Dating : ಹೇಳಿಕೇಳಿ ಆಗುವುದಾದರೆ ಅದು ಆಕರ್ಷಣೆಯೇ ಅಲ್ಲ, ಅದಾದ ನಂತರ?

Relationship : ನನಗೆ ಜೀವನದಲ್ಲಿ ಗುರಿ ಮುಖ್ಯ. ಚೆನ್ನಾಗಿ ಓದಬೇಕು, ಗಳಿಸಬೇಕು, ಸುಂದರವಾದ ಕುಟುಂಬ ಕಟ್ಟಿಕೊಳ್ಳಬೇಕು. ಉಳಿದ ಉಸಾಬರಿ ಯಾರಿಗೆ ಬೇಕು? ಎಂದು ಹೊರಟಿರುತ್ತೀರಿ. ಇದ್ದಕ್ಕಿದ್ದಂತೆ ಯಾರದೋ ಆಕರ್ಷಣೆಗೆ ಒಳಗಾಗಿಬಿಡುತ್ತೀರಿ. ಮುಂದೆ?

Dating : ಹೇಳಿಕೇಳಿ ಆಗುವುದಾದರೆ ಅದು ಆಕರ್ಷಣೆಯೇ ಅಲ್ಲ, ಅದಾದ ನಂತರ?
ಸೌಜನ್ಯ: ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 05, 2022 | 5:33 PM

Dating : ಎಲ್ಲರಿಗೂ ಒಂದಿಲ್ಲಾ ಒಂದು ಹಂತದಲ್ಲಿ ಖಾಲೀತನ ಕಾಡುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಯಾರೋ ಒಬ್ಬರು ನಿಮಗೆ ಕನೆಕ್ಟ್ ಆಗುತ್ತಾರೆ. ಕನೆಕ್ಟ್ ಆಗುವುದು ಎಂದರೆ ಏನು? ಆಲೋಚನೆ, ಅಭಿರುಚಿ, ಸಂವೇದನೆ ಹೀಗೆ ಸಮಾನ ಮನಸ್ಕತೆಯಿಂದ ಪರಸ್ಪರ ಪರಿಚಯವಾಗುವುದು. ಅದು ಆನ್​ಲೈನ್​ ಇರಬಹುದು ಆಫ್​ಲೈನ್ ಇರಬಹುದು. ಈ ಆಧುನಿಕ ಯುಗದಲ್ಲಿ ಕನೆಕ್ಟ್ ಆಗುವುದು ಬಹಳ ಸುಲಭ. ಅದು ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿ ಕೂಡ. ಆದರೆ ಸ್ವಲ್ಪ ಸಂಯಮ ಮತ್ತು ಪ್ರಜ್ಞೆಯಿಂದ ಇರುವುದನ್ನು ರೂಢಿಸಿಕೊಂಡರೆ ಸ್ನೇಹ ಅಥವಾ ಸಂಬಂಧ ಅರ್ಥಪೂರ್ಣವಾಗುವ ಸಾಧ್ಯತೆ ಇರುತ್ತದೆ. ಮೊದಲಿನಂತೆ ಡೇಟಿಂಗ್​ ಈಗ ಹುಡುಗರಿಗೆ ಹೊರೆಯಲ್ಲ. ಹುಡುಗಿಯರೂ ಸಮಸಮವಾಗಿ ಆಲೋಚಿಸುತ್ತ ಬದುಕುವ ಕ್ರಮವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಂತೆ ಹುಡುಗರೇ ಹೋಟೆಲ್ ಬಿಲ್​ ಕೊಡುವುದು, ಪಿಕಪ್​ ಡ್ರಾಪ್​ ಮಾಡುವುದು.. ಇಂತಹ ಜಂಜಾಟಗಳು ಈಗಿಲ್ಲ. ಡೇಟಿಂಗ್​ಗೆ ಬೇಕಿರುವುದು ಸಮಯದ ಹೊಂದಾಣಿಕೆ. ನಗರಪ್ರದೇಶಗಳಲ್ಲಿ ಇದು ದುಬಾರಿ. ಡೆಡ್​ಲೈನ್​ಗಳ ಒತ್ತಡ, ದೂರಪ್ರಯಾಣ, ಟ್ರಾಫಿಕ್​, ಕುಟುಂಬ ಇತ್ಯಾದಿ ಜಂಜಡಗಳು ಡೇಟಿಂಗ್​ನ ಕಮಿಟ್​ಮೆಂಟ್​ ಗೆ ಹೊರೆ ಎನ್ನಿಸುವ ಸಾಧ್ಯತೆ ಇರುತ್ತದೆ. ಆದರೂ ಆಕರ್ಷಣೆ ಎನ್ನುವುದಕ್ಕೆ ಯಾರಪ್ಪಣೆ ಬೇಕು?

