ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಮತ್ತೊಂದು ಎಡವಟ್ಟು? ವೈದ್ಯರ ನಿರ್ಲಕ್ಷ್ಯಕ್ಕೆ ಮುದ್ದಾದ ಮಗು ಬಲಿ

| Updated By: ಆಯೇಷಾ ಬಾನು

Updated on: Feb 18, 2022 | 12:05 PM

ಸಂಜಯ್ ಹಾಗೂ ಕೀರ್ತಿ ದಂಪತಿಯ ಮುದ್ದಾದ ಮಗು ರಕ್ಷಾ ಚೌಧರಿಗೆ ಬಾಯಿಯೊಳಗೆ ಗಡ್ಡೆಯಾಗಿದ್ದ ಕಾರಣ ಕಂದಮ್ಮನನ್ನು ಪೋಷಕರು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆದ್ರೆ ಪೋಷಕರ ಅನುಮತಿ ಪಡೆಯದೇ ವೈದ್ಯರು ಮಗುವಿಗೆ ಆಪರೇಷನ್ ಮಾಡಿದ್ದಾರೆ. ಅಪರೇಷನ್ ಬಳಿಕ ತೀವ್ರ ರಕ್ತಸ್ರಾವ ಆಗಿ ಮಗು ಪ್ರಾಣ ಬಿಟ್ಟಿದೆ.

ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಮತ್ತೊಂದು ಎಡವಟ್ಟು? ವೈದ್ಯರ ನಿರ್ಲಕ್ಷ್ಯಕ್ಕೆ ಮುದ್ದಾದ ಮಗು ಬಲಿ
ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಮತ್ತೊಂದು ಎಡವಟ್ಟು? ವೈದ್ಯರ ನಿರ್ಲಕ್ಷ್ಯಕ್ಕೆ ಮುದ್ದಾದ ಮಗು ಬಲಿ
Follow us on

ಹುಬ್ಬಳ್ಳಿ: ವೈದ್ಯರನ್ನು ಭೂಮಿ ಮೇಲಿರುವ ಜೀವ ಉಳಿಸುವ ದೇವರು ಎಂದು ಅದೆಷ್ಟೋ ಜನ ಪೂಜಿಸ್ತಾರೆ. ಆದ್ರೆ ಅದೇ ವೈದ್ಯರು ಮಾಡುವ ಚಿಕ್ಕ ತಪ್ಪಿನಿಂದ ಇಡೀ ಕುಟುಂಬ ಕಣ್ಣೀರಿನಲ್ಲೇ ಬಾಳುವಂತ ಪರಿಸ್ಥಿತಿಗಳು ಎದುರಾಗುತ್ತವೆ. ಸದ್ಯ ಕಿಮ್ಸ್ ವೈದ್ಯರಿಂದ(Hubli KIMS Hospital) ಮತ್ತೊಂದು ಮಹಾ ಎಡವಟ್ಟು ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ(Doctors Negligence) ಎರಡು ವರ್ಷದ ಮಗು ಬಲಿಯಾಗಿದೆ. ರಕ್ಷಾ ಚೌಧರಿ (2) ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಂಡ ಮಗು.

ಸಂಜಯ್ ಹಾಗೂ ಕೀರ್ತಿ ದಂಪತಿಯ ಮುದ್ದಾದ ಮಗು ರಕ್ಷಾ ಚೌಧರಿಗೆ ಬಾಯಿಯೊಳಗೆ ಗಡ್ಡೆಯಾಗಿದ್ದ ಕಾರಣ ಕಂದಮ್ಮನನ್ನು ಪೋಷಕರು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆದ್ರೆ ಪೋಷಕರ ಅನುಮತಿ ಪಡೆಯದೇ ವೈದ್ಯರು ಮಗುವಿಗೆ ಆಪರೇಷನ್ ಮಾಡಿದ್ದಾರೆ. ಅಪರೇಷನ್ ಬಳಿಕ ತೀವ್ರ ರಕ್ತಸ್ರಾವ ಆಗಿ ಮಗು ಪ್ರಾಣ ಬಿಟ್ಟಿದೆ. ಅಡ್ಮಿಟ್ ಆಗುವ ವೇಳೆ ಚೆನ್ನಾಗಿಯೇ ಇದ್ದ ಕಂದಮ್ಮ ಸರ್ಜರಿ ಬಳಿಕ ರಕ್ತಸ್ರಾವದಿಂದ ಮೃತಪಟ್ಟಿದೆ. ನಗು ನಗುತ್ತಲೇ ಮಗು ಆಸ್ಪತ್ರೆಗೆ ಅಡ್ಮಿಟ್ ಆಗಿತ್ತು. ಆಸ್ಪತ್ರೆಯ ಬೆಡ್ ಮೇಲೆ ನಗುತ್ತಾ ಆಟವಾಡಿತ್ತು ಈಗ ಈ ರೀತಿ ಕಣ್ಣು ಮುಚ್ಚಿಕೊಂಡಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಇನ್ನು ವೈದ್ಯರು ಆಪರೇಷನ್ ಮಾಡಿದ ಬಳಿಕ ತೀವ್ರ ರಕ್ತಸ್ರಾವ ಆದ ಕಾರಣ ಖಾಗಗಿ ಆಸ್ಪತ್ರೆಗೆ ಮಗುವನ್ನು ಕಳುಹಿಸಲಾಗಿತ್ತು. ಅಲ್ಲಿಯೂ ರಕ್ತಸ್ರಾವ ನಿಲ್ಲದ ಹಿನ್ನಲೆ‌ ವಾಪಸ್ ಕಿಮ್ಸ್ಗೆ ಕಳಿಸಿದ್ದಾರೆ. ಕಿಮ್ಸ್ಗೆ ವಾಪಸ್ ಬಂದ ಮೇಲೆ ಮಗು ಉಸಿರು ನಿಲ್ಲಿಸಿದೆ. ಕಿಮ್ಸ್ ಬಳಿ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುದ್ದಾದ ಮಗು ಕಳೆದುಕೊಂಡ ತಾಯಿಯ ಕಣ್ಣೀರು ನಿಲ್ಲುತಿಲ್ಲ.

