ಮೊದಲ ಪತ್ನಿ ಬಳಿ ಹೋಗ ಬೇಡ ಎಂದು ತಕರಾರು; ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆಗೆ ಯತ್ನಿಸಿದ ರಾಮ ಸೇನೆ ಜಿಲ್ಲಾಧ್ಯಕ್ಷ

ವಿಜಯ್ ಕದಂ ಹಾಗೂ ಪದ್ಮಾ ಬೆಟಗೇರಿ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಆದ್ರೆ ಪದ್ಮಾ, ವಿಜಯ್ನನ್ನು ಆತನ ಮೊದಲ ಪತ್ನಿ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಹಾಗೂ ಮೊದಲನೇ ಪತ್ನಿ ಬಳಿ ಹೋಗದಂತೆ ಪದ್ಮಾ ಕಿರಿಕಿರಿ ಮಾಡ್ತಿದ್ದಳಂತೆ.

ಮೊದಲ ಪತ್ನಿ ಬಳಿ ಹೋಗ ಬೇಡ ಎಂದು ತಕರಾರು; ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆಗೆ ಯತ್ನಿಸಿದ ರಾಮ ಸೇನೆ ಜಿಲ್ಲಾಧ್ಯಕ್ಷ
ಮೊದಲ ಪತ್ನಿ ಬಳಿ ಹೋಗ ಬೇಡ ಎಂದು ತಕರಾರು; ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆಗೆ ಯತ್ನಿಸಿದ ರಾಮ ಸೇನೆ ಜಿಲ್ಲಾಧ್ಯಕ್ಷ
Follow us
TV9 Web
| Updated By: ಆಯೇಷಾ ಬಾನು

Updated on:Jul 13, 2022 | 6:59 PM

ಧಾರವಾಡ: ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆ ಮಾಡಲು ಯತ್ನ ನಡೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ರಾಮ ಸೇನೆಯ ಜಿಲ್ಲಾಧ್ಯಕ್ಷ ವಿಜಯ್ ಕದಂ ಅಟ್ಯಾಕ್ ಮಾಡಿಸಿದ್ದಾರೆ ಎನ್ನಲಾಗಿದೆ. ವಿಜಯ್ ಕದಂ ಸೋನಾಪುರ ಬಡಾವಣೆಯಲ್ಲಿ ಪದ್ಮಾ ಬೆಟಗೇರಿ ಹತ್ಯೆಗೆ ಯತ್ನಿಸಿದ್ದಾರೆ.

ವಿಜಯ್ ಕದಂ ಹಾಗೂ ಪದ್ಮಾ ಬೆಟಗೇರಿ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಆದ್ರೆ ಪದ್ಮಾ, ವಿಜಯ್ನನ್ನು ಆತನ ಮೊದಲ ಪತ್ನಿ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಹಾಗೂ ಮೊದಲನೇ ಪತ್ನಿ ಬಳಿ ಹೋಗದಂತೆ ಪದ್ಮಾ ಕಿರಿಕಿರಿ ಮಾಡ್ತಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಕೋಪಗೊಂಡಿದ್ದ ವಿಜಯ್ನಿಂದ ಪದ್ಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪದ್ಮಾಳನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೃತ್ಯದ ಬಳಿಕ ವಿಜಯ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಈ ಘಟನೆಗೂ ಮುನ್ನ ಇಬ್ಬರ ನಡುವೆ ಜಗಳ ಶುರುವಾಗಿತ್ತು. ನೀನು ಮನೆಗೆ ಬರಬೇಡ ಅಂತಾ ಪದ್ಮಾ ತಾಕೀತು ಮಾಡಿದ್ದಳು. ಕೈಯಲ್ಲಿ ಚಾಕು ಹಿಡಿದು ಹೊರ ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಳು. ಬೆದರಿಕೆಯೊಡ್ಡಿದ ದೃಶ್ಯಗಳನ್ನು ವಿಜಯ್ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಇಬ್ಬರ ಸಾವು ಬೆಂಗಳೂರಿನ ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್​ ಗೋಡೆ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಪೊಲೀಸರು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುತ್ತಿದ್ದಾರೆ.

