ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ ಬಸವರಾಜ ದೇವರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 23, 2022 | 8:01 PM

ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಸೂರ್ಯ, ಚಂದ್ರ ಅಡ್ಡ ಬಂದರೂ ಅವರು ಸಿಎಂ ಆಗುವುದನ್ನು ತಪ್ಪಿಸಲಾಗಲ್ಲ ಎಂದು ಮನಸೂರಿನ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ ಬಸವರಾಜ ದೇವರು
ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಧಾರವಾಡ: ಸಿದ್ದರಾಮಯ್ಯ (siddaramaiah) ಮತ್ತೆ ಸಿಎಂ ಆಗುತ್ತಾರೆ. ಸೂರ್ಯ, ಚಂದ್ರ ಅಡ್ಡ ಬಂದರೂ ಅವರು ಸಿಎಂ ಆಗುವುದನ್ನು ತಪ್ಪಿಸಲಾಗಲ್ಲ ಎಂದು ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ (Basavaraj Devaru)  ಅವರು ಸಿದ್ದರಾಮಯ್ಯ ಪರ ಭವಿಷ್ಯ ನುಡಿದಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿಯಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 2023ಕ್ಕೆ ಕಂಬಳಿ ಬೀಸುತ್ತೆ, ಬಂಡಾರ ಹಾರುತ್ತೆ, ಡೊಳ್ಳು ಬಾರಿಸುತ್ತೆ. ಇದು ದೈವವಾಣಿ. ಟಗರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದರು. ಸಿದ್ದರಾಮಯ್ಯ ಅವರು ಕುರಿ ಕಾಯ್ದಿದ್ದಾರೆ, ದನ ಮೇಯಿಸಿದ್ದಾರೆ. ಅವರು ಒಂದು ದಂತಕಥೆ. ಸಿದ್ದರಾಮಯ್ಯ ಅವರ ಭಾಷಣ ಕರ್ನಾಟಕಕ್ಕೆ ದಿಕ್ಸೂಚಿ ಎಂದು ಬಸವರಾಜ್ ದೇವರು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಂಡು ಏಕೈಕ ಸಿಎಂ ಸಿದ್ದರಾಮಯ್ಯ: ಹೆಚ್.ಎಂ.ರೇವಣ್ಣ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಕೊಟ್ಟ ಮಾತಿನಂತೆ ನಡೆದುಕೊಂಡು ಏಕೈಕ ಸಿಎಂ ಸಿದ್ದರಾಮಯ್ಯ. ನಾನು ದೇವರಾಜ ಅರಸು ಕಾಲದಿಂದಲೂ ರಾಜಕೀಯದಲ್ಲಿದ್ದೇನೆ. ಜನ ಕೆಲವರನ್ನ ಸಿಎಂ ಆಗಿದ್ದಾಗ ಹೊಗಳುತ್ತಾರೆ, ನಂತರ ಮರೀತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಜನ ಇಂದಿಗೂ ನೆನೆಯುತ್ತಾರೆ. ‘ಅನ್ನಭಾಗ್ಯ’ ಜಾರಿಯಲ್ಲಿರದಿದ್ದರೆ ಕೊರೊನಾ ಸಂದರ್ಭದಲ್ಲಿ ಸಂಕಷ್ಟವಾಯಿತು. ಕೊರೊನಾ ವೇಳೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು. ಕಾಗಿನೆಲೆ ಸಂಸ್ಥಾನ ಬೆಳೆದಿರುವುದಕ್ಕೆ ಸಿದ್ದರಾಮಯ್ಯನವರೇ ಕಾರಣ. ಸಿದ್ದರಾಮಯ್ಯ ಕೇವಲ ಕುರುಬ ಸಮುದಾಯದ ನಾಯಕರಲ್ಲ, ಇಡೀ ರಾಜ್ಯದ ನಾಯಕ ಎಂದು ಸಿದ್ಧರಾಮಯ್ಯರನ್ನು ಹಾಡಿಹೊಗಳಿದ ಹೆಚ್.ಎಂ.ರೇವಣ್ಣ.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧೆ ವಿಷಯ ತಿಳಿದು ಅಭಿಮಾನಿಗಳಿಗೆ ದಿಲ್​ಖುಷ್

