ಕಿಮ್ಸ್ ವಿದ್ಯಾರ್ಥಿನಿ 70 ಲಕ್ಷ ಫೀಸ್ ಸ್ವಂತಕ್ಕೆ ಬಳಕೆ: ಒಕ್ಕಲಿಗರ ಸಂಘದ ಇಬ್ಬರು ಮಾಜಿ ಅಧ್ಯಕ್ಷರ ವಿರುದ್ಧ ಎಫ್ ಐಆರ್ ದಾಖಲು

ಕಿಮ್ಸ್ ವಿದ್ಯಾರ್ಥಿನಿ 70 ಲಕ್ಷ ಫೀಸ್ ಸ್ವಂತಕ್ಕೆ ಬಳಕೆ: ಒಕ್ಕಲಿಗರ ಸಂಘದ ಇಬ್ಬರು ಮಾಜಿ ಅಧ್ಯಕ್ಷರ ವಿರುದ್ಧ ಎಫ್ ಐಆರ್ ದಾಖಲು
ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿನಿ 70 ಲಕ್ಷ ಫೀಸ್ ಸ್ವಂತಕ್ಕೆ ಬಳಕೆ: ಒಕ್ಕಲಿಗರ ಸಂಘದ ಇಬ್ಬರು ಮಾಜಿ ಅಧ್ಯಕ್ಷ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕಾಳೇಗೌಡ ಮತ್ತು ಅಪ್ಪಾಜಿಗೌಡ ಸೇರಿದಂತೆ ಒಟ್ಟು ಮೂವರ ವಿರುದ್ಧ ವಿವಿಪುರಂ‌ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಕಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು ಪಾವತಿಸಿದ್ದ 70 ಲಕ್ಷ ರೂಪಾಯಿ ಶುಲ್ಕವನ್ನು ಸ್ವಂತಕ್ಕೆ ಬಳಕೆ ಮಾಡಿಕೊಮಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಯು ಕಟ್ಟಿದ್ದ ಶುಲ್ಕವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡ ಕಿಮ್ಸ್ ಕಾಲೇಜಿನ ಮಾಜಿ ಅಧ್ಯಕ್ಷ ಕಾಳೇಗೌಡ,  ಅಪ್ಪಾಜಿಗೌಡ ಸೇರಿದಂತೆ ಒಟ್ಟು ಮೂವರ ವಿರುದ್ಧ ಕಿಮ್ಸ್ ನ ಸಿಇಒ ಸಿದ್ದರಾಮಯ್ಯ ವಿವಿಪುರಂ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ವಿವಿಪುರಂ ಪೊಲೀಸ್ರು ಸಿಇಒ‌ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ:
ಡಾ. ಅನುಷಾ ದೀಪ್ತಿ ಎಂಬ ವಿದ್ಯಾರ್ಥಿನಿ ಕಿಮ್ಸ್ ನಲ್ಲಿ ಪ್ರಸೂತಿ ಹಾಗೂ ಸ್ತೀರೋಗ ಕೋರ್ಸ್ ವ್ಯಾಸಾಂಗ ಮಾಡುತ್ತಿದ್ದರು. 2016 -17 ರಲ್ಲಿ ಫೀಸ್ ಕಟ್ಟದ ಅನುಷಾಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದ ಕಾರಣ 70 ಲಕ್ಷ ರೂ. ಹಣವನ್ನ ಅಂದಿನ ಚೇರ್ಮನ್ ಕಾಳೇಗೌಡಗೆ ಅನುಷಾ ನೀಡಿದ್ದರು. ಆದರೆ ಅನುಷಾ ನೀಡಿದ್ದ ಹಣವನ್ನ ಕಾಲೇಜ್ ಗೆ ಸಂದಾಯ ಮಾಡದ ಅಂದಿನ ಚೇರ್ಮನ್ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:
ಕಿಮ್ಸ್​ ಆಸ್ಪತ್ರೆಗೆ ಲಕ್ಷ್ಯ ರಾಷ್ಟ್ರೀಯ ಪುರಸ್ಕಾರ; ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಮಾನ್ಯತೆ

ಇದನ್ನೂ ಓದಿ:
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಪ್ರಕರಣ; ಟಿವಿ9 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಕೆ.ಸುಧಾಕರ್

 

Read Full Article

Click on your DTH Provider to Add TV9 Kannada