Cyber Crime: ಮರುಳಾಗುವಂತೆ ಮಾತಾಡಿ ಫ್ಲಿಫ್ ಕಾರ್ಟ್ ಹೆಸರಿನಲ್ಲಿ 32 ಲಕ್ಷ ಪಂಗನಾಮ‌, ಹಣ ಕಳೆದುಕೊಂಡು ಕಂಗಾಲಾದ ಉದ್ಯಮಿ

| Updated By: ಆಯೇಷಾ ಬಾನು

Updated on: Jan 07, 2022 | 1:16 PM

ಅಪರಿಚಿತ ಯುವತಿಯೊಬ್ಬಳು ಪ್ಲಿಪ್‌ಕಾರ್ಟ್‌ ಕಂಪನಿಯ ಹೊಸ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಪದೇ ಪದೇ ಉದ್ಯಮಿಯ ಮೊಬೈಲ್ ನಂಬರ್ಗೆ ಮಾಹಿತಿಗಳನ್ನ ಸೆಂಡ್ ಮಾಡಿ ಆಕರ್ಷಿಸಿದ್ದಾರೆ. ಅಲ್ಲದೆ ಉದ್ಯಮಿಯ ಮೊಬೈಲ್ಗೆ ಕರೆ ಮಾಡಿ ಬಣ್ಣ ಬಣ್ಣದ ಮಾತುಗಳನ್ನಾಡಿ ಪಂಗನಾಮ ಹಾಕಿದ್ದಾರೆ.

Cyber Crime: ಮರುಳಾಗುವಂತೆ ಮಾತಾಡಿ ಫ್ಲಿಫ್ ಕಾರ್ಟ್ ಹೆಸರಿನಲ್ಲಿ 32 ಲಕ್ಷ ಪಂಗನಾಮ‌, ಹಣ ಕಳೆದುಕೊಂಡು ಕಂಗಾಲಾದ ಉದ್ಯಮಿ
ಮರುಳಾಗುವಂತೆ ಮಾತಾಡಿ ಫ್ಲಿಫ್ ಕಾರ್ಟ್ ಹೆಸರಿನಲ್ಲಿ 32 ಲಕ್ಷ ಪಂಗನಾಮ‌, ಹಣ ಕಳೆದುಕೊಂಡು ಕಂಗಾಲಾದ ಉದ್ಯಮಿ
Follow us on

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಈ ಸೈಬರ್ ಖದೀಮರ ಜಾಲ ಎಷ್ಟು ದೊಡ್ಡದಾಗಿದೆಯಂದ್ರೆ, ಸ್ವಲ್ಪ ಯಾಮಾರಿದ್ರು ಸಾಕು ನಿಮ್ಮ ಅಕೌಂಟ್ ನಲ್ಲಿರೋ ಲಕ್ಷ ಲಕ್ಷ ಹಣ ಮಂಗಮಾಯವಾಗಿ ಬಿಡುತ್ತೆ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹಾಗೂ ವೇಗವಾಗಿ ಈ ಸೈಬರ್ ಖದೀಮರು ಕಾದು ಕುಳಿತಿರುತ್ತಾರೆ. ಸದ್ಯ ಈ ಸೈಬರ್ ಖದೀಮರು ನಗರದ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಜನರನ್ನ ಬಿಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ವಿಶ್ವದ ಪ್ರತಿಷ್ಠಿತ ಆನ್ ಲೈನ್ ಬಿಸಿನೆಸ್ ಪೊರ್ಟಲ್ ಫ್ಲಿಫ್ ಕಾರ್ಟ್ನಲ್ಲಿ ಹೂಡಿಕೆ ಮಾಡಿಸೋದಾಗಿ ವಂಚನೆ ಮಾಡಿದ್ದ ಹುಬ್ಬಳ್ಳಿಯ ವ್ಯಕ್ತಿಯೋರ್ವನಿಂದ ಬರೋಬ್ಬರಿ 32 ಲಕ್ಷ ಪಂಗನಾಮ‌ ಹಾಕಿದ್ದಾರೆ. ಲಾಭದ ಆಮಿಷವೊಡ್ಡಿ ನವ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇಲ್ಲಿನ ಹೆಗ್ಗೇರಿ ಕಾಲೋನಿಯ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬುವವರೇ ಮೋಸ ಹೋದವರು. ಇವರಿಗೆ ಅಪರಿಚಿತ ಯುವತಿಯೊಬ್ಬಳು ಪ್ಲಿಪ್‌ಕಾರ್ಟ್‌ ಕಂಪನಿಯ ಹೊಸ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಪದೇ ಪದೇ ಉದ್ಯಮಿಯ ಮೊಬೈಲ್ ನಂಬರ್ಗೆ ಮಾಹಿತಿಗಳನ್ನ ಸೆಂಡ್ ಮಾಡಿ ಆಕರ್ಷಿಸಿದ್ದಾರೆ. ಅಲ್ಲದೆ ಉದ್ಯಮಿಯ ಮೊಬೈಲ್ಗೆ ಕರೆ ಮಾಡಿ ಬಣ್ಣ ಬಣ್ಣದ ಮಾತುಗಳನ್ನಾಡಿ ಪಂಗನಾಮ ಹಾಕಿದ್ದಾರೆ.

