ಹಾವೇರಿ: ಜೂಜುಕೋರರ ವಿರುದ್ಧ ಕೇಸ್ ದಾಖಲಿಸದ ಪೊಲೀಸ್ ಸಿಬ್ಬಂದಿ ಅಮಾನತು
ಸೆಪ್ಟೆಂಬರ್ 10ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸರು ₹8 ಲಕ್ಷ, 11 ಮೊಬೈಲ್ ಫೋನ್ ಮತ್ತು 6 ಬೈಕ್ ಜಪ್ತಿ ಮಾಡಿದ್ದರು.
ಹಾವೇರಿ: ಜೂಜುಕೋರರ ವಿರುದ್ಧ ಕೇಸ್ ದಾಖಲಿಸದ ಹಾವೇರಿ ಜಿಲ್ಲೆ ಶಿಗ್ಗಾಂವಿ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಹಾವೇರಿ ಎಸ್ಪಿ ಹನುಮಂತರಾಯ ಆದೇಶಿಸಿದ್ದಾರೆ. ಪಿಎಸ್ಐ ಕೆ.ಎನ್.ಹಳ್ಳಿಯವರ, ಎಎಸ್ಐ ಆರ್.ಹೆಚ್.ಸಂಗೊಳ್ಳಿ ಮತ್ತು ಹೆಡ್ ಕಾನ್ಸ್ಟೇಬಲ್ ಎಂ.ಎಸ್.ಸೂರಗೊಂಡ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಸೆಪ್ಟೆಂಬರ್ 10ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸರು ₹8 ಲಕ್ಷ, 11 ಮೊಬೈಲ್ ಫೋನ್ ಮತ್ತು 6 ಬೈಕ್ ಜಪ್ತಿ ಮಾಡಿದ್ದರು. ಜಪ್ತಿ ಮಾಡಿದ್ದರೂ ಪ್ರಕರಣ ದಾಖಲಿಸದ ಹಿನ್ನೆಲೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಪ್ರವಾಸಿಗನೋರ್ವ ಸಮುದ್ರ ಪಾಲು ಕಾರವಾರ: ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರದ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವನ್ನಳ್ಳಿ ಕಡಲ ತೀರದಲ್ಲಿ ನಡೆದಿದೆ. ಸುಬ್ಬುಗೌಡ(42) ಎಂಬುವವರೇ ಅಲೆ ಅಪ್ಪಳಿಸಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ದುರ್ದೈವಿ. ಸುಬ್ಬುಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿದ್ದರು. ಸ್ನೇಹಿತರ ಜತೆಗೆ ಪ್ರವಾಸಕ್ಕೆಂದು ಕುಮಟಾದ ವನ್ನಳ್ಳಿ ಸಮುದ್ರ ತೀರಕ್ಕೆ ಬಂದಿದ್ದರು. ಆದರೆ ದುರದೃಷ್ಟವಷಾತ್ ಅವರು ಸಮುದ್ರ ಪಾಲಾಗಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಬ್ಬೀ ಸಮುದ್ರದಲ್ಲಿ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರ ರಕ್ಷಣೆ ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಅರಬ್ಬೀ ಸಮುದ್ರದ 35 ನಾಟಿಕಲ್ ಮೈಲಿ ದೂರದಲ್ಲಿ IND-KA 02 MM 4294 ‘ಸಾಗರ್ ಸಾಮ್ರಾಟ್’ ಮೀನುಗಾರರ ದೋಣಿ ಕೆಟ್ಟು ನಿಂತಿತ್ತು. ಮೀನುಗಾರರನ್ನು ರಕ್ಷಿಸಿ ಉಡುಪಿ ಜಿಲ್ಲೆಯ ಮಲ್ಪೆಗೆ ಕರೆ ತರಲಾಗಿದೆ. ರೋಪ್ ಹಾಕಿ ಎಳೆದು ಮೀನುಗಾರರ ದೋಣಿಯನ್ನು ಸಹ ಎಳೆದುತರಲಾಗಿದೆ.
ಇದನ್ನೂ ಓದಿ:
ಅಪರಾಧ ಸುದ್ದಿಗಳು: ಬೆಂಗಳೂರಿನಲ್ಲಿ ಹೆಚ್ಚಿದ ಪೆಟ್ರೋಲ್ ಕಳ್ಳರ ಹಾವಳಿ
ಗುಜರಿ ವಸ್ತುಗಳಿಂದಲೇ ನಿರ್ಮಾಣವಾಯ್ತು 14 ಅಡಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ!
(Haveri 3 police suspended who did not filed a case against gamblers)
Published On - 8:09 pm, Wed, 15 September 21