ನಮ್ಮ ತಪ್ಪೇನು ಇಲ್ಲ ಅಂತ ವೈದ್ಯರು ಹೇಳ್ತಿದ್ದಾರೆ
ಎರಡೂ ವರ್ಷ ನಾಲ್ಕು ತಿಂಗಳ‌ ಮಗು, ಮೊದಲೆ ವೈದ್ಯರು ನಮಗೆ ಸೂಚಿಸಿದ್ದರು‌, ಆ ಪ್ರಕಾರ ನಾವು ಕಿಮ್ಸ್ ಅಡ್ಮಿಟ್ ಮಾಡಿದ್ದೆವು. ನಮ್ಮ ಮಗು ಆರೋಗ್ಯವಾಗಿತ್ತು. ಆದ್ರೆ ಏಕಾಏಕಿ ಮಗು ಸಾವನ್ನಪಿದೆ ಅಂತ ವೈದ್ಯರು ತಿಳಿಸಿದ್ದಾರೆ. ಇದು ನಮಗೆ ನಂಬಲಾಗುತ್ತಿಲ್ಲ. ಇವಾಗ ಕೇಳಿದ್ರೆ ನಮ್ಮ ತಪ್ಪೇನು ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಮಗು ಸಾವನ್ನಪ್ಪಿದ್ದಾರು ಹೇಗೆ? ಎಂದು ಮಗುವಿನ ತಾಯಿ ಕೀರ್ತಿ ಚೌಧರಿ ಕಣ್ಣೀರು ಹಾಕುತ್ತ ಪ್ರಶ್ನೆ ಮಾಡಿದ್ದಾರೆ.

ಆಸ್ಪತ್ರೆಗೆ ಬಂದ ಮೇಲೆ ಮಗು ಚೆನ್ನಾಗಿದೆ ಅಂತ ವೈದ್ಯರು ತಿಳಿಸಿದ್ದರು. ನಮ್ಮ ಅನುಮತಿ ಪಡೆಯದೆ ಮಗುವಿಗೆ ಸರ್ಜರಿ ಮಾಡಿದ್ದಾರೆ. ಬಳಿಕ ತೀವ್ರರಕ್ತಸ್ರಾವವಾಗಿದೆ. ಅದಕ್ಕೆ ಹೊಣೆ ಯಾರು? ಮೊದಲೆ ಹೀಗೆ ಆಗುತ್ತೆ ಎನ್ನೋದು ವೈದ್ಯರಿಗೆ ಗೊತ್ತಿರಲಿಲ್ಲವೇ. ಇವಾಗ ಕೇಳಿದ್ರೆ ಹ್ಯಾಮೆನ್ ಜಿಯೊಮ್ ಕಾಯಿಲೆ ಇತ್ತು‌ ಎನ್ನುತ್ತಿದ್ದಾರೆ ಎಂದು ಮಗು ತಂದೆ ಸಂಜಯ್ ಚೌಧರಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ- ಅಬು ಧಾಬಿ ದೊರೆ ನಡುವೆ ದ್ವಿಪಕ್ಷೀಯ ಸಂಬಂಧ ಶೃಂಗಸಭೆ ಇಂದು

ಕಿಮ್ಸ್ ವಿದ್ಯಾರ್ಥಿನಿ 70 ಲಕ್ಷ ಫೀಸ್ ಸ್ವಂತಕ್ಕೆ ಬಳಕೆ: ಒಕ್ಕಲಿಗರ ಸಂಘದ ಇಬ್ಬರು ಮಾಜಿ ಅಧ್ಯಕ್ಷರ ವಿರುದ್ಧ ಎಫ್ ಐಆರ್ ದಾಖಲು

Published On - 11:52 am, Fri, 18 February 22