ದಾಂಪತ್ಯದಲ್ಲಿ ಕಲಹ, ಆತ್ಮಹತ್ಯೆ ಮಾಡಿಕೊಂಡ ಪತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪೊಲೀಸರ ವಿರುದ್ದವೇ ದಾಖಲಾಯ್ತು ಕೇಸ್
ಹುಬ್ಬಳ್ಳಿಯಲ್ಲಿ ಪೊಲೀಸ್ ಹಾಗೂ ಪತ್ನಿ ಕಿರುಕುಳಕ್ಕೆ ನೊಂದು ಯುವಕನನೋರ್ವ ನೇಣಿಗೆ ಶರಣಾಗಿದ್ದ. ರಾಜಿ ಸಂಧಾನಕ್ಕೆ ಹಣಕ್ಕೆ ಬೇಡಿಕೆ ಇಟ್ಟ ಪೊಲೀಸರಿಂದ ನೊಂದು ಆತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.ಇದೀಗ ಆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ವಿರುದ್ದವೇ ದೂರು ದಾಖಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಎಂಟು ಜನರ ವಿರುದ್ದ ದೂರು ದಾಖಲಾಗಿದ್ದು, ಈ ಸಾವಿನ ಹಿಂದೆ ಜಾತಿ ನಿಂದನೆಯಂತಹ ಗಂಭೀರ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿ, ನ.04: ನಿನ್ನೆ ಹುಬ್ಬಳ್ಳಿಯ ಕೋಟೆಲಿಂಗೇಶ್ವರ ನಗರದಲ್ಲಿ 28 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ನಿಖಿಲ್ ಆತ್ಮಹತ್ಯೆಗೆ ಪೊಲೀಸರ ಹಾಗೂ ಪತ್ನಿ ಕಿರುಕುಳ ಕಾರಣ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಹೌದು, ಹುಬ್ಬಳ್ಳಿ (Hubballi)ಯ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ ASI ಜಯಶ್ರೀ ಚಲವಾದಿ ವಿರುದ್ದ ಈ ಆರೋಪ ಕೇಳಿ ಬಂದಿದ್ದು, ಗಂಡ ಹೆಂಡತಿಯ ಜಗಳ ರಾಜೀ ಸಂಧಾನಕ್ಕೆ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ನೊಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದಾಗ ಪೊಲೀಸರು, ಇನ್ಸಪೆಕ್ಟರ್ ಸಾತೇನಹಳ್ಳಿ, ASI ಜಯಶ್ರೀ ಚಲವಾದಿ, ನಿಖಿಲ್ ಪತ್ನಿ ಸೇರಿ ಎಂಟು ಜನರ ವಿರುದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಮೃತನ ತಾಯಿಯಿಂದ ಠಾಣೆಗೆ ದೂರು
ಮೃತ ನಿಖಿಲ್ ಅವರ ತಾಯಿ ಗೀತಾ ಎಂಬುವವರ ದೂರಿನನ್ವರ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಯಾವಾಗ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಯಿತೋ, ಎಚ್ಚೆತ್ತ ಪೊಲೀಸರು, ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ. ನಿಖಿಲ್ ಪತ್ನಿ ಪ್ರೀತಿ, ಅವರ ತಂದೆ ಧನರಾಜ್, ತಾಯಿ ಮಂಜುಳಾರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ನಿಖಿಲ್ ಆತ್ಮಹತ್ಯೆ ಕೇಸ್ನಲ್ಲಿ ಪೊಲೀಸ್ ಅಧಿಕಾರಿಗಳಿಗೂ ಡವ ಡವ ಶುರುವಾಗಿದೆ. ಪೊಲೀಸರ ಪಾತ್ರದ ಬಗ್ಗೆ ನಾವು ಪ್ರತ್ಯೇಕ ತನಿಖೆ ಮಾಡುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ಇದನ್ನೂ ಓದಿ:ಐಐಟಿ-ಬಿಎಚ್‌ಯು ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ವಿವಸ್ತ್ರಗೊಳಿಸಿದ ದುಷ್ಕರ್ಮಿಗಳು; ವಿದ್ಯಾರ್ಥಿಗಳಿಂದ ಪ್ರತಿಭಟನೆ
