ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಸಹೋದರಿಯರು

| Updated By: sandhya thejappa

Updated on: Aug 22, 2021 | 9:18 AM

ಜನರಿಂದ ಅಹವಾಲು ಸ್ವೀಕರಿಸಿದ ಬಳಿಕ ರಾಜ್ಯದ ಮುಖ್ಯಮಂತ್ರಿ 9.30ಕ್ಕೆ ಹುಬ್ಬಳ್ಳಿಯ ಏರ್ ಪೋರ್ಟ್​ಗೆ ಭೇಟಿ ನೀಡುತ್ತಾರೆ. ನಂತರ ವೆಂಕಯ್ಯ ನಾಯ್ಡು ಜತೆ ಕೇಂದ್ರ ಸಚಿವ ಜೋಶಿ ಸಹೋದರನ ಮಗನ ಮದುವೆಯಲ್ಲಿ ಭಾಗಿಯಾಗುತ್ತಾರೆ.

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಸಹೋದರಿಯರು
ರಾಖಿ ಕಟ್ಟಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
Follow us on

ಹುಬ್ಬಳ್ಳಿ: ಇಂದು ಅಣ್ಣ ತಂಗಿಯ ಪವಿತ್ರ ಸಂಬಂಧವನ್ನು ಸಾರುವ ದಿನ. ಅದೇ ರಕ್ಷಾ ಬಂಧನ (Raksha Bandhan) ದಿನ. ತಂಗಿಯರು ತನ್ನ ಅಣ್ಣಂದಿರಿಗೆ ರಾಖಿ ಕಟ್ಟಿ, ಕಾಲಿಗೆ ಸಮಸ್ಕಾರ ಮಾಡುತ್ತಾರೆ. ಅದರಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬ್ರಹ್ಮಕುಮಾರಿಯರು ರಾಖಿ ಕಟ್ಟಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿ ಮನೆ ಮುಂದೆ ಸೇರಿರುವ ಜನರು ಸಿಎಂಗೆ ಅಹವಾಲು ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ಮನೆ ಬಳಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಂದ ಅಹವಾಲುವನ್ನು ಸ್ವೀಕರಿಸುತ್ತಿದ್ದಾರೆ.

ಈ ವೇಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಚುನಾವಣೆ ನೀತಿ ಸಂಹಿತೆ ಇದೆ. ಹೀಗಾಗೇ‌ ನಾನು ಏನನ್ನು ಮಾತನಾಡೋದಿಲ್ಲ. ವಿಪಕ್ಷಗಳ ನಿಯೋಗ ಜಾತಿಗಣತಿ ಪ್ರಧಾನಿಗಳ ಭೇಟಿಗೆ ಮುಂದಾಗಿವೆ. ಆ ವಿಷಯ ಸದ್ಯ ನ್ಯಾಯಾಲಯದಲ್ಲಿದೆ. ಪ್ರಧಾನಿಗಳ ಭೇಟಿ ಮಾಡೋಕೆ ಅವಕಾಶವಿದೆ. ಭೇಟಿ ಮಾಡಲಿ ಅಂತ ಹೇಳಿದ್ದಾರೆ.

ಜನರಿಂದ ಅಹವಾಲು ಸ್ವೀಕರಿಸಿದ ಬಳಿಕ ರಾಜ್ಯದ ಮುಖ್ಯಮಂತ್ರಿ 9.30ಕ್ಕೆ ಹುಬ್ಬಳ್ಳಿಯ ಏರ್ ಪೋರ್ಟ್​ಗೆ ಭೇಟಿ ನೀಡುತ್ತಾರೆ. ನಂತರ ವೆಂಕಯ್ಯ ನಾಯ್ಡು ಜತೆ ಕೇಂದ್ರ ಸಚಿವ ಜೋಶಿ ಸಹೋದರನ ಮಗನ ಮದುವೆಯಲ್ಲಿ ಭಾಗಿಯಾಗುತ್ತಾರೆ. ಬಳಿಕ ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನತ್ತ ಪಯಣ ಬೆಳೆಸುತ್ತಾರೆ.

ಇದನ್ನೂ ಓದಿ

ಶಾಸಕ ಜಮೀರ್​ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ? ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದ ಜಮೀರ್ ದೆಹಲಿಗೆ ಹೋಗಿದ್ದೇಕೆ?

Mehndi Designs: ರಕ್ಷಾ ಬಂಧನದ ಸಲುವಾಗಿ ಹಚ್ಚಿಕೊಳ್ಳುವ ಸುಲಭದ ಮೆಹಂದಿ ಡಿಸೈನ್​ಗಳು; ಮದರಂಗಿಯಲ್ಲಿ ಕಂಗೊಳಿಸಲಿ ನಿಮ್ಮ ಕೈಗಳು

(brahma kumaris sisters tied Rakhi to CM Basavaraja Bommai at hubli)

Published On - 9:16 am, Sun, 22 August 21