ವಿಚ್ಛೇದನಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ ವಿವಾಹ ವಿಚ್ಛೇದನಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದಿದೆ. ಅನಿತಾ(25)ಮೃತ ದುರ್ದೈವಿ. ಒಂದೂವರೆ ವರ್ಷದ ಗಂಡು ಮಗುವನ್ನು ಆಟ ಆಡಲು ಕೂರಿಸಿ ಮನೆಯ ರೂಂನ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ವರ್ಷದ ಹಿಂದೆ ಬೆಂಗಳೂರಿನ ಅಮೃತಹಳ್ಳಿಯ ಪ್ರದೀಪ್ ಜೊತೆ ಲವ್ ಮ್ಯಾರೇಜ್ ಆಗಿದ್ದ ಮಹಿಳೆ ಮೃತಪಟ್ಟಿದ್ದಾರೆ.

ಮದುವೆಯಾದ 6 ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಅತ್ತೆ ಪ್ರೇಮ ಜೊತೆ ಪತಿ ಪ್ರದೀಪ್ ಜೈಲು ಪಾಲಾಗಿದ್ರು. ಬಳಿಕ ಬೇಲ್ ಮೇಲೆ ಬಂದು ರಾಜಿ ಪಂಚಾಯತಿ ಆಗಿತ್ತು. ಬಳಿಕ ಒಂದಾದ ಸಂಸಾರದಲ್ಲಿ ಒಂದು ಮುದ್ದಾದ ಗಂಡು ಮಗುವಿನ ಆಗಮನವಾಗಿತ್ತು. ಆದ್ರೆ ಮತ್ತೆ ಎರಡು ಕುಟುಂಬಸ್ಥರ ಪರ ವಿರೋಧದ ಕಿರಿಕ್ ಶುರುವಾಗಿದೆ. ಬಲವಂತವಾಗಿ ಇಬ್ಬರು ಕಡೆಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದ್ದು ಫ್ಯಾಮಿಲಿ ಕೋರ್ಟ್ ನಲ್ಲಿ ನಾಳೆಯೇ ಜಡ್ಜ್ ಮೆಂಟ್ ಇತ್ತು. ಜಡ್ಜ್ ಮೆಂಟ್ ಗೆ ಹೆದರಿ ಮಾನಸಿಕವಾಗಿ ನೊಂದು ಮನೆಯಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಟ್ಟಡ ನಿರ್ಮಾಣದ ವೇಳೆ ಅವಘಡ, ಕೂಲಿ ಕೆಲಸ ಮಾಡುತ್ತಿದ್ದ ಯುವತಿ ಸಾವು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ಕಟ್ಟಡ ನಿರ್ಮಾಣದ ವೇಳೆ ಅವಘಡ ಸಂಭವಿಸಿದ್ದು ಕೂಲಿ ಕೆಲಸ ಮಾಡುತ್ತಿದ್ದ ಯುವತಿ ಮೃತಪಟ್ಟಿದ್ದಾರೆ. ಚಿಕ್ಕತಿರುಪತಿ ಮೂಲದ ದಿವ್ಯಾ ಮೃತ ದುರ್ದೈವಿ. ಕಳೆದ ಒಂದು ವಾರದ ಹಿಂದೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿದ್ದ ಯುವತಿ, ಎರಡನೇ ಮಹಡಿಯಲ್ಲಿ ಶೇಖರಿಸಿ ಇಡಲಾಗಿದ್ದ ಸಿಮೆಂಟ್ ಇಟ್ಟಿಗೆಗಳು ತಲೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಯುವತಿಯನ್ನು ಬೇಗೂರಿನ ಜಯಶ್ರೀ ಆಸ್ಪತ್ರೆಗೆ ರವಾನಿಸಲಾಗಿದ್ದು ತಲೆಯ ಭಾಗಕ್ಕೆ ತೀವ್ರತರವಾದ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 5:35 pm, Wed, 13 July 22