ಮೋಹನ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ; ಮೋಹನ ಲಿಂಬಿಕಾಯಿಗೆ ಬಸವರಾಜ್ ಹೊರಟ್ಟಿ ತಿರುಗೇಟು

| Updated By: ಆಯೇಷಾ ಬಾನು

Updated on: Apr 27, 2022 | 1:38 PM

ಧಾರವಾಡದಲ್ಲಿ ಮಾತನಾಡಿದ ಸಭಾಪತಿ ಹೊರಟ್ಟಿ, ಮೋಹನ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ. ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಯಾರು ಕರೆದಿದ್ದಾರೆ, ಯಾರು ಬಿಟ್ಟಿದ್ದಾರೆ ಅನ್ನೋದು ಈಗ ಯಾಕೆ? ಚುನಾವಣೆ ಬರಲಿ, ಬಂದಾಗ ಎಲ್ಲವೂ ಗೊತ್ತಾಗುತ್ತೆ ಎಂದರು.

ಮೋಹನ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ; ಮೋಹನ ಲಿಂಬಿಕಾಯಿಗೆ ಬಸವರಾಜ್ ಹೊರಟ್ಟಿ ತಿರುಗೇಟು
ಬಸವರಾಜ್ ಹೊರಟ್ಟಿ
Follow us on

ಧಾರವಾಡ: ಸಭಾಪತಿ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಎಂಎಲ್‌ಸಿ ಆಕಾಂಕ್ಷಿಗಳ ಮಧ್ಯೆ ವಾಕ್ ಸಮರ ಮುಂದುವರೆದಿದೆ. ಬಿಜೆಪಿ ಎಂಎಲ್‌ಸಿ ಆಕಾಂಕ್ಷಿ ಮೋಹನ ಲಿಂಬಿಕಾಯಿ ಹೇಳಿಕೆಗೆ ಬಸವರಾಜ್ ಹೊರಟ್ಟಿ ತಿರುಗೇಟು ಕೊಟ್ಟಿದ್ದಾರೆ. ಹೊರಟ್ಟಿಯವರನ್ನು ಬಿಜೆಪಿಗೆ ಕರದೇ ಇಲ್ಲವೆಂದು ಲಿಂಬಿಕಾಯಿ ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಗೆ ಹೊರಟ್ಟಿ ಪ್ರತಿಕ್ರಿಯಿಸಿದ್ದು ಮೋಹನ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ. ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಸಭಾಪತಿ ಹೊರಟ್ಟಿ, ಮೋಹನ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ. ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಯಾರು ಕರೆದಿದ್ದಾರೆ, ಯಾರು ಬಿಟ್ಟಿದ್ದಾರೆ ಅನ್ನೋದು ಈಗ ಯಾಕೆ? ಚುನಾವಣೆ ಬರಲಿ, ಬಂದಾಗ ಎಲ್ಲವೂ ಗೊತ್ತಾಗುತ್ತೆ. ಕರೆದವರು ಸುಮ್ಮನೆ ಕುಳಿತಿದ್ದೇಕೆ? ನನಗೂ ಗೊತ್ತಿಲ್ಲ. ಬೇರೆ ವಿಷಯ ಇದ್ದರೆ ಹೇಳಿ? ಆ ವಿಷಯ ಯಾಕೆ? ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಹೊರಟ್ಟಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಕರ್ನಾಟಕ ವಿವಿ ಕುಲಸಚಿವ ನಾಗರಾಜ್ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈಗ ಅವರನ್ನು ಕರೆಸಿದ್ದಾರೆ. ಆ ವಿಚಾರಣೆಯ ಫಲಿತಾಂಶ ಬರಲಿ. ಫಲಿತಾಂಶ ಬರೋವರೆಗೂ ಏನೂ ಹೇಳೋಕೆ ಆಗೋದಿಲ್ಲ. ಮೇಲ್ನೋಟಕ್ಕೆ ತಪ್ಪು ಕಂಡಾಗ ವಿಚಾರಣೆಗೆ ಕರೆದಿರುತ್ತಾರೆ ಎಂದರು. ರಾಜ್ಯದಲ್ಲಿ ನಡೆದಿರೋ ಅಕ್ರಮ ಪ್ರಕರಣಗಳ ಈಗಲಾದರೂ ಸತ್ಯ ಹೊರಬರುತ್ತೆಂಬ ಆಶಾಭಾವನೆ ಬಂದಿದೆ. ಇಂಥವೆಲ್ಲ ಬಹಳ ದಿನಗಳಿಂದ ನಡೆದಿದ್ದವು. ಇನ್ನು ಮುಂದೆ ನಡೆಯಬಾರದು. ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು.

ನಂಬಿಕೆ ಎನ್ನುವುದು ಮುಖ್ಯ. ಸರಿಯಾದ ರೀತಿಯ ತನಿಖೆ ಮಾಡಬೇಕು. ಇಲ್ಲದೇ ಹೋದಲ್ಲಿ ನಾಳೆ ಅವರ ಮೇಲೂ ಬರುತ್ತೆ. ಪರೀಕ್ಷೆ ಎಂದರೆ ಎಷ್ಟೋ ಜನ ಜೀವ ತ್ಯಾಗ ಮಾಡಿ ಓದಿರುತ್ತಾರೆ. ಅಂಥವರಿಗೆ ಏನೂ ಮಾಡಬಾರದು. ತಪ್ಪು ಮಾಡಿದವರು ಒಂದಿಲ್ಲ ಒಂದು ದಿನ ಸಿಗ್ತಾರೆ. ಯಾವುದೇ ವ್ಯಕ್ತಿ ಇರಲಿ. ನಂಬಿಕೆ ಎನ್ನುವುದು ಮುಖ್ಯ. ಆ ನಂಬಿಕೆಗೆ ದ್ರೋಹ ಮಾಡುವುದು ಸರಿಯಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಗಾಂಧಿ ಬಜಾರ್​​ನಲ್ಲಿ ಕೋ ಅಪರೇಟಿವ್ ಬ್ಯಾಂಕಿನಿಂದ ಗ್ರಾಹಕರಿಗೆ 18 ಕೋಟಿ ರೂ ವಂಚನೆ ಆರೋಪ; ಬ್ಯಾಂಕ್ ನೀಡಿದ ಭರವಸೆಯೇನು?

‘ಕೆಜಿಎಫ್​ 2’ ಮಾತ್ರವಲ್ಲ, ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಸಿನಿಮಾಗಳ ಲಿಸ್ಟ್​ ಇಲ್ಲಿದೆ..