ಧಾರವಾಡ: ರಾಜ್ಯದಲ್ಲಿ ಕೆಲ ಕೃಷಿ ವಿಶ್ವವಿದ್ಯಾಲಯಗಳು ಕೇವಲ ಸಂಶೋಧನೆ ಮತ್ತು ಪಾಠ ಪ್ರವಚನಕ್ಕೆ ಮಾತ್ರ ಸಿಮೀತವಾಗಿವೆ. ಆದ್ರೆ ಬಿಸಿಲನಾಡು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮಾತ್ರ ವಿಭಿನ್ನ ರೀತಿಯಲ್ಲಿ ರೈತರಿಗೆ ಆಸರೆ ಆಗುವ ಮೂಲಕ ಅನ್ನದಾತರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶಾದ್ಯಂತ ಕಠಿಣ ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಮಾರಾಟವಾಗದೇ ಹಾಳಾಗಿದ್ದ ಅನೇಕ ಉದಾಹರಣೆಗಳಿವೆ. ಅದರಲ್ಲೂ ವಿಶೇಷವಾಗಿ ಈರುಳ್ಳಿ ಬೆಳೆ ಮಾರಾಟವಾಗದೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ರೈತರ ಜಮೀನಿನಲ್ಲೇ ಹಾಳಾಗಿತ್ತು.
ರೈತರಿಗಾಗಿ ತೆರೆದ ಅಗ್ರಿ ವಾರ್ ರೂಮ್:
ಇದೊಂದೆ ಅಲ್ಲದೇ ರೈತರು ಬೆಳೆದಿದ್ದ ಮೂಸಂಬಿ, ದಾಳಿಂಬೆ, ಪಪ್ಪಾಯಿ ಹಣ್ಣುಗಳನ್ನ ಹೈದ್ರಾಬಾದಿನ ವ್ಯಾಪಾರಿಗಳಿಗೆ ಸಂಪರ್ಕಿಸಿ ರೈತರು ಬೆಳೆದೆ ಹಣ್ಣುಗಳನ್ನು ಖರೀದಿಸುವ ಮೂಲಕ ಕೃಷಿ ಅಗ್ರಿ ವಾರ್ ರೂಮ್ ಸಿಬ್ಬಂದಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಜಿಲ್ಲೆಯಾದ್ಯಂತ ಬೆಳೆಯಲಾಗಿದ್ದ ಲಕ್ಷಾಂತರ ಟನ್ ಮೆಣಸಿನಕಾಯಿ ಬೆಳೆ ಸಹ ಮಾರಾಟವಾಗದೇ ರೈತರು ಕಂಗಾಲಾಗಿದ್ದರು. ಸಾವಿರಾರು ಮೂಟೆಗಳು ಜಿಲ್ಲೆಯ ವಿವಿಧೆಡೆ ಕೋಲ್ಡ್ ಸ್ಟೋರೇಜ್ನಲ್ಲಿ ಬಂಧಿಯಾಗಿದ್ದವು.
ಅನ್ನದಾತರ ಮೆಚ್ಚುಗೆ ಪಾತ್ರವಾದ ರಾಯಚೂರು ಕೃಷಿ ವಿಶ್ವವಿದ್ಯಾಲಯ:
Published On - 2:07 pm, Thu, 4 June 20