ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹಂತಕರನ್ನು(Chandrashekhar Guruji Murder) ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ, ರಾಮದುರ್ಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಾಮದುರ್ಗದಲ್ಲಿ ಅರೆಸ್ಟ್ ಮಾಡಿದ್ದಾರೆ. ಆದ್ರೆ ಆರೋಪಿಗಳು ಅರೆಸ್ಟ್ ಆಗಿದ್ದೇ ರೋಚಕ. ಕೊಲೆಯ ಬಳಿಕ ಹಂತಕರು ಪೊಲೀಸರಿಗೆ ಖುದ್ದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಆರೋಪಿಗಳು ಹುಬ್ಬಳ್ಳಿ ಪೊಲೀಸರಿಗೆ ಖುದ್ದು ಕರೆ ಮಾಡಿ ಬೆಳಗಾವಿ ಕಡೆ ಹೋಗುತ್ತಿದ್ದೇವೆಂದು ಮಾಹಿತಿ ನೀಡಿ ಅರೆಸ್ಟ್ ಆಗಿದ್ದಾರೆ.
ಹುಬ್ಬಳ್ಳಿ ಪೊಲೀಸರಿಗೆ ಆರೋಪಿಗಳಿಂದಲೇ ಕರೆ ಬಂದ ಬಳಿಕ ಕೂಡಲೇ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಹುಬ್ಬಳ್ಳಿ ಪೊಲೀಸರ ಮಾಹಿತಿಯ ಮೇರೆಗೆ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಆರೋಪಿಗಳನ್ನು ಬಂಧಿಸಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹೆದರಿದ ಹಂತಕರು ಪೊಲೀಸರಿಗೆ ಮಾಹಿತಿ ನೀಡಿ ಖುದ್ದು ಅರೆಸ್ಟ್ ಆಗಿದ್ದಾರೆ. ಇದನ್ನೂ ಓದಿ: Dating : ಹೇಳಿಕೇಳಿ ಆಗುವುದಾದರೆ ಅದು ಆಕರ್ಷಣೆಯೇ ಅಲ್ಲ, ಅದಾದ ನಂತರ?
ಪ್ರಕರಣದ ಬಗ್ಗೆ ಹು-ಧಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳಾದ ಮಹಾಂತೇಶ, ಮಂಜುನಾಥ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಗೆ ಆಪ್ತರಾಗಿದ್ದರು. ಸರಳವಾಸ್ತು ಸಂಸ್ಥೆಯಲ್ಲಿ ಗುರೂಜಿ ಜತೆ ಕೆಲಸ ಮಾಡ್ತಿದ್ದರು. 2013ರಿಂದ 2019ರವರೆಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಆರೋಪಿ ಮಹಾಂತೇಶ್ ಗುರೂಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಹಾಗೂ ಗುರೂಜಿಯ ಖಾಸಗಿ ವ್ಯವಹಾರ ನೋಡಿಕೊಳ್ತಿದ್ದ. 4 ವರ್ಷದ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತು. ಅಲ್ಲದೆ ಗುರೂಜಿ ಮೇಲಿನ ದ್ವೇಷದಿಂದ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಕ್ತಿದ್ದ. ಸರಳವಾಸ್ತು ಸಂಸ್ಥೆಯಲ್ಲಿ ಮಹಾಂತೇಶ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ 25 ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆದಿದ್ದಕ್ಕೆ ಮತ್ತಷ್ಟು ಮುನಿಸಿತ್ತು. ಎಲ್ಲಾ ಉದ್ಯೋಗಿಗಳು ಮಹಾಂತೇಶ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದವು. ಸಂಧಾನ ಹೆಸರಲ್ಲಿ ಆಗಾಗ ಬಂದು ಮಹಾಂತೇಶ ಹಣ ಪಡೆದು ತೆರಳುತ್ತಿದ್ದ. ಈ ಬಾರಿಯೂ ಆರೋಪಿಗಳು ಕೋರ್ಟ್ ಕೇಸ್ ಸಂಧಾನಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು.
Published On - 5:41 pm, Tue, 5 July 22