ಹಂತ ಹಂತವಾಗಿ ಬರೋಬ್ಬರಿ ಆತನಿಂದ 32 ಲಕ್ಷ ವಂಚಿಸಿದ್ದಾರೆ. ಇನ್ನು ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷ್ಮೀ ಮೆಹರ್ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಪ್ಲಿಪ್‌ಕಾರ್ಟ್ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭ ಗಳಿಸಬಹುದು ಎಂದು ನಂಬಿಸಿ ಒಟ್ಟು 32 ಲಕ್ಷ ರೂಗಳನ್ನು ಆನ್‌ಲೈನ್‌ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಅಲ್ಲದೇ ಪದೇ ಪದೇ ಹಣ ಹಾಕು ಎಂದು ಕೇಳುತ್ತಿದ್ದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅವಾಗಲೇ ಹುಬ್ಬಳ್ಳಿಯ ಉದ್ಯಮಿ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಕೇಳಿದಾಗ ಆತನಿಂದ ಆಕೆ ಸಂರ್ಪಕ ಕಟ್ ಮಾಡಿಕೊಂಡಿದ್ದಾರೆ. ಅಲ್ಲದೇ ಫೋನ್ ನಂಬರ್ನ್ನ ಬ್ಲಾಕ್ ಲಿಸ್ಟ್ಗೆ ಹಾಕಿದ್ದಾರೆ.

ಇನ್ನು ಕಳೆದೆರಡೂ ವರ್ಷಗಳಿಂದ‌ ಲಾಕ್ ಡೌನ್ ಹಾಗೂ ಕೊರೊನಾದಿಂದ ಹೊಡೆತ ತಿಂದಿದ್ದ ಉದ್ಯಮಿ ಸದ್ಯ ಮತ್ತೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಹೇಗಾದ್ರು‌ ಮಾಡಿ ಉದ್ಯಮ ಸ್ಟಾಟ್೯ ಮಾಡಬೇಕು ಎಂದು‌ಕೊಂಡು ಕಾಯುತ್ತಾ ಕುಳಿತಿದ್ದ ಉದ್ಯಮಿ ಗುರುಮೂರ್ತಿ ಕೊನೆಗೂ ಫ್ಲಿಫ್ ಕಾರ್ಟ್ ನಲ್ಲಿ ಒಳ್ಳೆಯ ಅವಕಾಶ ಸಿಕ್ಕಿತೆಂದು ಭಾವಿಸಿ ಯುವತಿಯ‌ ಮಾತಿಗೆ ಮರುಳಾಗಿದ್ದು ಕೊನೆಗೆ ಅದು ತನ್ನ ಪಂಗನಾಮ ಹಾಕೋಕೆ ಮಾಡಿದ್ದ ಮಾಸ್ಟರ್ ಫ್ಲ್ಯಾನ್ ಎನ್ನೋದು ಗೊತ್ತಾಗಿದೆ. ಸದ್ಯ ತನ್ನ ಅಕೌಂಟ್ನಲ್ಲಿ ಅಳಿದುಳಿದ್ದಿದ್ದ ಎಲ್ಲ ಹಣವನ್ನ ಕಳೆದುಕೊಂಡ ಉದ್ಯಮಿ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ

ಸದ್ಯ ಈ ಕುರಿತು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೈಬರ್ ಪೊಲೀಸರು ಆರೋಪಿಯ ಬೆನ್ನು ಹತ್ತಿದ್ದಾರೆ. ಆದ್ರೆ ಸದ್ಯ ಹೊಸ ಉದ್ಯಮದ ಕನಸು ಕಾಣುತ್ತಿದ್ದ ಈ ಗುರುಮೂರ್ತಿಗೆ ಯುವತಿ ಖೆಡ್ಡಾಗೆ ಕೆಡವಿ ಲಕ್ಷಾಂತರ ರೂಪಾಯಿ ದೋಚಿದ್ದು ನಿಜಕ್ಕೂ ದುರಂತದ ಸಂಗತಿ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ

ಇದನ್ನೂ ಓದಿ: Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು