ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತಬೀಜಾಸುರ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ರಾಹುಲ್ ಗಾಂಧಿ ಜ್ಞಾನ ಇಲ್ಲದೆ ಮಾತನಾಡಬಾರದು. ಇದು ರಾಹುಲ್ ತಪ್ಪಲ್ಲ ಅವರಿಗೆ ಭಾಷಣ ಬರೆದುಕೊಡುವವರ ತಪ್ಪು. ಅವರ ಬಳಿ ಇರೋ ಚೀಟಿ ಕಸಿದುಕೊಂಡರೆ ಅವರಿಗೆ ಏನೂ ನೆನಪಿರಲ್ಲ

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತಬೀಜಾಸುರ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
ಪ್ರಹ್ಲಾದ್ ಜೋಶಿ
Updated By: ರಶ್ಮಿ ಕಲ್ಲಕಟ್ಟ

Updated on: Oct 02, 2022 | 2:37 PM

ಕಾಂಗ್ರೆಸ್ (Congress) ಭ್ರಷ್ಟಾಚಾರ ಎಂಬ ಮೊಟ್ಟೆಗಳನ್ನು ಇಟ್ಟಿದೆ. ಆ ಮೊಟ್ಟೆಗಳಿಗೆ ಕಾವು ಕೊಟ್ಟು ನೂರಾರು ಮರಿಗಳನ್ನು ಮಾಡಿ ರಕ್ತಬೀಜಾಸುರರ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರ ತೊಡೆದು ಹಾಕಲು ಎಷ್ಟೇ ಪ್ರಯತ್ನಿಸಿದರೂ ಕಾಂಗ್ರೆಸ್​​ನವರ ಭ್ರಷ್ಟಾಚಾರ ಹುಲ್ಲಿನ ರೀತಿ ಬೆಳೆಯುತ್ತಲೇ ಇದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ಗಿಲ್ಲ. ಕಾಂಗ್ರೆಸ್ನ ಪ್ರತಿ ಅವಧಿಯಲ್ಲೂ ಹಗರಣಗಳು ನಡೆದಿವೆ. ಹಗರಣ ಇಲ್ಲದೆ ಎಂದೂ ಕಾಂಗ್ರೆಸ್ ಸರ್ಕಾರ ನಡೆದಿಲ್ಲ ಹಗರಣಗಳಿಂದಲೇ ಇಂದು ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ಜೋಶಿ ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜ್ಯದಲ್ಲಿ ಹವಾ ಕ್ರಿಯೇಟ್ ಮಾಡಲು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat jodo yatra) ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಝೀರೋ ಆಗಿದೆ. ಈಗ ರಾಜಸ್ಥಾನದಲ್ಲೂ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ. ರಾಹುಲ್ ಗಾಂಧಿ ಜ್ಞಾನ ಇಲ್ಲದೆ ಮಾತನಾಡಬಾರದು. ಇದು ರಾಹುಲ್ ತಪ್ಪಲ್ಲ ಅವರಿಗೆ ಭಾಷಣ ಬರೆದುಕೊಡುವವರ ತಪ್ಪು. ಅವರ ಬಳಿ ಇರೋ ಚೀಟಿ ಕಸಿದುಕೊಂಡರೆ ಅವರಿಗೆ ಏನೂ ನೆನಪಿರಲ್ಲ. ಅವರಿಗೆ ಸರಿಯಾದ ಭಾಷಣ ಬರೆದುಕೊಡಿ. ಜನ ರಾಹುಲ್ ಗಾಂಧಿಯನ್ನು ಮೊದಲೇ ಸೀರಿಯಸ್ ಆಗಿ ತಗೊಳೋದಿಲ್ಲ. ಅವರು ಇನ್ನಷ್ಟು ನಗೆಪಾಟಲೀಗಿಡಾಗೋದು ಬೇಡಾ ಎಂದು ಜೋಷಿ ಹೇಳಿದ್ದಾರೆ. ಹಗರಣ ಇಲ್ಲದೆ ಕಾಂಗ್ರೆಸ್ ಸರ್ಕಾರವೇ ನಡೀತಿಲ್ಲ. ಹಗರಣದಿಂದಲೇ ಕಾಂಗ್ರೆಸ್ ಸರ್ಕಾರ ಕಳೆದುಕೊಂಡರು. ವೀಸಾದಲ್ಲೂ ಇವರು ಹಣ ತಗೆದುಕೊಂಡಿರೋ ಗಂಭೀರ ಆರೋಪ ಇದೆ.ಕಾಂಗ್ರೆಸ್ ಕಾರಣದಿಂದ ಕಲ್ಲಿದ್ದಲ್ಲು ಹಗರಣದಲ್ಲಿ ಅಧಿಕಾರಿಗಳ ಮೇಲೆ ತನಿಖೆ ನಡೆಯತ್ತಿದೆ. ಭ್ರಷ್ಟಾಚಾರದ ಬಗ್ಗೆ ಇವರು ಮಾತಾಡೋದು ನೋಡಿದರೆ ನನಗೆ ಆಶ್ಚರ್ಯ ಆಗುತ್ತಿದೆ.

ಭಾರತ ಜೋಡೋ ಯಾತ್ರೆ ಮಾಡೋ ಬದಲು ಭಾರತ ತೋಡೋ ಮಾಡಿದವರ ಬಳಿ ರಾಹುಲ್ ಗಾಂಧಿ ಹೋಗಿದ್ದಾರೆ. ಮೊದಲು ರಾಹುಲ್ ಗಾಂಧಿ ಕಾಂಗ್ರೆಸ್ ಜೊಡೋ ಮಾಡಲಿ. ಮೊದಲು ಅವರು ಪಕ್ಷ ಸರಿ ಮಾಡಿಕೊಳ್ಳಲಿ. ಇದೀಗ ರಾಜಸ್ತಾನದಲ್ಲಿ ಕಾಂಗ್ರೆಸ್ ತೋಡೋ ಆಯ್ತು. ಗೋವಾದಲ್ಲಿ ಕಾಂಗ್ರೆಸ್ ತೋಡೋ,ಕಾಂಗ್ರೆಸ್ ಚೋಡೊ ಎರಡು ಆಯ್ತು ಎಂದು ಜೋಶಿ ವ್ಯಂಗ್ಯವಾಗಿಡಿದ್ದಾರೆ.

ಅದೇ ವೇಳೆ ಸಿಪಿ ಯೋಗೇಶ್ವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದು ಸರಿಯಲ್ಲ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕಲ್ಲು ತೂರಾಟ ಮಾಡಬಾರದು ಜೆಡಿಎಸ್ ಮಾಡಿದ್ದು ಸರಿ ಅಲ್ಲ ಎಂದು ಜೋಶಿ ಹೇಳಿದ್ದಾರೆ.