Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಕರ್ನಾಟಕ ಕಾಂಗ್ರೆಸ್​ ನಾಯಕರ ಜಂಟಿ ಬಸ್​ ಯಾತ್ರೆಗೆ ದಿನಾಂಕ ನಿಗದಿಯಾಗಿದ್ದು, ಬೆಳಗಾವಿಯಿಂದ ಪ್ರಾರಂಭವಾಗಲಿದೆ. ಇನ್ನು ಕಾಂಗ್ರೆಸ್​ನ ಬಸ್ ಯಾತ್ರೆಯ ವೇಳಾಪಟ್ಟಿ ಇಲ್ಲಿದೆ.

Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 19, 2022 | 8:29 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆಯಲ್ಲಿ ಕಾಂಗ್ರೆಸ್​ ಬಸ್ ಯಾತ್ರೆಗೆ (Congress Bus Yatra) ಮುಹೂರ್ತ ಫಿಕ್ಸ್​ ಆಗಿದ್ದು, ಜನವರಿ 11ರಿಂದ ಕಾಂಗ್ರೆಸ್ ನಾಯಕರ ಜಂಟಿ ಬಸ್ ಯಾತ್ರೆ ಆರಂಭವಾಗಲಿದೆ. ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಮಾಹಿತಿ ನೀಡಿದ್ದು, ಯಾವ ದಿನಾಂಕದಂದು ಎಲ್ಲಿ ಬಸ್ ಯಾತ್ರೆ ನಡೆಯಲಿದೆ ಎನ್ನುವ ರೂಟ್ ಮ್ಯಾಪ್​ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Karnataka Assembly Poll 2023: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಮೊದಲ ಪಟ್ಟಿ ಪ್ರಕಟ: ಇಲ್ಲಿದೆ ವಿವರ

ಬೆಳಗಾವಿ ಜಿಲ್ಲೆ ದೊಡ್ಡದಿರುವುದರಿಂದ 2 ವಿಭಾಗ ಮಾಡಿಕೊಂಡಿದ್ದು, ಚಿಕ್ಕೋಡಿ, ಬೆಳಗಾವಿಯಲ್ಲಿ ತಲಾ ಒಂದು ಸಭೆ ನಡೆಸಲಿದ್ದಾರೆ. ಇನ್ನು ಜನವರಿ 14, 15ರಂದು ಸಂಕ್ರಾಂತಿ ಹಬ್ಬದ ಸಲುವಾಗಿ ಯಾತ್ರೆಗೆ ವಿರಾಮ ನೀಡಲಾಗಿದೆ. ಬೆಳಗಾವಿಯಲ್ಲೇ ಕಾಂಗ್ರೆಸ್​ನ ಪ್ರಥಮ ಅಧಿವೇಶನ ನಡೆದಿತ್ತು. ಹಾಗಾಗಿ ಬೆಳಗಾವಿಯಿಂದ ಬಸ್​ ಯಾತ್ರೆ ಆರಂಭ ಮಾಡುತ್ತಿರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬಸ್​ ಯಾತ್ರೆ ವೇಳಾಪಟ್ಟಿ ಇಲ್ಲಿದೆ

* ಜನವರಿ 11ರಂದು ಬೆಳಗಾವಿ ಜಿಲ್ಲೆ * ಜನವರಿ 16ರಂದು ಹೊಸಪೇಟೆ * ಜನವರಿ 17ರಂದು ಕೊಪ್ಪಳದಲ್ಲಿ ಯಾತ್ರೆ * ಜನವರಿ 18ರಂದು ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ * ಜನವರಿ 19ರಂದು ಹಾವೇರಿ, ದಾವಣಗೆರೆ ಜಿಲ್ಲೆ * ಜನವರಿ 21 ಹಾಸನ, ಚಿಕ್ಕಮಗಳೂರು * ಜನವರಿ 22 ಉಡುಪಿ, ದಕ್ಷಿಣ ಕನ್ನಡ. * ಜನವರಿ 23 ಕೋಲಾರ, ಚಿಕ್ಕಬಳ್ಳಾಪುರ * ಜನವರಿ 24 ತುಮಕೂರು, ಬೆಂಗಳೂರು ಗ್ರಾಮಾಂತರ * ಜನವರಿ 25 ಚಾಮರಾಜನಗರ, ಮೈಸೂರು * ಜನವರಿ 26 ಮಂಡ್ಯ ಮತ್ತು ರಾಮನಗರ * ಜನವರಿ 27 ಯಾದಗಿರಿ-ಕಲಬುರಗಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್