ಕೋಚಿಂಗ್ ಇಲ್ಲದೇ ದಾವಣಗೆರೆ ಯುವತಿ UPSC ಪರೀಕ್ಷೆಯಲ್ಲಿ ಸಾಧನೆ: ರಾಜ್ಯಕ್ಕೆ 101ನೇ ರ್‍ಯಾಂಕ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 16, 2024 | 7:35 PM

ಆಕೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿ ಓದುತ್ತಿದ್ದಾಳೆ. ಆಕೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಲೇ ಬೇಕು ಎನ್ನುವ ಆಸೆ ಇತ್ತು. ಅದರಂತೆ ಮೊದಲನೇ ಪ್ರಯತ್ನದಲ್ಲಿ ಸೋತಿದ್ದ ಆಕೆ, ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾಳೆ. ಯಾರು ಆಕೆ? ಈ ಸ್ಟೋರಿ ಓದಿ.

ಕೋಚಿಂಗ್ ಇಲ್ಲದೇ ದಾವಣಗೆರೆ ಯುವತಿ UPSC ಪರೀಕ್ಷೆಯಲ್ಲಿ ಸಾಧನೆ: ರಾಜ್ಯಕ್ಕೆ 101ನೇ ರ್‍ಯಾಂಕ್
ದಾವಣಗೆರೆ ಸೌಭಾಗ್ಯ ಎಸ್. ಬೀಳಗಿಮಠ ಎಂಬ ಯುವತಿ UPSC ಪರೀಕ್ಷೆಯಲ್ಲಿ ಸಾಧನೆ:
Follow us on

ಧಾರವಾಡ, ಏ.16: ಯುಪಿಎಸ್‌ಸಿ(UPSC) ಪರೀಕ್ಷಾ ಫಲಿತಾಂಶ ಇಂದು(ಏ.16) ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ ಧಾರವಾಡದ ವಿದ್ಯಾರ್ಥಿನಿಯೊಬ್ಬರು ರಾಜ್ಯಕ್ಕೆ 101ನೇ ರ್‍ಯಾಂಕ್ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ಮೂಲತಃ ದಾವಣಗೆರೆಯವರಾದ(Davanagere) ಸೌಭಾಗ್ಯ ಎಸ್. ಬೀಳಗಿಮಠ ಎಂಬ ವಿದ್ಯಾರ್ಥಿನಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆಯುತ್ತಿದ್ದಾರೆ. 2018 ರಲ್ಲೇ ಧಾರವಾಡಕ್ಕೆ ಐಎಎಸ್ ಮಾಡುವ ಕನಸು ಹೊತ್ತು ಬಂದ ಸೌಭಾಗ್ಯ, ಇದೀಗ ಅಂದುಕೊಂಡ ಗುರಿಯನ್ನು ಸಾಧಿಸಿದ್ದಾರೆ. ಯಾವುದೇ ಐಎಎಸ್ ತರಬೇತಿಯನ್ನು ಪಡೆಯದೇ ಸೌಭಾಗ್ಯ ಇದೀಗ ರಾಜ್ಯಕ್ಕೆ 101ನೇ ರ್‍ಯಾಂಕ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಕೋಚಿಂಗ್ ಹೋಗದೆ, ಅಗ್ರಿ ಬಿಎಸ್ಸಿ ಗುರುವಿನ ಬಳಿಯೇ ಮಾರ್ಗದರ್ಶನ

ಸೌಭಾಗ್ಯ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿ ಪದವಿ ಓದುತ್ತಿದ್ದಾರೆ. ತಮಗೆ ಶಿಕ್ಷಣ ನೀಡುವ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಂ. ಅವರ ನಿವಾಸದಲ್ಲೇ ಉಳಿದು ವಿದ್ಯಾಭ್ಯಾಸ ಮಾಡಿದ ಸೌಭಾಗ್ಯ, ಅಶ್ವಿನಿ ಅವರ ಕೊಟ್ಟ ತರಬೇತಿಯನ್ನು ಪಡೆದು ಇದೀಗ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇನ್ನು ಸೌಭಾಗ್ಯ ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿದ ಪ್ರಾಧ್ಯಾಪಕಿ ಡಾ.ಅಶ್ವಿನಿ, ತಮ್ಮ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:UPSC Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ಸೌಭಾಗ್ಯ ಯಾವುದೇ ತರಬೇತಿ ಪಡೆಯಲಿಲ್ಲ, ನಾನೇ ಆಕೆಗೆ ಗೊತ್ತಿದ್ದಷ್ಟು ತರಬೇತಿ ನೀಡಿದೆ. ನನ್ನ ವಿದ್ಯಾರ್ಥಿನಿ ಇಂತಹ ಸಾಧನೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಡಾ. ಅಶ್ವಿನಿ ಅವರು ಹೇಳುತ್ತಾರೆ. ಒಟ್ಟಾರೆ ದಾವಣಗೆರೆ ಮೂಲದವರಾದರೂ ಸೌಭಾಗ್ಯ ಅವರು ಧಾರವಾಡದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿ ಇಂದು ಐಎಎಸ್ ಪರೀಕ್ಷೆ ಪಾಸು ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Tue, 16 April 24