AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಲ್ಹಾದ್‌ ಜೋಶಿ, ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ? ಇಲ್ಲಿದೆ ವಿವರ

ಬಿಜೆಪಿ ಅಭ್ಯರ್ಥಿಗಳಾದ ಪ್ರಲ್ಹಾದ್‌ ಜೋಶಿ, ಭಗವಂತ ಖೂಬಾ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜಾ ಅಮರೇಶ್ವರ ನಾಯಕ್, ಅಣ್ಣಾಸಾಹೇಬ್‌ ಜೊಲ್ಲೆ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಇಂದು ಸೋಮವಾರ ನಾಮಪತ್ರ ಸಲ್ಲಿಸಿದರು. ಇನ್ನು ಕಾಂಗ್ರೆಸ್​ನಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೂ ಅಲಗೂರ, ಬೆಳಗಾವಿ ಅಭ್ಯರ್ಥಿ ಮೃಣಲ್ ಹೆಬ್ಬಾಳ್ಕರ್ ಸೇರಿದಂತೆ ಹಲವರು ಉಮೇದುವಾರಿಕೆ ಸಲ್ಲಿಸಿದರು. ಯಾರ ಆಸ್ತಿ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

ಪ್ರಲ್ಹಾದ್‌ ಜೋಶಿ, ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ? ಇಲ್ಲಿದೆ ವಿವರ
ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ
TV9 Web
| Edited By: |

Updated on: Apr 15, 2024 | 8:35 PM

Share

ಬೆಂಗಳೂರು, (ಏಪ್ರಿಲ್ ಕ15): ಕರ್ನಾಟಕ ಲೋಕಸಭಾ ಚುನಾವಣೆ (Loksabha Elections 2024) ರಂಗೇರಿದ್ದು, ಇಂದು (ಏಪ್ರಿಲ್ 15) ಧಾರವಾಡ ಲೋಕಸಭಾ(Dharwad Loksabha) ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಲ್ಹಾದ್ ಜೋಶಿ(pralhad joshi) ಮತ್ತು ಹಾವೇರಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪ್ರಲ್ಹಾದ್ ಜೋಶಿ 21.9 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆದ್ರೆ ಕೇಂದ್ರದಲ್ಲಿ ಪ್ರಭಾವಿ ಸಚಿವರಾದರೂ ಜೋಶಿ ಬಳಿ ಸ್ವಂತ ವಾಹನವಿಲ್ಲ. ಪ್ರಲ್ಹಾದ್‌ ಜೋಶಿ ಕುಟುಂಬದವರ ಬಳಿಯೂ ಯಾವುದೇ ವಾಹನ ಇಲ್ಲ ಅಂತ ಘೋಷಣೆ ಮಾಡಿದ್ದಾರೆ. ಇನ್ನು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಬಳಿ 29.58 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಲ್ಹಾದ್ ಜೋಶಿ ಆಸ್ತಿ ವಿವರ

ಚುನಾವಣಾಧಿಕಾರಿಗಳಿಗ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿರುವ ಜೋಶಿ ತಮ್ಮಲ್ಲಿ ರೂ. 2.72 ಕೋಟಿ ಚರಾಸ್ತಿ ಇದೆ. ರೂ. 11.24 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ರೂ.13.96 ಕೋಟಿ ಆಸ್ತಿ ಹೊಂದಿದ್ದಾರೆ. ಚರಾಸ್ತಿ ಪೈಕಿ ಪ್ರಲ್ಹಾದ ಜೋಶಿ ರೂ. 1 ಲಕ್ಷ ನಗದು ಹೊಂದಿದ್ದು, ರೂ. 12.14 ಲಕ್ಷ ಮೌಲ್ಯದ 184 ಗ್ರಾಂ ಚಿನ್ನದ ಆಭರಣಗಳು, ರೂ. 3.65 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ಹೊಂದಿದ್ದಾರೆ. ಹಿಂದುಸ್ತಾನ ಕೆಮಿಕಲ್‌ ಲ್ಯಾಬರೋಟಿಸ್‌ನಲ್ಲಿ ರೂ. 10.78 ಲಕ್ಷ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌, ಎಲ್‌ಐಸಿಗಳಲ್ಲಿ ಹಣ ಹೂಡಿಕೆ ಹಾಗೂ ವಿವಿಧ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ.

ಇದನ್ನೂ ಓದಿ: ಇಬ್ಬರಲ್ಲಿ ಯಾರು ಶ್ರೀಮಂತರು? ಬೆಳಗಾವಿ ಕ್ಷೇತ್ರದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ

