Dharwad News: ಪ್ರಧಾನಿ ಮೋದಿ ತಾಯಿ ನಿಧನ ಸುದ್ದಿ ಪೋಸ್ಟ್​​ಗೆ ಕೆಟ್ಟದಾಗಿ ಕಾಮೆಂಟ್​​: ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಫೋಟೋಗ್ರಾಫರ್

| Updated By: ವಿವೇಕ ಬಿರಾದಾರ

Updated on: Dec 31, 2022 | 3:21 PM

ಪ್ರಧಾನಿ‌ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರ ನಿಧನದ ಸುದ್ದಿಯ ಕುರಿತು ಅವಮಾನಕರ ಕಾಮೆಂಟ್​​ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲು.

Dharwad News: ಪ್ರಧಾನಿ ಮೋದಿ ತಾಯಿ ನಿಧನ ಸುದ್ದಿ ಪೋಸ್ಟ್​​ಗೆ ಕೆಟ್ಟದಾಗಿ ಕಾಮೆಂಟ್​​: ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಫೋಟೋಗ್ರಾಫರ್
ಫೋಟೋಗ್ರಾಫರ್ ರೆಹಮತ್ ಬೆಟಗೇರಿ
Follow us on

ಧಾರವಾಡ: ಪ್ರಧಾನಿ‌ ನರೇಂದ್ರ ಮೋದಿ (Narendra Modi) ಅವರ ತಾಯಿ ಹೀರಾಬೆನ್​ ಮೋದಿ (Hiraben Modi) ನಿನ್ನೆ (ಡಿ.30) ರಂದು ನಸುಕಿನಜಾವ ನಿಧನರಾದರು. ಈ ನಿಧನದ ಸುದ್ದಿಯ ಕುರಿತು ಪೋಸ್ಟ್​​ ಹಾಕಿದ್ದಕ್ಕೆ, ಅವಮಾನಕರ ಕಾಮೆಂಟ್​​ ಮಾಡಿದ ವ್ಯಕ್ತಿಯ ವಿರುದ್ಧ ಬಿಜೆಪಿ (BJP) ಕಾರ್ಯಕರ್ತರು ಧಾರವಾಡದ (Dharwad) ವಿದ್ಯಾಗಿರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ರೆಹಮತ್ ಬೆಟಗೇರಿ ಅವಮಾನಕರ ಕಾಮೆಂಟ್ ಮಾಡಿದ್ದ ಫೋಟೋಗ್ರಾಫರ್. ಧಾರವಾಡ ಜಿಲ್ಲಾ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ (ಡಿಪಿವಿಎಸ್) ವಾಟ್ಸಪ್​​ ಗ್ರುಪ್​ನಲ್ಲಿ ಮೋದಿ ತಾಯಿ ನಿಧನದ ಸುದ್ದಿ ಕುರಿತು ಪೋಸ್ಟ್​​ ಹಾಕಲಾಗಿತ್ತು.

ಈ ಪೋಸ್ಟ್​​ಗೆ ರೆಹಮತ್ ಬೆಟಗೇರಿ ಅವಮಾನಕರ ಕಾಮೆಂಟ್ ಮಾಡಿದ್ದನು. ಈ ಹಿನ್ನೆಲೆ ರೆಹಮತ್​ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಲೆ ಪೊಲೀಸರು ರೆಹಮತ್​ನನ್ನು ಠಾಣೆಗೆ ಕರೆತಂದಿದ್ದಾರೆ. ನಂತರ ರೆಹಮತ್ ಪೊಲೀಸರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇನ್ನೂ ಡಿಪಿವಿಎಸ್ ಅಧ್ಯಕ್ಷ ರೆಹಮತ್​​ನನ್ನು ಸಂಘದಿಂದ ಒಂದು ವರ್ಷ ಅಮಾನತು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Sat, 31 December 22