ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ಆರೋಪ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

| Updated By: ಆಯೇಷಾ ಬಾನು

Updated on: Jan 13, 2022 | 12:50 PM

ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ 17 ವರ್ಷದ ಅಪ್ರಾಪ್ತಳನ್ನು ಪ್ರೀತಿಸುತ್ತಿದ್ದ ಯುವಕ ಆಕೆಗೆ ಪುಸಲಾಯಿಸಿ ಜನವರಿ 10 ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಕರೆಸಿಕೊಂಡಿದ್ದ. ಬಳಿಕ ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಆಸೆಯನ್ನು ಬಿಚ್ಚಿಟ್ಟಿದ್ದ.

ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ಆರೋಪ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ: ಪ್ರೀತಿಯಲ್ಲಿ ಯಾವುದೇ ಕೆಟ್ಟ ಆಸೆಗಳಿರಲ್ಲ. ಅದೊಂದು ನಿಷ್ಕಲ್ಮಶ ಪವಿತ್ರ ಬಂಧನ ಎನ್ನತ್ತಾರೆ. ಆದ್ರೆ ಇಲ್ಲಿ ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ನಡೆದಿರುವ ಆರೋಪವೊಂದು ಕೇಳಿ ಬಂದಿದೆ. ಪ್ರೀತಿ, ಪ್ರೇಮ ಎಂಬ ಹೆಸರಲ್ಲಿ ಅಪ್ರಾಪ್ತೆಯನ್ನ ಪುಸಾಲಿಯಿಸಿ ಪ್ರಿಯಕರ ಅತ್ಯಾಚಾರ ಮಾಡಿರುವುದು ಬಯಲಾಗಿದೆ.

ಪ್ರೀತಿ ಪ್ರೇಮ ಅಂದ್ರೆ ಹಾಗೇ ಅಲ್ಲಿ ಎಲ್ಲವೂ ನಂಬಿಕೆ, ಪ್ರೀತಿಯ ಮೇಲೆ ನಡೆಯುತ್ತದೆ. ಅಲ್ಲದೆ ಇಡೀ ಜಗತ್ತೆ ಎದುರಾದ್ರು ಗೆಲ್ತಿವಿ ಎನ್ನೋ ಚಲ,ನಿ ಷ್ಕಲ್ಮಶ ಭಾವ ಅಲ್ಲಿ ಹಚ್ಚು ಹಸಿರಾಗಿರುತ್ತೆ. ಅದೇ ರೀತಿ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ ಆ ಅಪ್ರಾಪ್ತೆ ಕೂಡಾ ತನ್ನ ಪ್ರಿಯಕರನನ್ನ ನಂಬಿದ್ದಳು. ಹೀಗಾಗೇ ಕಳೆದ ಜನವರಿ 10 ರಂದು ಆಕೆಯ ನಂಬರ್​ಗೆ ಪ್ರಿಯಕರ ಫೋನ್ ಮಾಡಿದ್ದ. ನಿನ್ನನ್ನ ನೋಡಬೇಕು. ಎರಡೂ ದಿನಗಳ ವೀಕೆಂಡ್ ಕಪ್ರ್ಯೂ ಹಿನ್ನಲೆ ನೋಡೊಕೆ ಆಗಿಲ್ಲ ಅಂತ ಬಣ್ಣ ಬಣ್ಣದ ಮಾತುಗಳನ್ನ ಹೇಳಿ ಆಕೆಯನ್ನ ಪುಸಾಲಯಿಸಿ ಇಲ್ಲೇ ಸುತ್ತಾಡಿಕೊಂಡು ಬರೋಣ ಬಾ’ ಎಂದು ಅಪ್ರಾಪ್ತೆಯನ್ನ ಹುಬ್ಬಳ್ಳಿಗೆ ಕರೆಯಿಸಿದ್ದ, ಹುಬ್ಬಳ್ಳಿಯ ನೇಕಾರ ನಗರದ ಬ್ರಿಡ್ಜ್‌ ಬಳಿ ಬರ್ತಿದ್ದಂತೆ, ಆಕೆಯನ್ನ ತನ್ನ ಬೈಕೆ ಮೇಲೆ ಕುಡಿಸಿಕೊಂಡು ಕಲಘಟಗಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಷ್ಟೆ ಅದು ದಟ್ಟಾರಣ್ಯದ ನಿರ್ಜನ ಪ್ರದೇಶವಾದ್ದರಿಂದ ಯಾರ ಓಡಾಟವೂ ಇರಲಿಲ್ಲ. ಇದನ್ನ ಎನ್ ಕ್ಯಾಶ ಮಾಡಿಕೊಂಡ ಆತ. ತನ್ಬ ಅಪ್ರಾಪ್ತೆ ಪ್ರೇಯಿಸಿ ಮೇಲೆ ಬಲತ್ಕಾರ ಮಾಡಿದ್ದಾನೆ. ಆ ಪ್ರೇಯಸಿ ಇದು ಸರಿಯಲ್ಲ ಎಂದು ನಿರಾಕರಿಸಿದರೂ ಗೋಗರೆದ್ರು ತನ್ನ ಕಾಮದ ಬಯಕೆಯನ್ನ ತೀರಿಸಿಕೊಂಡಿದ್ದಾನೆ. ಅಲ್ಲಿಂದ ಆ ಅಪ್ರಾಪ್ತೆ ಮನೆಗೆ ಬಂದ ಮೇಲೆ ಆಕೆಯ ದೇಹ ಹಾಗೂ ಚಲವಲನದಲ್ಲಾದ ಬದಲಾವಣೆ ಗಮನಿಸಿದ ಪೋಷಕರು, ಆಕೆಯ ಬಳಿ ವಿಚಾರಿಸಿದಾಗ ಆಘಾತಕಾರಿ ಅಂಶ ಬಯಲಿಗೆ ಬಂದಿದೆ.

