Crime News: ಬಾಗಲಗುಂಟೆಯಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ; ಕಾರು, 3 ಮೊಬೈಲ್, ಚೆಕ್ಗಳು ಜಫ್ತಿ
ದಾಳಿ ವೇಳೆ ಪೊಲೀಸರು 4 ಲಕ್ಷ ರೂಪಾಯಿ ನಗದು, ಕಾರು, 3 ಮೊಬೈಲ್ ಫೋನ್ ಮತ್ತು ಚೆಕ್ಗಳನ್ನು ಜಪ್ತಿ ಮಾಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೃಹತ್ ಮಟ್ಟದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಜನರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಪೀಣ್ಯ 8ನೇ ಮೈಲಿ ಬಳಿಯ ಕೆಂಪೇಗೌಡ ನಗರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂಜು ಅಡ್ಡೆಗೊಸ್ಕರವೇ ಶೆಡ್ ಬಾಡಿಗೆ ಪಡೆದು ಆಡಲಾಗುತ್ತಿತ್ತು. ಅಲ್ಲದೇ ಎಂಟ್ರಿ ಫೀಜ್ 500 ಕೊಟ್ಟರೆ ಮಾತ್ರ ಅಡ್ಡೆಗೆ ಪ್ರವೇಶ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಪೊಲೀಸರು 4 ಲಕ್ಷ ರೂಪಾಯಿ ನಗದು, ಕಾರು, 3 ಮೊಬೈಲ್ ಫೋನ್ ಮತ್ತು ಚೆಕ್ಗಳನ್ನು ಜಪ್ತಿ ಮಾಡಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸುಭಾಷ್, ಅನಿಸ್, ರಂಗನಾಥ, ಚಂದ್ರಶೇಖರ್ ಸೇರಿದಂತೆ 14 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಬಂಧನ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ನವೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ಬಂಧಿತ ವ್ಯಕ್ತಿಯಿಂದ 15 ಲಕ್ಷ ರೂ. ನಗದು, ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ನಿನ್ನೆ ನಡೆದ ಹೈದರಾಬಾದ್ ಮತ್ತು ಚೆನ್ನೈ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಹಿಂದೆ ನಡೆದ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯಗಳಿಗೂ ಬೆಟ್ಟಿಂಗ್ ನಡೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೈಸೂರು: ನರಸೀಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಮೈಸೂರು ಜಿಲ್ಲೆಯ ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಎಸ್ಪಿ ಚೇತನ್ ತಂಡ ರಚನೆ ಮಾಡಿದ್ದರು. ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಮಂಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ನರಸೀಪುರ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 2 ಟಾಟಾ ಏಸ್ ವಾಹನ, ಒಂದು ಬೈಕ್ ಹಾಗೂ ಪೈಪ್ಗಳು ವಶಕ್ಕೆ ಪಡೆಯಲಾಗಿದೆ. ನಾಗೇಂದ್ರ, ರಾಜು, ಅಬ್ದುಲ್ಲಾ, ಯಾಸಿರ್, ತಬ್ರೆಷ್ ಬಂಧಿತ ಆರೋಪಿಗಳು.
ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೋದೂರಿನ ಟೋಲ್ ಪ್ಲಾಜಾ ಬಳಿ ನಡೆದಿದೆ. ಆಹಾರ ಇಲಾಖೆ ನಿರೀಕ್ಷಕ ನಿತಿನ್ ಅಗ್ನಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, 340 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಗಂಗಾವತಿಯಿಂದ ಗುಜರಾತ್ಗೆ ಹೊರಟಿದ್ದ ಲಾರಿ ವಶಕ್ಕೆ ಪಡೆದಿದ್ದು, ಸುಮಾರು 8.10 ಲಕ್ಷ ರೂಪಾಯಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಸದ್ಯ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಚಾಲಕ ಮದನಲಾಲ್ನನ್ನು ಬಂಧಿಸಲಾಗಿದ್ದು, ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೂಜು ಅಡ್ಡೆಯಾಗಿರುವ ಮಲೆ ಮಹದೇಶ್ವರ ಬೆಟ್ಟ! ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿರುವ ಶಂಕೆ
ಹಾವೇರಿ: ಜೂಜುಕೋರರ ವಿರುದ್ಧ ಕೇಸ್ ದಾಖಲಿಸದ ಪೊಲೀಸ್ ಸಿಬ್ಬಂದಿ ಅಮಾನತು
Published On - 8:57 am, Fri, 1 October 21