ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ನೋಡಿದ ಮೇಲೆ ಗಲಾಟೆ ನಡೆದಿದೆ. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ಈ ಘಟನೆ ನಡೆದಿದ್ದು, ಸಿನಿಮಾ ನೋಡಿಕೊಂಡು ಹೊರಬಂದ ಬಳಿಕ ಯುವಕರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಸಿನಿಮಾ ಮುಗಿಸಿ ಹೊರಬಂದ ಜನರಿಂದ ಮಾರಾಮಾರಿ
ಚಿತ್ರಮಂದಿರದ ಎದುರುಗಡೆ ಎರಡು ಗುಂಪುಗಳಿಂದ ಗಲಾಟೆ ನಡೆದಿದೆ. ನಿನ್ನೆ(ಅಕ್ಟೋಬರ್ 14) ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ. ಮೊದಲ ಶೋ ಮುಕ್ತಾಯದ ಬಳಿಕ ಹೊರ ಬರುವ ವೇಳೆ ಗಲಾಟೆ ನಡೆದಿದ್ದು, ಸ್ಥಳೀಯರ ಮೊಬೈಲ್ನಲ್ಲಿ ಗಲಾಟೆಯ ದೃಶ್ಯಗಳು ಸೆರೆಯಾಗಿವೆ. ಆದರೆ ಗಲಾಟೆಗೆ ಅಸಲಿ ಕಾರಣ ಏನು ಎನ್ನುವುದು ಮಾತ್ರ ಈವರೆಗೆ ತಿಳಿದು ಬಂದಿಲ್ಲ.
ಬಾಗಲಕೋಟೆ: ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಸಾಲ ಮಾಡಿದ್ದ ವ್ಯಕ್ತಿ ಆತ್ಮಹತ್ಯೆ
ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಸಾಲ ಮಾಡಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿಯಲ್ಲಿ ನಡೆದಿದೆ. ಘಟಪ್ರಭಾ ನದಿಗೆ ಹಾರಿ ಹಣ್ಣಿನ ವ್ಯಾಪಾರಿ ಸೈಯದ್ ವಾಳದ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾತರಕಿ ಗ್ರಾಮದ ಬಳಿ ಸೈಯದ್ ಶವ ಪತ್ತೆಯಾಗಿದೆ.
ಐಪಿಎಲ್ ಬೆಟ್ಟಿಂಗ್ ನಿಂದ ಲಕ್ಷ ಲಕ್ಷ ಸಾಲ ಮಾಡಿದ್ದ ಸೈಯದ್(38) ಅದನ್ನು ತಿರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈಯದ್ಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ, ಮೀನುಗಾರರು ನಿನ್ನೆ(ಅಕ್ಟೋಬರ್ 14) ಇಡೀ ದಿನ ಶೋಧ ನಡೆಸಿದ್ದು, ಇಂದು ಶವ ಪತ್ತೆಯಾಗಿದೆ.
ಇದನ್ನೂ ಓದಿ:
ಟ್ಯೂಷನ್ ಕ್ಲಾಸ್ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದಕ್ಕೆ ಗಲಾಟೆ; ಐವರ ಮೇಲೆ ಹಲ್ಲೆ
Published On - 9:29 am, Fri, 15 October 21