ಸಿಲಿಂಡರ್ ಸ್ಫೋಟಗೊಂಡು 5 ಮನೆಗಳು ಬೆಂಕಿಗಾಹುತಿ: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಸಿಲಿಂಡರ್ ಸ್ಫೋಟಗೊಂಡು 5 ಮನೆಗಳು ಬೆಂಕಿಗಾಹುತಿಯಾಗಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಡೆದಿದೆ.

ಸಿಲಿಂಡರ್ ಸ್ಫೋಟಗೊಂಡು 5 ಮನೆಗಳು ಬೆಂಕಿಗಾಹುತಿ: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ
ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2022 | 5:11 PM

ಹುಬ್ಬಳ್ಳಿ: ಸಿಲಿಂಡರ್ (cylinder) ಸ್ಫೋಟಗೊಂಡು 5 ಮನೆಗಳು ಬೆಂಕಿಗಾಹುತಿಯಾಗಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಶಾರ್ಟ್​ಸರ್ಕ್ಯೂಟ್​​​ನಿಂದ ಬೆಂಕಿ ಹೊತ್ತಿಕೊಂಡಿದ್ದು, ನಂತರ ಬೆಂಕಿ ವ್ಯಾಪಿಸಿ ಸಿಲಿಂಡರ್​ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಂಟೂರ ಗ್ರಾಮದ ಮಲ್ಲೇಶಪ್ಪ, ಖಾಸೀಂಸಾಬ್​​​​, ದವಲ್ ಸಾಬ್, ಅಶೋಕಪ್ಪ, ರಮೇಶಪ್ಪ ಎಂಬುವರಿಗೆ ಸೇರಿದ ಮನೆಗಳು ಭಸ್ಮವಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಡಿಗೆಯಿಂದ ವ್ಯಾಪಾರಿಯ ತಲೆ ಒಡೆದು ಹತ್ಯೆ 

ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದ ಬಳಿ ತೋಟದಲ್ಲಿ ಬಡಿಗೆಯಿಂದ ಹೊಡೆದು ಚೌಡೇಶ್ ಸೊಪ್ಪಿನವರ(42) ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದ ಶಂಕೆ ವ್ಯಕ್ತವಾಗಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮನೆಯಲ್ಲಿದ್ದ 50 ಗ್ರಾಂ ಚಿನ್ನ ಹಾಗೂ 2 ಲಕ್ಷ ನಗದು ಎಗರಿಸಿದ‌ ಕಳ್ಳರು

ಯಾದಗಿರಿ: ಗುರುಮಠಕಲ್‌ ಪಟ್ಟಣದ ನಾರಾಯಣಪುರ ಬಡಾವಣೆಯಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ 50 ಗ್ರಾಂ ಚಿನ್ನ, 2 ಲಕ್ಷ ನಗದು ದೋಚಿರುವಂತಹ ಘಟನೆ ನಡೆದಿದೆ. ಮನೆ ಲಾಕ್ ಮಾಡಿಕೊಳ್ಳದೆ ಮಲಗಿದ್ದಾಗ ದಯಾನಂದ‌‌ ಹಿರೇಮಠ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಗುರುಮಠಕಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಕಾರು ಡಿಕ್ಕಿ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಕಾರು ಡಿಕ್ಕಿಯಾಗಿರುವಂತಹ ಘಟನೆ ಮಂಗಳೂರು ತಾಲೂಕಿನ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ಪಕ್ಷಿಕೆರೆ ನಿವಾಸಿ ಜಯಂತಿ ಶೆಟ್ಟಿ (50) ಗಂಭೀರವಾಗಿದ್ದಾರೆ. ಸುರತ್ಕಲ್​ನಿಂದ ಮೂಡಬಿದ್ರಿಗೆ ಕಾರು ತೆರಳುತ್ತಿತ್ತು. ವಾರದ ಸಂತೆಗೆ ತೆರಳಿ ತರಕಾರಿ ಕೊಂಡೊಯ್ಯತ್ತಿದ್ದ ಮಹಿಳೆ ಈ ವೇಳೆ ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಹಾರಿ ದೂರ ಬಿದಿದ್ದಾರೆ. ಕಾರಿನಲ್ಲಿದ್ದ ಚಾಲಕ ಸಹಿತ ನಾಲ್ವರಿಗೆ ಗಾಯವಾಗಿದೆ. ಕಾರಿನಲ್ಲಿದ್ದ ಚಾಲಕ ಅಬ್ದುಲ್ ಖಾದರ್ (65) ಕೌಸರ್ (46), ರಿದಾ (16), ರಝ್ಮಿ (18) ಗಾಯಾಳುಗಳು. ಸ್ಥಳೀಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:39 pm, Thu, 3 November 22