ಹೌದು, ಆಕರ್ಷಣೆಗೆ ಒಳಗಾಗುತ್ತೀರಿ. ಅದಕ್ಕಿಂತ ಮೊದಲು ಆನ್​​ಲೈನ್​ ಚಾಟ್​ ಮಾಡುತ್ತೀರಿ. ಆ ಚಾಟ್​ನಲ್ಲಿಯೇ ಒಂದಿಷ್ಟು ಭಾವನೆಗಳು ಬೆಳೆಯುತ್ತ ಹೋಗುತ್ತವೆ. ಫ್ಲರ್ಟಿಂಗ್​ನಲ್ಲಿ ತೊಡಗಿಕೊಳ್ಳುತ್ತೀರಿ. ಹೀಗಿರುವಾಗ ಫ್ಲರ್ಟಿಂಗ್ ತಂತ್ರದ ಬಗ್ಗೆ ಯಾವತ್ತೂ ಯೋಚಿಸಬೇಡಿ. ಅದು ಪೂರ್ವನಿಯೋಜಿತವಲ್ಲ. ಹಾಗೆ ಮಾಡಿದಾಗ ವಿಫಲಗೊಳ್ಳುವ ಸಾಧ್ಯತೆ ಹೆಚ್ಚು. ಸಹಜವಾಗಿ ಸಾಗುವುದರಲ್ಲೇ ಆನಂದವಿದೆ. ಆ ಸಹಜತೆಯಲ್ಲಿ ಕುತೂಹಲ, ಬೆರಗು, ಕಾಯುವಿಕೆ, ಹಿತವಾದ ನೋವು, ನಿರಾಸೆ, ಕ್ರಮೇಣ ಅರ್ಥ ಮಾಡಿಕೊಳ್ಳುವಿಕೆ ಎಲ್ಲವೂ ಇರುತ್ತದೆ. ಇದೆಲ್ಲದರ ಮೊತ್ತವೇ ಸುಖ.

ಅಷ್ಟರಲ್ಲಿ ಪರಸ್ಪರ ಭೇಟಿ ಮಾಡಲೇಬೇಕೆಂಬ ತುಡಿತ ಉಂಟಾಗುತ್ತದೆ. ಮುಂದೆ? ಭೇಟಿಗಾಗಿ ತಯಾರಿ. ತಯಾರಿ ಎಂದರೆ ಮನಸ್ಸನ್ನು ತೆರೆದಿಟ್ಟುಕೊಳ್ಳುವುದು. ಮುಕ್ತವಾಗಿ ಇರುವುದು. ಹರಿಯುವ ನೀರಿನೊಂದಿಗೆ ಹರಿಯುತ್ತ ಹೋಗುವುದು. ಏಕೆಂದರೆ ಇದು ಹೊಸ ಹರಿವಿನ ಹಾತೊರೆತ. ಹಳೆಯದರ ನೆರಳಿಲ್ಲಿ ಹಾಯಬಾರದು.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಇದನ್ನೂ ಓದಿ : Personality Test: ಈ 10 ಗುಣಲಕ್ಷಣಗಳಿದ್ದರೆ ನಿಮ್ಮದು ಸೃಜನಶೀಲ ವ್ಯಕ್ತಿತ್ವ

