, ಎರಡುವರೆ ವರ್ಷದ ಮಗು ಜೊತೆ ಹೋಗಿದ್ವಿ‌. ಮಗುಗೆ RSS ಡ್ರೆಸ್ ಹಾಕಿಸಿದ್ವಿ, ಮಗು ಕಡೆಯಿಂದ ಪ್ರಧಾನಿಗಳಿಗೆ ಹಾರ ಕೊಡಿಸಬೇಕು ಅಂತ ಅಂದುಕೊಂಡಿದ್ವಿ. ಆದರೆ ಸಾಧ್ಯವಾಗಲಿಲ್ಲ ಹೀಗಾಗಿ ನಾನೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್​ ಹ್ಯಾಂಡ್​ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ.

ನಾನು ಅವರನ್ನ ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಆಸೆ ಇತ್ತು. ಮೋದಿ ಮನುಷ್ಯರ ಅಲ್ಲ, ಅವರು ದೇವರು ಹಾಗಾಗಿ ನಾನು ಅವರನ್ನು ನೊಡೋಕೆ ಹೋಗಿದ್ದೆ. ನನಗೆ ಅವರ ಎಡಗೈ ಟಚ್ ಆಗಿದೆ. ನಾನು 2 ವರ್ಷದ ಹಿಂದೆ ಮೋದಿಯವರು ಧಾರವಾಡಕ್ಕೆ ಬಂದಾಗ ನೋಡಿದ್ದೆ. ಈಗ ಮತ್ತೆ ಮೋದಿ ಬರುವ ವಿಚಾರ ತಿಳಿದು ನೋಡಲು ಹೋಗಿದ್ದೆ. ಪ್ರಧಾನಿ ಮೋದಿ ಮೇಲೆ ನನಗೆ ಬಹಳ ಅಭಿಮಾನ ಇದೆ. ಪ್ರಧಾನಿ ಮೋದಿ ಜತೆ ಮಾತನಾಡಬೇಕು ಎಂಬ ಆಸೆ ಇದೆ. ನಾನು ಪ್ರಧಾನಿಗಳನ್ನು ಮನೆಗೆ ಬರುವಂತೆ ಕರೆಯುತ್ತೇನೆ.

ಘಟನೆ ಹಿನ್ನೆಲೆ

ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವಗೆ ನಿನ್ನೆ (ಜ.12) ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಪ್ರಧಾನಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ (ಕಾರ್ಯಕ್ರಮ ಆಯೋಜಿಸಿದ ಸ್ಥಳ)ದ ವರೆಗು ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಹೋದರು. ಈ ವೇಳೆ ಗೋಕುಲ ರಸ್ತೆಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ 6ನೇ ತರಗತಿಯ ಕುನಾಲ್​ ಎಂಬ ವಿದ್ಯಾರ್ಥಿ ಮೋದಿಯವರಿಗೆ ಹಾರ ಹಾಕಲು ಯತ್ನಿಸಿದನು. ಈ ಸಮಯದಲ್ಲಿ ಭದ್ರತಾ ಸಿಬ್ಬಂದಿ ಬಾಲಕನನ್ನು ತಡೆದರು.

ಬಾಲಕನಿಗೆ ಸನ್ಮಾನ ಮಾಡಿದ ಎಸ್​ಎಸ್​ಕೆ ಸಮಾಜದ ಮುಖಂಡರು‌

ಹುಬ್ಬಳ್ಳಿಯ ತೊರವಿಹೊಕ್ಕಲ ಬಳಿ ಇರುವ ಬಾಲಕ ಕುನಾಲ್ ದೊಂಗಡಿ ಮನೆಗೆ  ಎಸ್​ಎಸ್​ಕೆ ಸಮಾಜದ ಮುಖಂಡರು‌ ಭೇಟಿ ನೀಡಿ ಸಿಹಿ ಹಂಚಿ, ಬಾಲಕನಿಗೆ ಸನ್ಮಾನ ಮಾಡಿದ್ದಾರೆ. ಎಸ್​ಎಸ್​ಕೆ ಸಮಾಜದ ರಾಜ್ಯಾಧ್ಯಕ್ಷ ಅಶೋಕ ಕಾಟವೆ, ಉಪ ಮುಖ್ಯ ಧರ್ಮದರ್ಶಿ ಭಾಸ್ಕರ್ ಜಿತೂರಿ ಭೇಟಿ ನೀಡಿದರು.  ಭದ್ರತೆ ನಡುವೆಹೋಗಿರೋದು ತಪ್ಪು. ಎಸ್​ಎಸ್​ಎಸ್​  ಸಮಾಜ ಅಂದರೆ ಅದು ರಾಷ್ಟ್ರ ಭಕ್ತಿ ಇರೋ ಸಮಾಜ. ಕುನಾಲ್ ಅಭಿಮಾನದಿಂದ ಹಾರ ಹಾಕೋಕೆ ಹೋಗಿದ್ದಾನೆ ಎಂದರು. ಘಟನೆ ಬಳಿಕ ಕೇಂದ್ರ ಸಚಿವರು ನಮಗೆ ಸಹಾಯ ಮಾಡಿದ್ದಾರೆ. ಅವರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಅಭಿನಂದನೆ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 am, Fri, 13 January 23