ಬ್ಯಾಂಕ್ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು: ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 4:08 PM

ಬೆಳೆ ಸಾಲ ಪಾವತಿಸುವಂತೆ ಬ್ಯಾಂಕ್​ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವನ್ನಪ್ಪಿರುವಂತಹ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಸದ್ಯ ಈ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಜಾವೂರ ಕುಟುಂಬಸ್ಥರು ದೂರು‌ ನೀಡಿದ್ದು, ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು: ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌ ಬಂಧನ
ಮೃತ ರೈತ ಮಹಾದೇವಪ್ಪ ಜಾವೂರ
Follow us on

ಹುಬ್ಬಳ್ಳಿ, ನವೆಂಬರ್​​​​ 02: ಬೆಳೆ ಸಾಲ ಪಾವತಿಸುವಂತೆ ಬ್ಯಾಂಕ್​ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ (Farmer) ಸಾವನ್ನಪ್ಪಿರುವಂತಹ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ನಿವಾಸಿ ಮಹಾದೇವಪ್ಪ ಜಾವೂರ(75) ಮೃತ ರೈತ. 1 ವಾರದ ಹಿಂದೆ ಹುಬ್ಬಳ್ಳಿ ಕಿಮ್ಸ್‌ಗೆ ಮಹಾದೇವಪ್ಪ ಜಾವೂರ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಸದ್ಯ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಜಾವೂರ ಕುಟುಂಬಸ್ಥರು ದೂರು‌ ನೀಡಿದ್ದು, ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

2015ರಲ್ಲಿ ಕೆವಿಜಿ ಬ್ಯಾಂಕ್‌ನಲ್ಲಿ 14.5 ಲಕ್ಷ ರೂ. ಬೆಳೆ ಸಾಲ ಮಾಡಿದ್ದರು. ಆದರೆ ಮಹಾದೇವಪ್ಪ ಜಾವೂರ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರಲಿಲ್ಲ. ಬೆಳೆಸಾಲದಡಿ ಅನುಮತಿ ಇಲ್ಲದೆ ಮತ್ತೊಂದು ಖಾತೆಯಲ್ಲಿದ್ದ 1.4 ಲಕ್ಷ ರೂ. ಬ್ಯಾಂಕ್​ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ನಿತ್ಯ ಜಾವೂರ ಮನೆಗೆ ತೆರಳಿ ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು.

ಇದನ್ನೂ ಓದಿ: ರಾಯಚೂರು: ದಲಿತ ಮುಖಂಡನ ಬರ್ಬರ ಹತ್ಯೆ ಪ್ರಕರಣ; ಮೂವರ ಬಂಧನ

ಅ.28ರಂದು ಬ್ಯಾಂಕ್ ಸಿಬ್ಬಂದಿ ಜತೆ ಮಾತನಾಡುತ್ತಿರುವಾಗಲೇ ಮಹಾದೇವಪ್ಪ ಜಾವೂರ ಮೂರ್ಛೆ ಬಂದು ಬಿದ್ದಿದ್ದರು. ಹೀಗಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಕೆವಿಜಿ ಬ್ಯಾಂಕ್‌ಗೆ ರೈತರಿಂದ ಮುತ್ತಿಗೆ ಯತ್ನ

ಧಾರವಾಡದ ಕೆವಿಜಿ ಬ್ಯಾಂಕ್‌ಗೆ ರೈತರಿಂದ ಮುತ್ತಿಗೆ ಯತ್ನಿಸಿದ್ದು, ರೈತರನ್ನು ಗೇಟ್ ಬಳಿ ಪೊಲೀಸರು ತಡೆದಿದ್ದಾರೆ. ಕೆವಿಜಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಸಾಲ ಮರುಪಾವತಿಗೆ
ಕೆವಿಜಿ ಬ್ಯಾಂಕ್ ಮೊರಬ ಶಾಖೆಯ ಮ್ಯಾನೇಜರ್‌ನಿಂದ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆ ಬ್ಯಾಂಕ್ ಮ್ಯಾನೇಜರ್ ಭೇಟಿಗೆ ಮಹದೇವಪ್ಪ ತೆರಳಿದ್ದರು. ಈ ವೇಳೆ ಮಹದೇವಪ್ಪ ಜೊತೆ ಮ್ಯಾನೇಜರ್ ಅನುಚಿತ ವರ್ತನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: Video: ರಾಜಾಧಾನಿ ಬೆಂಗಳೂರಿನಲ್ಲಿ ರಾತ್ರಿ ಕತ್ತಲಲ್ಲಿ ಜನನಿಬಿಡ ಪ್ರದೇಶದಲ್ಲಿ ರಿವೆಂಜಿಗೆ ಬಿದ್ದಂತೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ, ಹತ್ಯೆ: ಏನಿದು ಪೈಶಾಚಿಕ ಕೃತ್ಯ?

ಸೂಕ್ತ ಪರಿಹಾರ ಹಾಗೂ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಮಹಾದೇವಪ್ಪ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಡಿವೈಡರ್​ಗೆ ಬೈಕ್​ ಡಿಕ್ಕಿ: ಸವಾರ ಸಾವು, ಯುವತಿ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಡಿವೈಡರ್​ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಯುವತಿ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದ ಬಳಿ ನಡೆದಿದೆ. ಗಾಯಗೊಂಡಿರುವ ಯುವತಿಗೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.