AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಧಾರವಾಡ ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ
ಧಾರವಾಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ನೇತೃತ್ವದಲ್ಲಿ​​ ದಿಶಾ ಸಭೆ
TV9 Web
| Edited By: |

Updated on:Oct 01, 2022 | 8:29 PM

Share

ಧಾರವಾಡ: ಧಾರವಾಡ ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಾರಿಡಾರ್‌ನಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಕಾಮಗಾರಿ ನಿಂತಿದೆ. ಕಾಮಗಾರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಪರ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ವಿ ಮಂಜುಲಾ ಅಡ್ಡಿಪಡಿಸುತ್ತಿದ್ದಾರೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಚಿವ ಪ್ರಲ್ಹಾದ ಜೋಶಿ ಅವರ ಮುಂದೆ ಪ್ರಸ್ತಾಪಿಸದರು. ಆಗ ಅಪರ ಮುಖ್ಯ ಕಾರ್ಯದರ್ಶಿ ವಿ ಮಂಜುಲಾ ವಿರುದ್ಧ ಜೋಶಿ ಗರಂ ಆದರು.

ಆ ಅಧಿಕಾರಿ ಏನು ಹಿಟ್ಲರನಾ? ಸರ್ವೆ ಮುಗಿಸಿ ಕೆಲಸ ಮಾಡಿ. ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಕೆಲಸ ಆರಂಭಿಸಿ. ಆಕೆ ಬಂಧಿಸುವುದಾದರೆ ನನ್ನನ್ನು ಬಂಧಿಸಲಿ. ಮುಂದೆ ಆ ಅಧಿಕಾರಿ ಕರೆಯುವ ಸಭೆಗೆ ಹೋಗಬೇಡಿ. ಅವರು ಏನು ತಿಳಿದುಕೊಂಡಿದ್ದಾರೆ ನಮ್ಮನ್ನು? ಅವರು ಏನೇ ಮಾತನಾಡುವುದಿದ್ದರೂ ನನ್ನ ಜೊತೆ ಮಾತನಾಡಲಿ. ತಮ್ಮನ್ನು ತಾವು ಹಿಟ್ಲರ್ ಅಂದುಕೊಂಡಿದ್ದಾರಾ? ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲವೇ? ಈ ಕೂಡಲೇ ಕಾಮಗಾರಿ ಆರಂಭಿಸಿ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಲಘಟಗಿ ತಹಶೀಲ್ದಾರ್ ವಿರುದ್ಧ ಕೂಡ ಯಲ್ಲಪ್ಪ ಗೋಣೆಣ್ಣವರ್​ ಸಿಟ್ಟಾಗಿದ್ದಾರೆ. ಕಲಘಟಗಿ ತಹಶೀಲ್ದಾರ್ ಕಚೇರಿ ಭ್ರಷ್ಟಾಚಾರ ಕೇಂದ್ರವಾಗಿದೆ. ಎಲ್ಲೂ ನಡೆಯದ ಭ್ರಷ್ಟಾಚಾರ ನಿಮ್ಮ ಕಚೇರಿಯಲ್ಲಿ ನಡೆಯುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಜನರಿಗೆ ಕಿರುಕುಳ ಕೊಡುತ್ತಿದ್ದೀರಾ? ಹಣ ಕೊಡದೇ ಯಾವುದೇ ಕೆಲಸ ಆಗುತ್ತಿಲ್ಲ ಎಂದು ದೂರು ಬರುತ್ತಿವೆ. ದುಮ್ಮವಾಡ ಕಂದಾಯ ನಿರೀಕ್ಷಕನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ ಎಂದು ತರಾಟೆಗೆ ತಗೆದುಕೊಂಡರು.

ಅಧಿಕಾರಿಗಳು ಯಾರಿಗೇ ಬೇಕಾದರೂ ಹೇಳಿಕೊಳ್ಳಿ ಅಂತಾರಂತೆ. ಸಿಬ್ಬಂದಿಯೂ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದ ಬಗ್ಗೆ ದೂರು ನೀಡಿದ್ದಾರೆ. ಈ ಎಲ್ಲದರ ಬಗ್ಗೆ ಸಾಕಷ್ಟು ಜನ ಬಂದು ದೂರು ಕೊಡುತ್ತಿದ್ದಾರೆ. ನೌಕರರು, ಸಿಬ್ಬಂದಿಯನ್ನು ನಿಯಂತ್ರಿಸಲು ನಿಮಗೆ ಆಗುತ್ತಿಲ್ಲವೇ? ಹೀಗೇ ಆದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಿಶಾ ಸಭೆಗೆ ಗೈರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರರಿಗೆ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದಾರೆ.

NHAI ಅಧಿಕಾರಿಗಳನ್ನುಐಎಎಸ್ ಅಧಿಕಾರಿ ವಿ. ಮಂಜುಲಾ ಹೆದರಿಸುತ್ತಿದ್ದಾರೆ

ಐಎಎಸ್ ಅಧಿಕಾರಿ ವಿ. ಮಂಜುಲಾ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಆಕ್ರೋಶ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್  ಹುಬ್ಬಳ್ಳಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾರ್ಗದಲ್ಲಿ 3 ಬಸ್ ನಿಲ್ದಾಣ ತೆಗೆಯುವಂತೆ ವಿ. ಮಂಜುಲಾ ಅವರಿಗೆ ಮನವಿ  ಮಾಡಲಾಗಿದೆ. ಇದರಿಂದ ಬಿಆರ್​ಟಿಸಿಎಸ್​ಗೆ ಹೊರೆಯಾಗುತ್ತೆ ಎಂದು ಅಧಿಕಾರಿ ವಿ. ಮಂಜುಲಾ ಹೇಳಿದ್ದರು. ಆದರೆ ಫ್ಲೈಓವರ್​ ನಿರ್ಮಾಣದ ನಂತರ ನಿಲ್ದಾಣವನ್ನು ಮರು ನಿರ್ಮಾಣ ಮಾಡಿಕೊಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಹೇಳಿದೆ.

