ಧಾರವಾಡ: ಜಿಲ್ಲೆಯ 110 ಕೆ.ವಿ. ದಾಸ್ತಿಕೊಪ್ಪ ಕಲಘಟಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ (Kalghatgi Power Distribution Station) ಜೂನ್ 22 (ಗುರುವಾರ) ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 1 ನೇ ತ್ರೈಮಾಸಿಕ ಕಾಮಗಾರಿಯನ್ನು ಕೈಗೊಳ್ಳಲಿದೆ. ಪರಿಣಾಮ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಜೂನ್ 22 (ಗುರುವಾರ) ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ.
ದಾಸ್ತಿಕೊಪ್ಪ, ಕಲಘಟಗಿ, ಹಿರೇಹೊನ್ನಳ್ಳಿ, ಧೂಳಿಕೊಪ್ಪ, ಬೇಗೂರ್, ಹುಲ್ಲಂಬಿ , ಬಿಸರಳ್ಳಿ, ಗಳಗಿನಗಟ್ಟಿ, ಕಾಮಧೇನು, ರಾಮನಾಳ, ಹರೋಗೇರಿ, ಮಡಕಿಹೊನ್ನಳ್ಳಿ, ಸಂಗಿದೇವರಕೊಪ್ಪ, ಬಗಡಗೇರಿ, ಹಿಂಡಸಗೇರಿ, ಮಲಕನಕೊಪ್ಪ, ಜಿನ್ನೂರ್, ದ್ಯಾವನಕೊಂಡ, ಹುಣಸಿಕಟ್ಟಿ, ಬಿದರಗಡ್ಡಿ, ಬೆಲವಂತರ, ಶಿವನಾಪುರ, ಹನುಮಾಪುರ, ಸೋಮನಕೊಪ್ಪ, ಮುಕ್ಕಲ, ಬಮ್ಮಿಗಟ್ಟಿ, ಆಲದಕಟ್ಟಿ, ತಾವರಗೇರಿ, ಅರಳಿಹೊಂಡ, ನೆಲ್ಲಿಹರವಿ, ಎಲುಬನಾಳ, ಗರಡಹೊನ್ನಳ್ಳಿ, ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