ಹುಬ್ಬಳ್ಳಿ: ಸಾಮಾನ್ಯವಾಗಿ ಜನರು ತಮ್ಮ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಕೆಲವರು ಅದ್ದೂರಿಗಾಗಿ ಆಚರಿಸಿಕೊಂಡರೆ, ಇನ್ನು ಕೆಲವರು ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಪ್ರೀತಿಯಿಂದ ಸಾಕಿದ ಶ್ವಾನಗಳಿಗೆ ಬರ್ತ್ ಡೇ ಮಾಡಿರುವುದು ಕೇಳಿದ್ದೇವೆ. ಆದರೆ ಜಿಲ್ಲೆಯಲ್ಲಿ ರೈತರೊಬ್ಬರು ತಾನು ಸಾಕಿದ ಎರಡು ಎತ್ತುಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಎತ್ತುಗಳ ಜನ್ಮದಿನ ಆಚರಿಸುವ ಮೂಲಕ ರೈತ ಗಮನ ಸೆಳೆದಿದ್ದಾರೆ.
ಸುಳ್ಳ ಗ್ರಾಮದಲ್ಲಿ ರೈತ ಕಲ್ಲಪ್ಪ ಐಹೊಳೆ ಎಂಬುವವರು ಜೋಡೆತ್ತುಗಳ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಹಿರೇಮಠದ ಶಿವ ಸಿದ್ದ ರಾಮೇಶ್ವರ ಶ್ರೀಗಳಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಎತ್ತುಗಳ ಹುಟ್ಟುಹಬ್ಬಕ್ಕೆ ಗ್ರಾಮವೇ ಸಾಕ್ಷಿಯಾಗಿದ್ದು, ತನ್ನೊಂದಿಗೆ ದುಡಿಯುವ ಎತ್ತುಗಳಿಗೆ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಅನ್ನದಾತ ಕೃತಜ್ಞತೆ ಸಲ್ಲಿಸಿದ್ದಾರೆ.
ಆಕಳಿಗೆ ಸೀಮಂತ
ಈ ಹಿಂದೆ ವಿಜಯಪುರದಲ್ಲಿ ಕರಡಿ ಮಜಲು ವಾದ್ಯದೊಂದಿಗೆ ಕುಟುಂಬವೊಂದು ಆಕಳಿಗೆ ಸೀಮಂತ ಕಾರ್ಯ ನಡೆಸಿದ್ದರು. ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಹೂಗಾರ ಕುಟುಂಬ ಆಕಳಿಗೆ ಸೀಮಂತ ಮಾಡಿದ್ದರು.. ಸಾಕಿದ ಆಕಳು ಮೊದಲ ಬಾರಿ ಗರ್ಭಧಿಸಿರುವ ಕಾರಣ ಈ ಕಾರ್ಯಕ್ರಮ ನಡೆಸಿದ್ದರು. ಮುತ್ತೈದೆಯರು ಆಕಳಿಗೆ ಹೊಸ ಸೀರೆ ಉಡಿಸಿ, ಆರತಿ ಬೆಳಗಿದ್ದರು. ಕುಟುಂಬದವರು ಆಕಳಿಗೆ ಸಿಹಿ ಖಾದ್ಯ ತಿನ್ನಿಸಿದ್ದರು.
ಇದನ್ನೂ ಓದಿ
ಆನೇಕಲ್ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಕೊಲೆ!
ನೈಟ್ ಕರ್ಫ್ಯೂ ಎಫೆಕ್ಟ್: ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನ, 7 ಗಂಟೆ ಶೋ ಲಾಸ್ಟ್