ಪೊಲೀಸರು ಸೇರಿದಂತೆ ಎಂಟು ಜನರ ವಿರುದ್ದ ದೂರು ದಾಖಲು
ಇನ್ನು ನಿಖಿಲ್ ಸಾವಿಗೆ ಕಾರಣರಾದವರ ವಿರುದ್ದ ಈಗಾಗಲೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೇಶ್ವಾಪೂರ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ, ASI ಜಯಶ್ರೀ ಚಲವಾದಿ ಹಣಕ್ಕೆ ಒತ್ತಾಯಿಸಿದ್ರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. IPC US 306, 149 ಅಡಿಯಲ್ಲಿ 8 ಜನರ ವಿರುದ್ದ ಕೇಸ್ ದಾಖಲಾಗಿದೆ. ನಿಖಿಲ್ ಸಾವಿಗೆ ಹೆಂಡತಿ ಪ್ರೀತಿ, ಅವಳ ತಂದೆ ಧನಂಜಯ,ತಾಯಿ ಮಂಜುಳಾ,ಅಜ್ಜ ಆನಂದಪ್ಪ,ಆನಂದಪ್ಪನ ಹೆಂಡತಿ,ಕೇಶ್ವಾಪೂರ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ, ASI ಜಯಶ್ರೀ ಚಲವಾದಿ,ಇದಲ್ಲದೆ ನಮ್ಮ ಸೊಸೆಯ ಬೆತ್ತಲೆ ಫೊಟೋ ತಗೆದು, ಅವಳೊಂದಿಗೆ ಅನೈತಿಕ ಸಂಭಂದ ಹೊಂದಿದ ವ್ಯಕ್ತಿ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ನಿಖಿಲ್ ಸಾವಿನ ಹಿಂದೆ ಜಾತಿನಿಂದನೆ ತಳಕು
ಈ ಮದ್ಯೆ ಇಲ್ಲಿ ಜಾತಿ ನಿಂದನೆಯೂ ನಿಖಿಲ್ ಸಾವಿನ ಹಿಂದೆ ತಳಕು ಹಾಕಿದೆ. ನಿಖಿಲ್ ದಲಿತ ಸಮುದಾಯಕ್ಕೆ ಸೇರಿದ ಯುವಕ. ಇನ್ಸಪೆಕ್ಟರ್ ಸಾತೇನಹಳ್ಳಿ ಅವರು ಜಾತಿ ಹಿಡಿದು ಬೈದಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ರಾಜ್ಯದಲ್ಲಿ ನಮ್ಮ ಸಮುದಾಯದವರೇ ಹೋಮ್ ಮಿನಿಸ್ಟರ್ ಇದ್ರು, ನಮಗೆ ನ್ಯಾಯ ಸಿಗುತ್ತಿಲ್ಲ. ನಮ್ಮ ಅಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪೊಲೀಸರೆ ಕೊಲೆ ಮಾಡಿದ್ದಾರೆ. ಅಕಸ್ಮಾತ್ ನಮಗೆ ನ್ಯಾಯ ಸಿಗದೆ ಹೋದ್ರೆ ನಾನು ನಮ್ಮ ತಂದೆ-ತಾಯಿ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಅವರೇ ಕಾರಣ ಎಂದು ಮೃತನ ಸಹೋದರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಂಟ್ವಾಳ: ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವ ವಧು
ಒಟ್ಟಾರೆ ನಿಖಿಲ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರಕ್ಷಕರಾಗಬೇಕಿದ್ದ ಪೊಲೀಸ್ ಅಧಿಕಾರಿಗಳ ವಿರುದವೇ ದೂರು ದಾಖಲಾಗಿದೆ. ಈಗಾಗಲೇ 8 ಜನರ ವಿರುದ್ದ ಕೇಸ್ ದಾಖಲಾಗಿದ್ದು, ಕೂಡಲೇ ಪೊಲೀಸ್ ಅಧಿಕಾರಿಗಳನ್ನ ಅಮಾನತ್ತು ಮಾಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹವಾಗಿದೆ. ಆದ್ರೆ, ಸರ್ಕಾರವಾಗಲಿ, ಗೃಹ ಇಲಾಖೆ ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ದಾಖಲಾದ್ರೂ, ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Sat, 4 November 23