ಈಗ ಬಸ್​ ನಿಲ್ದಾಣ ತೆರೆವು ಮಾಡದಂತೆ IAS ಅಧಿಕಾರಿ ಹೇಳುತ್ತಿದ್ದಾರೆ. NHAI ಅಧಿಕಾರಿಗಳನ್ನು IAS ಅಧಿಕಾರಿ ಮಂಜುಲಾ ಹೆದರಿಸುತ್ತಿದ್ದಾರೆ. ಇದರಿಂದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಾಕಷ್ಟು ತೊಂದರೆ ಆಗಿದೆ. ಹಾಗಾಗಿ ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಜೋಶಿ ಸಿಟ್ಟಿಗೆದ್ದಿದ್ದಾರೆ. ಆದರೂ ಐಎಎಸ್​​​ ಅಧಿಕಾರಿ ವಿ.ಮಂಜುಲಾಗೆ ತಿಳಿವಳಿಕೆ ಇಲ್ಲ ಎಂದು ವಿ.ಮಂಜುಲಾ ವಿರುದ್ಧ ಅರವಿಂದ ಬೆಲ್ಲದ್ ಹುಬ್ಬಳ್ಳಿಯಲ್ಲಿ ವಾಗ್ದಾಳಿ ಮಾಡಿದ್ದಾರೆ.

PFI ನಿಷೇಧಿಸಿರುವುದನ್ನು ಕಾಂಗ್ರೆಸ್​​ಗೆ ವಿರೋಧಿಸಲು ಆಗುತ್ತಿಲ್ಲ

ಸಭೆಗು ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತುಷ್ಟೀಕರಣ ರಾಜಕಾರಣ ನೆಹರು ಕಾಲದಿಂದ ರೂಢಿಯಾಗಿದೆ. PFI ನಿಷೇಧಿಸಿರುವುದನ್ನು ಕಾಂಗ್ರೆಸ್​​ಗೆ ವಿರೋಧಿಸಲು ಆಗುತ್ತಿಲ್ಲ. ವಿರೋಧ ಮಾಡಿದರೆ ಜನರು ಕಾಂಗ್ರೆಸ್​​ಗೆ ತಕ್ಕ ಪಾಠ ಕಲಿಸುತ್ತಾರೆ. ಹೀಗಾಗಿ ಪದೇಪದೆ ಆರ್​​ಎಸ್​​ಎಸ್ ಹೆಸರು ತೆಗೆದುಕೊಳ್ತಿದ್ದಾರೆ ಎಂದು PFI ಜೊತೆ RSS ಹೋಲಿಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನಿಡಿರುವ ವಿಚಾರವಾಗಿ ಪ್ರತಿಕ್ರಿಯಸಿದರು.

ರಾಹುಲ್ ಗಾಂಧಿ ಮುತ್ತಜ್ಜನ ಕಾಲದಿಂದಲೂ RSS ತುಳಿಯಲೆತ್ನಿಸಿದ್ದಾರೆ. ನಾವೆಲ್ಲರು ಕೂಡ ಆರ್​​ಎಸ್​​ಎಸ್​​​ನವರೆ. ಉತ್ತರಾಖಂಡ್​ನಲ್ಲಿ ಕಾಂಗ್ರೆಸ್​​ ಪಕ್ಷವನ್ನು ಹುಡುಕಬೇಕಿದೆ. ಪೂರ್ವೋತ್ತರ ರಾಜ್ಯದಲ್ಲಿ ಒಬ್ಬರೂ ಕಾಂಗ್ರೆಸ್​​ನ​ ಸಂಸದರು ಇಲ್ಲ. ಕಾಂಗ್ರೆಸ್​​ ಅಧಿಕಾರದಲ್ಲಿರುವ 2 ರಾಜ್ಯಗಳನ್ನೂ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಉನ್ನತ ಪದವಿಯಲ್ಲಿ ಇರೋರೆಲ್ಲ ಆರ್.ಎಸ್.ಎಸ್.ನವರು. ಹೀಗಾಗಿ ಈಗ ಏನೂ ಆಗೋದಿಲ್ಲ. ತುಷ್ಠೀಕರಣ ಮಾಡಿ ಮಾಡಿ ವಿರೋಧ ಪಕ್ಷದ ಸ್ಥಾನದಲ್ಲಿ ಇಲ್ಲವಾಗಿದ್ದೀರಿ. ಯುಪಿಯಲ್ಲಿ ಜಿರೋ ಇದ್ದಿರಿ. ರಾಜ್ಯಸಭೆಯಲ್ಲಿ 35ಕ್ಕೆ ಬಂದಿದ್ದೀರಿ. ಇದ್ದ ಎರಡು ರಾಜ್ಯ ಕಳೆದುಕೊಳ್ಳೋದೆ ರಾಹುಲ್ ಗಾಂಧಿ ಯಾತ್ರೆ ಫಲಶೃತಿ. ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಪೂರ್ತಿ ಸಾಯೋದು ಬೇಡ ಎಂದು ಕಾಲೆಳೆದರು.

ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Sat, 1 October 22

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