ಇಷ್ಟಿದ್ದರೆ ಡೇಟಿಂಗ್ ಸುಲಭವೆ? ಇಲ್ಲ. ಏಕೆಂದರೆ ಪ್ರತೀ ವ್ಯಕ್ತಿಯೂ ಭಿನ್ನ. ಭಿನ್ನ ಎನ್ನುವುದು ಅವರವರ ಹಿನ್ನೆಲೆಗೆ ಸಂಬಂಧಿಸಿದ್ದು. ಅದು ಗೊತ್ತಾಗುವುದು ಮಾತು, ವಿಚಾರಗಳ ಮೂಲಕವೇ. ಸ್ವಲ್ಪ ವ್ಯತ್ಯಾಸವಾದರೂ ಯಾರೂ ನೋಯಬಹುದಾದ ಸಂಭವವಿರುತ್ತದೆ. ಏಕೆಂದರೆ ನೋವು ಎಂದರೆ ನಿರೀಕ್ಷೆಯ ಮೂಲ. ನಿರೀಕ್ಷೆಯನ್ನು ಅರ್ಥ ಮಾಡಿಕೊಳ್ಳುವುದೆಂದರೆ ಪರಸ್ಪರ ತಮ್ಮನ್ನು ತಾವು ಬಿಟ್ಟುಕೊಡುತ್ತ ಹತ್ತಿರವಾಗುತ್ತ ಹೋಗುವುದು. ಹತ್ತಿರವಾಗುವಾಗಲೇ ಹಳೆಯ ಅನುಭವಗಳು ಕಾಡುವ ಸಂಭವವಿರುತ್ತದೆ. ಹೊಸ ಹೆಜ್ಜೆಗಳಿಗೆ ತೊಡಕಾಗುವ ಸಂಭವ ಇರುತ್ತದೆ. ಆಗ ಕೋಪ, ತಾಪ, ನೋವು, ಬೇಸರ, ನಿರ್ವಾತ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅದೆಲ್ಲದಕ್ಕೆ ಒಂದೇ ಉಪಾಯ, ಬಂದಿದ್ದನ್ನು ಸ್ವೀಕರಿಸುವ ಮನೋಭಾವ. ಆಗಲೇ ಮತ್ತೊಂದು ಹೆಜ್ಜೆ ಇಡಲು ಸಾಧ್ಯವಾಗುವುದು.

ಅಂತೂ ಭೇಟಿಗಾಗಿ ದಿನಾಂಕ, ಸಮಯ, ಸ್ಥಳ ನಿಗದಿ ಮಾಡಿಕೊಳ್ಳುತ್ತೀರಿ. ಆದಷ್ಟು ಜನಸಂದಣಿ ಕಡಿಮೆ ಇರುವ ರೆಸ್ಟೋರೆಂಟ್​ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ನಿಮಗೆ ಬೇಕಾಗಿರುವುದು ಶಾಂತ ಪರಿಸರ. ಎಂಥ ಮೆಲುಧ್ವನಿಯೂ ಪರಸ್ಪರರಿಗೆ ಕೇಳುವಂಥ ನಿಶ್ಯಬ್ದ ವಾತಾವರಣ. ಹಾಗಾಗಿ ಎಂಥ ರೆಸ್ಟೋರೆಂಟ್​ ಸೂಕ್ತ ಎನ್ನುವುದನ್ನು ಮೊದಲೇ ಯೋಚಿಸಿ. ಇಲ್ಲವಾದಲ್ಲಿ ಅಲ್ಲಿರುವ ಗದ್ದಲ, ಅವರಿವರ ಮಾತುಗಳು ನಿಮಗೆ ಕಿರಿಕಿರಿ, ಒತ್ತಡವನ್ನುಂಟು ಮಾಡಬಹುದು. ಹಾಗೆಂದು  ದುಬಾರಿ ರೆಸ್ಟೋರೆಂಟ್​ ಆಗಬೇಕಿಲ್ಲ. ನೀವಿಲ್ಲಿ ನಿಮ್ಮ ಪ್ರತಿಷ್ಠೆ ತೋರುವ ಸ್ಪರ್ಧೆಗೆ ಬೀಳುತ್ತಿಲ್ಲ. ಸಮಾಧಾನವಾಗಿ ಪರಸ್ಪರರ ನಿರೀಕ್ಷೆ, ಅಭಿರುಚಿಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೀರಿ. ಬಹಳ ಮುಖ್ಯವಾಗಿ ನಿಮ್ಮ ಮೊಬೈಲ್ ಸೈಲೆಂಟ್ ಮೋಡ್​ನಲ್ಲಿರಲಿ. ಏಕೆಂದರೆ ಒಬ್ಬ ವ್ಯಕ್ತಿ ಸ್ನೇಹ ಅಥವಾ ಸಂಬಂಧಕ್ಕೆ ಹಾತೊರೆಯುದು ಆಪ್ತ, ವಿಶ್ವಾಸ, ಪ್ರೀತಿ ಮತ್ತು ಭದ್ರಭಾವದ ಅನುಭವಕ್ಕಾಗಿ. ವ್ಯಕ್ತಿ ಎಂದರೆ ಜೀವಭಾವಅಂತಃಕರಣ. ವಸ್ತುವಲ್ಲ!

