ಹುಬ್ಬಳ್ಳಿ: ಚಲಿಸುವ ರೈಲಿನಿಂದ ಪ್ಲಾಟ್​ಫಾರಂನಲ್ಲಿ ಇಳಿಯುವ ಯತ್ನ, ಬಿಬಿಎಂಪಿ ಎಂಜಿನಿಯರ್​ ಸ್ಥಳದಲ್ಲೇ ಸಾವು

ಬೆಂಗಳೂರಿನ ಬಿಬಿಎಂಪಿಯ ಕೆಆರ್​​ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಗರಾಜು ಎಸ್.ಎ ಸಾವನ್ನಪ್ಪಿದ್ದಾರೆ. ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್​ಫಾರಂನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿ: ಚಲಿಸುವ ರೈಲಿನಿಂದ ಪ್ಲಾಟ್​ಫಾರಂನಲ್ಲಿ ಇಳಿಯುವ ಯತ್ನ, ಬಿಬಿಎಂಪಿ ಎಂಜಿನಿಯರ್​ ಸ್ಥಳದಲ್ಲೇ ಸಾವು
ರಂಗರಾಜು ಎಸ್.ಎ (59)
Edited By:

Updated on: Dec 20, 2021 | 9:28 AM

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಬಿದ್ದು, ಇಂಜಿನಿಯರ್ ಸಾವಿಗೀಡಾದ ದುರ್ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ರಂಗರಾಜು ಎಸ್.ಎ (59) ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಹೋಗಬೇಕಾದ ರೈಲು ಹತ್ತುವ ಬದಲು ಬೆಳಗಾವಿಯ ರೈಲು (Train) ಹತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸೂಪರಿಟೆಂಡೆಂಟ್ ಇಂಜಿನಿಯರ್ ತಕ್ಷಣವೇ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಬಿಬಿಎಂಪಿಯ ಕೆಆರ್​​ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಗರಾಜು ಎಸ್.ಎ ಸಾವನ್ನಪ್ಪಿದ್ದಾರೆ. ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್​ಫಾರಂನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಂಗರಾಜು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಾಸನ: ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ
ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಒಂದು ನಾಲ್ಕು ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. ಎರಡು ಪುಟ್ಟ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದರು. ಕುಡಿದ ಮತ್ತಿನಲ್ಲಿ ಲಾರಿ ಚಾಲಕ ಮನಬಂದಂತೆ ವಾಹನ ಚಲಾಯಿಸಿದ್ದಾನೆ. ಸುಮಾರು ಎರಡು ಕಿಲೋಮೀಟರ್ ಬೈಕ್ ಎಳೆದುಕೊಂಡು ಹೋಗಿರುವ ಲಾರಿಗೆ ಸಿಲುಕಿ ಪ್ರಣತಿ (3) ಪ್ರಣವ್ (3) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಹಾಸನದ ಗವೇನಹಳ್ಲಿಯ ಶಿವಾನಂದ್ ಪತ್ನಿ ಜ್ಯೋತಿಗೆ ಗಂಭೀರ ಗಾಯವಾಗಿತ್ತು. ಆದರೆ ಇಂದು ಜ್ಯೋತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆ ಮೂಲಕ ಮೃತರ ಸಂಖ್ಯೆ 3ಕ್ಕೆ ಏರಿದೆ.  ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ (ಡಿಸೆಂಬರ್​ 19) ಘಟನೆ ನಡೆದಿದೆ.

ಹಾಸನ ಹೊರ ವಲಯದ ಬೂವನಹಳ್ಳಿ ಬಳಿ ಬೈಕ್​ಗೆ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಲಾರಿ ಚಾಲಕ ಪರಾರಿ ಆಗಿದ್ದ. ಅಪಘಾತ ಸ್ಥಳದಿಂದ ಮೂರು ಕಿಲೋಮೀಟರ್ ಮುಂದೆ ಹೋಗುವಾಗ ಮತ್ತೆ ಮೂರು ಬೈಕ್​ಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ರಿಂಗ್ ರಸ್ತೆಯ ಬೂವನಹಳ್ಳಿಯಿಂದ ಹೊಸಕೊಪ್ಪಲು ನಡುವೆ ಅದೇ ಲಾರಿ ನಾಲ್ಕು ಬೈಕ್​ಗಳಿಗೆ ಡಿಕ್ಕಿ ಆಗಿದೆ. ಲಾರಿ ಹಿಂಬಾಲಿಸಿದ ಜನರು ಮೈಸೂರು ರಸ್ತೆಯ ಹೊಸಕೊಪ್ಪಲು ಬಳಿ ಲಾರಿ ತಡೆದು ನಿಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; 4 ಬೈಕ್​​ಗಳಿಗೆ ಲಾರಿ ಡಿಕ್ಕಿ, ಇಬ್ಬರು ಮಕ್ಕಳು ಸಾವು

ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್​ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ

 

Published On - 8:50 am, Mon, 20 December 21