ಧಾರವಾಡ: ನಗರದಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕಿಡ್ನ್ಯಾಪ್ ಹೊರಗಿನವರು ಯಾರೋ ರೂಪಿಸಿದ್ದಲ್ಲ ಬದಲಾಗಿ ಅಳಿಯನೇ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಧಾರವಾಡದಲ್ಲಿ ಅಳಿಯನಿಂದಲೇ ಉದ್ಯಮಿ ಮಾವನ ಕಿಡ್ನ್ಯಾಪ್ ಎಂಬುದು ಬಯಲಾಗಿದೆ. ಹೀಗಾಗಿ, ಪ್ರಕರಣದ ಪ್ರಮುಖ ಸೂತ್ರಧಾರ ಅಳಿಯ ಸೇರಿ ಐವರ ಸೆರೆಯಾಗಿದೆ.
ಉದ್ಯಮಿ ಶ್ರೀನಿವಾಸ ನಾಯ್ಡು ಎಂಬವರು ನಿನ್ನೆ ಅಪಹರಣವಾಗಿದ್ದರು. ಅಳಿಯ ಪವನ ವಾಜಪೇಯಿ ಎಂಬಾತ
ಉದ್ಯಮಿ ಶ್ರೀನಿವಾಸ ನಾಯ್ಡು ಅವರನ್ನು ಅಪಹರಿಸಿದ್ದಾನೆ. ಪವನ ವಾಜಪೇಯಿ, ನಾಯ್ಡು ಜತೆ ಸೈಟ್ ನೋಡಲು ಹೋಗಿದ್ದ. ಇದೇ ವೇಳೆ ದುಷ್ಕರ್ಮಿಗಳು ದಾಳಿ ಮಾಡಿ ಅಪಹರಣ ಮಾಡಿದ್ದಾರೆ.
ಬಳಿಕ ಪವನ ವಾಜಪೇಯಿ ಮನೆಗೆ ಬಂದು ಕಿಡ್ನ್ಯಾಪ್ ಸ್ಟೋರಿ ಹೇಳಿದ್ದ. ಅಳಿಯನ ಮೇಲೆ ಪೊಲೀಸರಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ನಿಜ ವಿಚಾರ ಬಯಲಾಗಿದೆ. ಪೊಲೀಸರ ತನಿಖೆ ವೇಳೆ ಅಳಿಯ ಪವನ ಅಪಹರಣದ ಕಹಾನಿ ಬಿಚ್ಚಿಟ್ಟಿದ್ದಾನೆ.
ಕಿಡ್ನ್ಯಾಪ್ ಮಾಡಲು ಪವನ್ಗೆ ಸಹಕಾರ ನೀಡಿದ್ದ ಆಸೀಫ್, ಸಮೀರ್, ಮಂಜುನಾಥ, ಖಲೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್
ಪತ್ನಿ ತಂಗಿ ಮೇಲೆ ಕಣ್ಣು ಹಾಕಿದ ಧಾರವಾಡದ ಸರ್ಕಾರಿ ನೌಕರ; ಅಪಹರಣ ಮಾಡಿಸಲು ಹೋಗಿ ಜೈಲು ಪಾಲು
(Dharwad Kidnap Case got new twist Real Estate Businessman Kidnap)