ಹಾಗೆಯೇ, ಸ್ಥಿರಾಸ್ತಿ ಪೈಕಿ ಹುಬ್ಬಳ್ಳಿಯ ಕೇಶ್ವಾಪೂರ, ಬೆಂಗಳೂರಿನ ಸರ್ಜಾಪೂರ ರಸ್ತೆಯಲ್ಲಿ ರೂ. 2.64 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ ಜೋಶಿ. ಹಾಗೆಯೇ ಹುಬ್ಬಳ್ಳಿಯಲ್ಲಿ ಮನೆ, ಬೆಂಗಳೂರಿನ ಅಪಾರ್ಟಮೆಂಟ್‌ನಲ್ಲಿ ಮನೆ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಅಪಾರ ಮೌಲ್ಯದ ಕಟ್ಟಡಗಳನ್ನು ಹೊಂದಿದ್ದಾರೆ. ಹಾಗೆಯೇ, ಜೋಶಿ ಅ‍ವರ ವಿವಿಧ ಬ್ಯಾಂಕ್‌ಗಳಲ್ಲಿ ರೂ. 6.63 ಲಕ್ಷ ಸಾಲವನ್ನೂ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು, ಪತ್ನಿ ಜ್ಯೋತಿ ಹೆಸರಿನಲ್ಲಿ ರೂ. 5.93 ಕೋಟಿ ಚರಾಸ್ತಿ ಹಾಗೂ ರೂ. 86.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಪೈಕಿ ರೂ. 1.10 ಲಕ್ಷ ನಗದು ಹೊಂದಿದ್ದಾರೆ. ರೂ. 33 ಲಕ್ಷ ಮೌಲ್ಯದ 500 ಗ್ರಾಪಂ ಚಿನ್ನದ ಆಭರಣಗಳು, 1.46 ಲಕ್ಷ ಮೌಲ್ಯದ 2 ಕೆ.ಜಿ. ಬೆಳ್ಳಿ ವಸ್ತು ಹೊಂದಿದ್ದಾರೆ. ಹಾಗೆಯೇ, ರೂ.1.37 ಕೋಟಿ ಸಾಲವನ್ನೂ ಜ್ಯೋತಿ ಜೋಶಿ ಅವರು ಮಾಡಿಕೊಂಡಿದ್ದಾರೆ. ಪ್ರಹ್ಲಾದ ಜೋಶಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಈ ಪೈಕಿ ಪುತ್ರಿ ಅನನ್ಯ ಹೆಸರಿನಲ್ಲಿ ರೂ. 32 ಲಕ್ಷ (ಚರಾಸ್ತಿ) ಪಿಪಿಎಫ್‌ ಹಾಗೂ ಎಲ್‌ಐಸಿ ಮಾಡಿಸಲಾಗಿದೆ.

ಒಟ್ಟಾರೆ ಪ್ರಲ್ಹಾದ ಜೋಶಿ ಅವರ ಕುಟುಂಬದ ಹೆಸರಿನಲ್ಲಿ ರೂ. 21.07 ಕೋಟಿ ಆಸ್ತಿ ಇದೆ. ವಿಶೇಷ ಎಂದರೆ ಕುಟುಂಬದ ಯಾರ ಹೆಸರಿನಲ್ಲಿ ಒಂದೂ ಕಾರು ಇಲ್ಲ. 2019ರ ವೇಳೆ ಪ್ರಹ್ಲಾದ್ ಜೋಶಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಬಳಿ ರೂ. 11.14 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. 2024ರ ಚುನಾವಣೆಯಲ್ಲಿ ರೂ. 13.96 ಕೋಟಿ ಎಂದು ಘೋಷಿಸಿದ್ದು, ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ರೂ. 2.82 ಕೋಟಿ ಏರಿಕೆಯಾಗಿದೆ. ಹಾಗೆಯೇ, ಕುಟುಂಬದ ಆಸ್ತಿ 2019ರಲ್ಲಿ ರೂ.14.17 ಕೋಟಿ ಇತ್ತು. 2024ರ ಚುನಾವಣೆಯಲ್ಲಿ ರೂ. 21.07 ಕೋಟಿ ಆಗಿದ್ದು, ರೂ. 6.9 ಕೋಟಿ ಏರಿಕೆಯಾಗಿದೆ.

ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಆಸ್ತಿ ಇದೆ?

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮ ಬಳಿ 29.58 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.

  • 3 ಲಕ್ಷ ರೂಪಾಯಿ ನಗದು, ಬ್ಯಾಂಕ್‌, ಫೈನಾನ್ಸ್‌ಗಳಲ್ಲಿ 51 ಲಕ್ಷ ಠೇವಣಿ
  • ಬಾಂಡ್‌, ವಿವಿಧ ಕಂಪನಿ ಷೇರುಗಳಲ್ಲಿ 3.3 ಕೋಟಿ ರೂಪಾಯಿ ಹೂಡಿಕೆ
  • 1.59 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವ ಬೊಮ್ಮಾಯಿ
  • ಮಾಜಿ ಸಿಎಂ ಬೊಮ್ಮಾಯಿ ಬಳಿ ಯಾವುದೇ ಸ್ವಂತ ವಾಹನ ಇಲ್ಲ.
  • 6.12 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವ ಬೊಮ್ಮಾಯಿ.
  • 96.8 ಲಕ್ಷ ಮೌಲ್ಯದ ಕೃಷಿ ಜಮೀನು, 7 ಕೋಟಿ ಮೌಲ್ಯದ ಕೃಷಿಯೇತರ ಜಮೀನು.
  • 6.3 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿರುವ ಬೊಮ್ಮಾಯಿ
  • ಬೆಂಗಳೂರು ಹಾಗೂ ಶಿಗ್ಗಾಂವಿಯಲ್ಲಿ 9.18 ಕೋಟಿ ರೂ. ಮೌಲ್ಯದ ಮನೆ ಸೇರಿ 23.45 ಕೋಟಿ ಮೌಲ್ಯದ ಸ್ಥಿರಾಸ್ತಿ.
  • 5.31 ಕೋಟಿ ಸಾಲ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಬೊಮ್ಮಾಯಿ ಉಲ್ಲೇಖ.
  • 20 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿರುವ ಬೊಮ್ಮಾಯಿ.
  • ಪತ್ನಿ ಬಳಿ 1.32 ಕೋಟಿ ಮೌಲ್ಯದ ಚರಾಸ್ತಿ, ಪುತ್ರಿ ಬಳಿ 1.53 ಕೋಟಿ ಚರಾಸ್ತಿ ಇದೆ.

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!