Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ನೀರಿಲ್ಲ, ಮೇವಿಲ್ಲ ಜಾನುವಾರು ಮಾರಲು ಹೋದರು ಖರೀದಿಸುವವರಿಲ್ಲ, ಅನ್ನದಾತನ ಕಣ್ಣೀರು ವರಿಸುವವರ‍್ಯಾರು?

ರಾಜ್ಯದಲ್ಲಿ ಈ ಬಾರಿ ಭಾರೀ ಬರ ಆವರಿಸಿದೆ. ಇದರಿಂದಾಗಿ ಎಲ್ಲೆಡೆ ಈಗಾಗಲೇ ಹಾಹಾಕಾರ ಎದ್ದಿದೆ. ಈ ಮಧ್ಯೆ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮೇವು, ನೀರಿನ ಬರದ ನಡುವೆ ಜಾನುವಾರುಗಳನ್ನು ಸಾಕಣೆ ಮಾಡೋದು ಕಷ್ಟವಾಗಿದೆ. ಇದರಿಂದಾಗಿ ಜಾನುವಾರು ಮಾರಾಟ ಮಾಡಲು ಹೋದರೆ ಅಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.

ಧಾರವಾಡ: ನೀರಿಲ್ಲ, ಮೇವಿಲ್ಲ ಜಾನುವಾರು ಮಾರಲು ಹೋದರು ಖರೀದಿಸುವವರಿಲ್ಲ, ಅನ್ನದಾತನ ಕಣ್ಣೀರು ವರಿಸುವವರ‍್ಯಾರು?
ಬರ ಹಿನ್ನೆಲೆ ರೈತರು ಸಂಕಷ್ಟದಲ್ಲಿ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಆಯೇಷಾ ಬಾನು

Updated on: Sep 27, 2023 | 3:17 PM

ಧಾರವಾಡ, ಸೆ.27: ರಾಜ್ಯದಲ್ಲಿ ಮಳೆ ಕೈಗೊಟ್ಟಿದೆ. ಹಲವು ಜಿಲ್ಲೆಗಳಲ್ಲಿ ಬರ (Drought) ತಾಂಡವವಾಡುತ್ತಿದೆ. ಹನಿ ನೀರಿಗೂ ಪರದಾಡೊ ಸ್ಥಿತಿ ನಿರ್ಮಾಣವಾಗುತ್ತಿದೆ. ಸಾಕು ಪ್ರಾಣಿಗಳಿಗೂ ತಿನ್ನಲು ಮೇವಿಲ್ಲ, ಕುಡಿಯೋದಕ್ಕೂ ನೀರಿಲ್ಲ. ಬರದ ಛಾಯೆ ನಡುವೆ ಅನ್ನದಾತರಿಗೆ (Farmers) ಮತ್ತೊಂದು ಸಂಕಷ್ಟ ಎದುರಾಗಿದೆ. ಧಾರವಾಡದ ಮಾಳಾಪುರ ಬಡಾವಣೆಯಲ್ಲಿ ಪ್ರತಿ ಮಂಗಳವಾರ ಜಾನುವಾರುಗಳ ಸಂತೆ ನಡೆಯುತ್ತೆ. ಆದರೆ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಕಂಡು ಬರುತ್ತಿವೆ. ಯಾಕಂದ್ರೆ ಬರದಿಂದ ಕಂಗಾಲಾಗಿರೋ ರೈತರು ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಸುಗಳನ್ನ ಮಾರುತ್ತಿದ್ದಾರೆ.

ಧಾರವಾಡದಲ್ಲಿ ಮೇವು ಹಾಗೂ ನೀರಿನ ಅಭಾವ ಹೆಚ್ಚಾಗಿದೆ. ಹಾಲು ಕರೆಯುವ ಒಂದು ರಾಸುವಿಗೆ ಮೇವು, ಹಿಂಡಿ, ಬೂಸಾ ಸೇರಿದಂತೆ ಇತರ ಖರ್ಚಿಗೆ 300 ರೂಪಾಯಿ ಖರ್ಚಾಗುತ್ತದೆ. ಆದರೆ ಪ್ರತಿ ದಿನ 6 ರಿಂದ 8 ಲೀಟರ್ ಹಾಲು ಉತ್ಪಾದಿಸಿ ಡೇರಿಗೆ ಮಾರಿದರೆ ಕೇವಲ 250 ರೂಪಾಯಿ ಆದಾಯ ದೊರಕುತ್ತಿದೆ. ಇದರಿಂದ ಹೈನುಗಾರರು ತಮ್ಮ ಹಾಲು ಕರೆಯುವ ಹಸುಗಳನ್ನು ಕೂಡ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಮಾರಾಟಕ್ಕೆ ತಂದರೆ ಅರ್ಧಕ್ಕಿಂತ ಕಡಿಮೆ ಬೆಲೆಗೆ ಕೇಳಲಾಗುತ್ತಿದೆ ಅನ್ನೋದು ರೈತರ ನೋವು.

ಇದನ್ನೂ ಓದಿ: ಮಳೆ ಕೊರತೆ; ಹೊರ ರಾಜ್ಯಗಳಿಗೆ ಮೇವು ಸಾಗಾಟ ನಿಷೇಧಿಸಿದ ಕರ್ನಾಟಕ

ಗ್ರಾಮೀಣ ಭಾಗದಲ್ಲಿ ಜಾನುವಾರು ಸಾಕಿದವರ ಸಮಸ್ಯೆ ಹೇಳತೀರದಾಗಿದೆ. ಹಸುಗಳಿಗೆ ಮೇವು ಇಲ್ಲದೇ ರೈತರು ಪರದಾಡುತ್ತಿದ್ದರೆ. ಮೇವು ಖರೀದಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳೋಣ ಅಂದರೆ ಎಲ್ಲಿಯೂ ಮೇವು ಸಿಗತ್ತಿಲ್ಲ. ಈ ಬಾರಿ ಬರದಿಂದಾಗಿ ರೈತರಲ್ಲಿನ ಆರ್ಥಿಕ ಶಕ್ತಿಯೂ ತೀರಾನೇ ಕುಗ್ಗಿ ಹೋಗಿದೆ. ಹೀಗಾಗಿ ಎತ್ತು, ಎಮ್ಮೆ, ಆಕಳು ಸೇರಿದಂತೆ ಎಲ್ಲ ಬಗೆಯ ಜಾನುವಾರುಗಳನ್ನು ರೈತರು ಸಂತೆಗೆ ತಂದು ಮಾರ್ತಿದ್ದಾರೆ. ಆದ್ರೆ ಹಸುಗಳನ್ನ ಖರೀದಿ ಮಾಡಲು ಜನರು ಮುಂದಾಗುತ್ತಿಲ್ಲ. ಹೀಗಾಗಿ ರೈತರು ದಿಕ್ಕೇ ತೋಚದೆ ಕೂತಿದ್ದಾರೆ. ರೈತರ ಸಂಕಷ್ಟದ ಬಗ್ಗೆ ಉಸ್ತುವಾರಿ ಸಚಿವರನ್ನ ಕೇಳಿದ್ರೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಬೆಳೆ ಸರ್ವನಾಶ ಆಗಿದ್ರೆ, ಇತ್ತ ಸಾಕಿರೋ ಪ್ರಾಣಿಗಳನ್ನು ಉಳಿಸಿಕೊಳ್ಳಲು ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಇನ್ನಾದ್ರೂ ಸರ್ಕಾರ ನೇಗಿಲಯೋಗಿ ಕಣ್ಣೀರು ಒರೆಸಬೇಕಿದೆ.

ಧಾರವಾಡಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ

ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು