ಸಭಾಪತಿ ವಿರುದ್ಧ ಎಫ್​ಐಆರ್: ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ

| Updated By: ಸಾಧು ಶ್ರೀನಾಥ್​

Updated on: Mar 10, 2022 | 4:44 PM

Basavaraj Horatti : ಶಿಕ್ಷಣ ಸಂಸ್ಥೆಯೊಂದರ ಆಡಳಿತದ ವಿಚಾರದಲ್ಲಿ ವಿವಾದ ತಲೆದೋರಿದ್ದು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದವರು ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 5 ಮಂದಿಯ ವಿರುದ್ಧ ಎರಡು ತಿಂಗಳ ಹಿಂದೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಭಾಪತಿ ವಿರುದ್ಧ ಎಫ್​ಐಆರ್: ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ
ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ
Follow us on

ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಸಭಾಪತಿ (Chairman of the Legislative Council Basavaraj Horatti) ವಿರುದ್ಧ ಧಾರವಾಡದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಫ್​ಐಆರ್​ ದಾಖಲಿಸಿದ್ದಾರೆ ಎಂದು ಪರಿಷತ್​ನಲ್ಲಿಂದು ಸರ್ಕಾರ ಮತ್ತು ಧಾರವಾಡ SP ವಿರುದ್ಧ ಮೇಲ್ಮನೆ ಸದಸ್ಯರು ತೀವ್ರ ಆಕ್ರೋಶ ಮತ್ತು ಕಳವಳ ವ್ಯಕ್ತಪಡಿಸಿದರು. ಸಭಾಪತಿ ವಿರುದ್ಧವೇ FIR ಆಗಿರುವುದರಿಂದ ಪೀಠಕ್ಕೆ ಅಗೌರವ ತೋರಿದಂತಾಗಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸದಸ್ಯರು ಆಗ್ರಹ ಮಾಡಿದರು. ಬಜೆಟ್​ ಮೇಲೆ ಚರ್ಚೆ ವೇಳೆ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್​​ ಸದಸ್ಯ ಯು.ಬಿ. ವೆಂಕಟೇಶ್ ಅವರು ಧಾರವಾಡ ಎಸ್​ಪಿ ಸದನಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಇತರೆ ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು.

ಈ ವೇಳೆ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಎಫ್​ಐಆರ್ ಆದ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ಮುಂಜಾನೆ 3 ಗಂಟೆಗೆ ಧಾರವಾಡದ ಎಸ್​ಪಿ ಕರೆ ಮಾಡಿದ್ದರೆಂದು ತಮ್ಮ ಅಸಮಾಧಾನ ಹೊರಹಾಕಿದರು.

ಸಭಾಪತಿ ವಿರುದ್ಧವೇ ಎಫ್ಐಆರ್ ದಾಖಲಿಸಿದ ವಿಚಾರ ತಿಳಿದು ಪರಿಷತ್​ನಲ್ಲಿ ಜೆಡಿಎಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಸದರಿ ಎಸ್.ಪಿ ಹಾಗೂ ಸಂಬಂಧಪಟ್ಟ ಅಧಿಕಾರಿಯನ್ನು ಸಸ್ಪೆಂಡ್ ಮಾಡಲೇಬೇಕು ಎಂದು ಬಾವಿಗಿಳಿದು ಧರಣಿ ನಡೆಸಿ, ಆಗ್ರಹಿಸಿದರು. ಈ ವಿಚಿತ್ರ ಸಂದರ್ಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎರಡು ಮೂರು ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಇಷ್ಟಕ್ಕೆ ಸಂತಷ್ಟರಾದ ಜೆಡಿಎಸ್ ಸದಸ್ಯರು ತಮ್ಮ ಧರಣಿಯನ್ನು ವಾಪಸ್ ಪಡೆದರು.

ಶಿಕ್ಷಣ ಸಂಸ್ಥೆಯೊಂದರ ಆಡಳಿತದ ವಿಚಾರದಲ್ಲಿ ವಿವಾದ ತಲೆದೋರಿದ್ದು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದವರು (Akhila Karnataka Valmiki Nayaka Mahasabha) ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 5 ಮಂದಿಯ ವಿರುದ್ಧ ಎರಡು ತಿಂಗಳ ಹಿಂದೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:
ಈಗಲ್ಟನ್ ರೆಸಾರ್ಟ್ ನಿಮ್ಮ ಕ್ಷೇತ್ರಕ್ಕೆ ಬರುತ್ತಲ್ಲಾ? ನೀವು ರಾಮನಗರ ಪ್ರತಿನಿಧಿ ಅಲ್ವಾ? ಹೆಚ್ ​ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತರಾಟೆ

Published On - 4:40 pm, Thu, 10 March 22