ಇದನ್ನೂ ಓದಿ : Personality: ನಿಮ್ಮ ಧ್ವನಿಗೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆಯೆ?

ಮಾತಿನಲ್ಲಿ ಆಪ್ತತೆ ಇರಲಿ. ನಿಮ್ಮ ಮನೆಯವರೊಂದಿಗೆ ಮಾತನಾಡುತ್ತಿದ್ದೀರಿ ಎಂಬ ಭಾವವಿರಲಿ. ಕಣ್ಣುಗಳಿಗೆ ಕಣ್ಣು ಕೊಟ್ಟು ನಗಲು, ಪ್ರತಿಕ್ರಿಯಿಸಲು ಪ್ರಯತ್ನಿಸಿ. ಅವರ ಮಾತುಗಳನ್ನು ಆಸ್ಥೆಯಿಂದ ಆಲಿಸಿ. ಅವರ ಮಾತಿಗನುಗುಣವಾಗಿ ನಿಮ್ಮ ಅನಿಸಿಕೆಗಳನ್ನು ನಿಧಾನ ಸೇರಿಸಲು ಪ್ರಾರಂಭಿಸಿ ಅಥವಾ ಆ ವಿಷಯಕ್ಕೆ ಸಂಬಂಧಿಸಿದ ನಿಮ್ಮ ಅನುಭವವನ್ನೂ ಹೇಳಿ. ಆಗ ಸ್ಪರ್ಶ ಸಹಜ. ಆದರೆ ಅದು ಉದ್ದೇಶಪೂರ್ವಕವಾಗಿರಬಾರದು. ಸಾಂದರ್ಭಿಕವಾಗಿ ತಾನಾಗಿಯೇ ಹೊಮ್ಮುವಂಥ ಕ್ರಿಯೆ. ಭಾವನೆಗೆ ಸಂಬಂಧಿಸಿದ್ದು. ಆಗ ತೋಳು, ಭುಜವನ್ನು ಮೆಲ್ಲಗೆ ಸ್ಪರ್ಶಿಸುವುದು ಸಹಜವೇ. ಆ ಸ್ಪರ್ಶ ನಿಮ್ಮೊಂದಿಗಿರುವ ವ್ಯಕ್ತಿಯನ್ನು ಮತ್ತಷ್ಟು ಆಪ್ತವಾಗಿ ತೆರೆದುಕೊಳ್ಳಲು ಅನುವು ಮಾಡಿಕೊಡುವಂತಿರಲಿ. ಇದೆಲ್ಲವೂ ಆಂತರ್ಯದಿಂದ ಹೊಮ್ಮುವಂಥದ್ದು, ಸ್ವಭಾವ ಮತ್ತು ಅಭಿರುಚಿಗಳ ಮಿಳಿತ.

ಹೀಗೆ ಜೊತೆಗಿರುವ ಜೀವವನ್ನೂ ಪರಸ್ಪರ ಅರ್ಥ ಮಾಡಿಕೊಳ್ಳುವ ಈ ಹದವಾದ ಪ್ರಯಾಣದಲ್ಲಿ ‘ಕೊಟ್ಟುಕೊಳ್ಳುವ ಉಲ್ಲಾಸ’ ನಿಮ್ಮನಿಮ್ಮ ವೈಯಕ್ತಿಕ. ಕೊಡುವುದು, ಸ್ವೀಕರಿಸುವುದು ಎಂದರೆ ಹೊರಾವರಣದಿಂದ ಆವೃತವಾಗಿರುವ ಹುಸಿನಂಬಿಕೆಗಳಿಂದ ದೂರ ಸರಿಯುತ್ತ ನಮ್ಮತನದೆಡೆ ತುಡಿಯುವ ಆಪ್ತಯಾನ. ಇದು ನಿಧಾನವಾಗಿದ್ದಷ್ಟು ಪ್ರಯಾಣ ಲಂಬಿಸುತ್ತದೆ. ಈ ಲಂಬಿಸುವುದರಲ್ಲಿಯೇ ನಿಮ್ಮನ್ನು ನೀವು ಅರಿತುಕೊಳ್ಳುವುದು. ನಿಮ್ಮನ್ನು ನೀವು ಅರಿತುಕೊಳ್ಳಲು ನಿಮ್ಮ ಮಧ್ಯೆ ಇರಬೇಕಾಗಿರುವುದು ರುಚಿ-ಅಭಿರುಚಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 5:33 pm, Tue, 5 July 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