Karnataka Assembly Poll 2023: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಮೊದಲ ಪಟ್ಟಿ ಪ್ರಕಟ: ಇಲ್ಲಿದೆ ವಿವರ

JDS Candidates List: ಕರ್ನಾಟಕ ವಿಧಾನ ಸಭಾ ಚುನಾವಣೆಗೆ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 92 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು (ಡಿಸೆಂಬರ್ 19) ಪ್ರಕಟಿಸಿದರು.

Karnataka Assembly Poll 2023: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಮೊದಲ ಪಟ್ಟಿ ಪ್ರಕಟ: ಇಲ್ಲಿದೆ ವಿವರ
JDS
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 19, 2022 | 3:05 PM

ಬೆಂಗಳೂರು: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಜೆಡಿಎಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ (JDS Candidates List)  ಪ್ರಕಟಿಸಿದೆ. JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳ ಮೊಲದ ಪಟ್ಟಿಯನ್ನು ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಂದು (ಡಿಸೆಂಬರ್ 19) ಬೆಂಗಳೂರಿನಲ್ಲಿ ಪ್ರಕಟಿಸಿದರು.

ಇದನ್ನೂ ಓದಿ: ನಿಖಿಲ್‌ಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ, ತಾಯಿಯಿಂದಲೇ ಮಗನಿಗೆ ಪಟ್ಟಾಭಿಷೇಕ

ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿರುವ ಜೆಡಿಎಸ್​, ಗೊಂದಲ ,ಅಸಮಾಧಾನಿತ ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡದೇ ಕಾಯ್ದಿರಿಸಿದೆ. ಇನ್ನು ಜಿಟಿ ದೇವೇಗೌಡಗೆ ಚಾಮುಂಡೇಶ್ವರಿ ಹಾಗು ಅವರ ಮಗ ಹರೀಶ್ ಗೌಡಗೂ ಹುಣಸೂರು ಕ್ಷೇತ್ರದಿಂದ ಜೆಡಿಎಸ್​ ಟಿಕೆಟ್ ನೀಡಿದೆ.​ ಇನ್ನು ಮಂಡ್ಯ ಜಿಲ್ಲೆಯ ಹಾಲಿ ಎಲ್ಲಾ ಜೆಡಿಎಸ್​ ಶಾಸಕರಿಗೂ ಟಿಕೆಟ್​ ನೀಡಲಾಗಿದೆ. ಇನ್ನು ಮುಖ್ಯವಾಗಿ ರಾಮನಗರ ಟಿಕೆಟ್​ ನಿಖಿಲ್​ ಕುಮಾರಸ್ವಾಮಿಗೆ ಕೊಟ್ಟಿದೆ. ಚನ್ನಪಟ್ಟಣದಿಂದ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ.

ಆದ್ರೆ, ಮೊದಲ ಲಿಸ್ಟ್​ನಲ್ಲಿ ಸಹೋದರ ಹೆಚ್​ಡಿ ರೇವಣ್ಣ ಅವರ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಹಾಸನ ಜೆಡಿಎಸ್​ನಲ್ಲಿ ಕೆಲ ಗೊಂದಲಗಳು ಏರ್ಪಟ್ಟಿದ್ದರಿಂದ ​ಜಿಲ್ಲೆಯ ಟಿಕೆಟ್​ ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ.  ಹೆಚ್​ಡಿ ರೇವಣ್ಣ ಸ್ಪರ್ಧೆಯ ಜೊತೆಗೆ ಅವರ ಪತ್ನಿ ಭವಾನಿ ರೇವಣ್ಣ ಅವರನ್ನೂ ಸಹ ಅಖಾಡಕ್ಕಿಳಿಸಲು ಚಿಂತನೆಗಳು ನಡೆದಿವೆ. ಆದ್ರೆ, ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಿಲ್ಲ ಎನ್ನಲಾಗಿದೆ. ಇದರಿಂದ ಹಾಸನ ಜಿಲ್ಲೆಯ ಟಿಕೆಟ್​ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ.

ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದುಕೊಂಡು ಪಕ್ಷ ತೊರೆಯುವ ಚಿಂತನೆ ನಡೆಸಿರುವ ನಾಯಕರ ಕ್ಷೇತ್ರಗಳ ಟಿಕೆಟ್​ ಘೋಷಣೆಯಾಗಿಲ್ಲ. ಅರಸಿಕೆರೆ ಶಿವಲಿಂಗೇಗೌಡ, ಕಡೂರು ವೈಎಸ್‌ವಿ ದತ್ತಾ, ಅರಕಲಗೂಡು ಎಟಿ ರಾಮಸ್ವಾಮಿ ಅವರಿಗೆ ಫಸ್ಟ್ ಲಿಸ್ಟ್​ನಲ್ಲಿ ಟಿಕೆಟ್ ನೀಡಿಲ್ಲ.

Published On - 2:29 pm, Mon, 19 December 22