ಅದೇ ಗ್ರಾಮದ ಗಿರಿಯಾಲ ಗ್ರಾಮದ ಶ್ರೀನಾಥ ನಾಗಣ್ಣವರ್ ಎನ್ನೋರೆ, 17 ವರ್ಷದ ಅಪ್ರಾಪ್ತಳನ್ನು ಅತ್ಯಾಚಾರ ಮಾಡಿದ್ದಾನೆ ಎನ್ನೋದು ಗೊತ್ತಾಗಿದೆ. ಆಕೆಯನ್ನ ಕಳೆದ ಹಲವಾರು ತಿಂಗಳಿಂದ ಪ್ರೀತಿಸುತ್ರಿದ್ದ. ಆಕೆಯೂ ಆತನನ್ನ ಪ್ರೀತಿಸಿಸುತ್ತಿದ್ದಳು. ಇದನ್ನೆ ಬಳಸಿಕೊಂಡು ಕಾಮುಕ ಪ್ರಿಯಕರ ಆಕೆ ಮೇಲೆ ಬಲವಂತವಾಗಿ ಅತ್ಯಾಚಾರವೇಸಗಿದ್ದು,ಬಯಲಾಗಿದೆ. ಸದ್ಯ ಪೋಷಕರು ಈ ಕುರಿತು ಹುಬ್ಬಳ್ಳಿ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.‌ ಪೊಲೀಸರು ಕೂಡಾ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ. ಅದೇನೆ ಇರಲಿ ಪ್ರೀತಿ ಪ್ರೇಮ ಎಂಬ ಹೆಸರಿನಲ್ಲಿ ಕಾಮುಕ ಪ್ರಿಯಕರ ಅತ್ಯಾಚಾರವೆಸಗಿದ್ದು ನಿಜಕ್ಕೀ ನಾಚಿಕೆಗೇಡಿನ ಸಂಗತಿ..

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಕನ್ನಡ

ಇದನ್ನೂ ಓದಿ: ಕ್ಯಾಮೆರಾ ಮುಂದೆ ಟವೆಲ್​ ಕಿತ್ತೆಸೆಯಲು ಮುಂದಾದ ನಿವೇದಿತಾ ಗೌಡ;​ ಕಮೆಂಟ್​ ಮೂಲಕ ನೆಟ್ಟಿಗರ ಛಾಟಿ

Published On - 9:45 am, Thu, 13 January 22