ಸುಮಾರು 500 ವರ್ಷಗಳ ಹಿಂದೆ ಕನಕದಾಸರು ಬದುಕಿದ್ದವರು: ಸಿದ್ದರಾಮಯ್ಯ 

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸುಮಾರು 500 ವರ್ಷಗಳ ಹಿಂದೆ ಕನಕದಾಸರು ಬದುಕಿದ್ದವರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ್ದರು. ಬೀರಪ್ಪ ನಾಯಕ, ಬಚ್ಚಮ್ಮ ದಂಪತಿಯ ತಿಮ್ಮಪ್ಪ ನಾಯಕ.
ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ. ತಿಮ್ಮಪ್ಪನ ಪ್ರಾರ್ಥನೆಯಿಂದ ಜನಿಸಿದ್ದರಿಂದ ತಿಮ್ಮಪ್ಪ ಎಂದು ನಾಮಕರಣ ಮಾಡಿದರು. ನಂತರ ಕನಕ ನಾಯಕ, ಆನಂತರ ಕನಕದಾಸ ಎಂದು ಹೆಸರುವಾಸಿಯಾದರು. ಪಾಳೆಗಾರರರಾಗಿದ್ದರೂ ಎಲ್ಲವನ್ನೂ ತ್ಯಜಿಸಿ ಕನಕದಾಸರಾಗುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಈಶ್ವರಪ್ಪ ವಿರುದ್ಧ ಸಿದ್ದು ವಾಗ್ದಾಳಿ 

ಕನಕ ಗುರು ಪೀಠ ಮಾಡೋಕೆ ನಾವೆಲ್ಲ ಶಿವಮೊಗ್ಗಕ್ಕೆ ಹೋಗಿದ್ವಿ,ಈಶ್ವರಪ್ಪ ಕರೆದಿದ್ದೆ‌. ಮೂರು ಲಕ್ಷ ಕೊಡೋಕೆ ಮೀಟಿಂಗ್ ನಲ್ಲಿ ಹೇಳಿದ್ದರು. ಈಶ್ವರಪ್ಪ ಒಪ್ಕೋಂಡು ಹೋಗಿ, ಮತ್ತೆ ಗಿರಾಕಿ ವಾಪಸ್ ಬರಲೇ ಇಲ್ಲ ಎಂದರು ಸಿದ್ಧರಾಮಯ್ಯ. ಕನಕಗುರು ಪೀಠಕ್ಕೆ ಈಶ್ವರಪ್ಪ ಕಾಣಿಕೆ ಏನೂ ಇಲ್ಲ. ಇನ್ನು ಮೂರು ತಿಂಗಳು ಚುನಾವಣೆ ಇದೆ ನೀವು ಕಾಂಗ್ರೆಸ್ ವೋಟ್ ಹಾಕಿ. ಕಾಂಗ್ರೆಸ್​ಗೆ ವೋಟ್ ಹಾಕಿದ್ರೆ ನಿಮ್ಮ ಕೈಗೆ ಅಧಿಕಾರ ಬರತ್ತೆ ಪರೋಕ್ಷವಾಗಿ ನಾನೇ ಸಿಎಂ ಎಂದ ಸಿದ್ದರಾಮಯ್ಯ. ಬಿಜೆಪಿಗೆ ವೋಟ್ ಹಾಕಿದ್ರೆ ಸಿಎಂ ಯಾರಾಗ್ತಾರೆ, ಜೆಡಿಎಸ್​ಗೆ ವೋಟ್ ಹಾಕಿದ್ರೆ ಸಿಎಂ ಯಾರಾಗ್ತಾರೆ? ಆದ್ರೆ ಕಾಂಗ್ರೆಸ್​ಗೆ ವೋಟ್ ಹಾಕಿದ್ರೆ ನಿಮ್ಮ ಕೈಗೆ ಅಧಿಕಾರ ಬರತ್ತೆ ಎಂದು ಸಿದ್ಧರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.