ಧಾರವಾಡ: ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚಿಸಿ ಚುನಾವಣಾ ಆಯೋಗಕ್ಕೆ ನೀಡಿದ್ದ ಅಧಿಕಾರ ಹಿಂಪಡೆದಿತ್ತು. ತನ್ನ ನಿರ್ಧಾರದ ಬಗ್ಗೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ ನೀಡಿದ ನಂತರ ಚುನಾವಣಾ ಆಯೋಗದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೂಡಿಕೆ ಅನಿವಾರ್ಯವಾಗಿದೆ.
ಜಲ ಮಾಲಿನ್ಯ ಆರೋಪ: ಪಿಐಎಲ್ ಅರ್ಜಿದಾರನಿಗೆ 10 ಲಕ್ಷ ದಂಡ
ಪ್ರಮೋದ್ ಮಧ್ವರಾಜ್ ಮಾಲೀಕತ್ವದ ಆಯಿಲ್ ಕಂಪನಿ ಮೆ.ರಾಜ್ ಫಿಶ್ಮೀಲ್ ಸಂಸ್ಥೆಯಿಂದ ನದಿ ಕಲುಷಿತಗೊಂಡಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪ್ರಶಾಂತ್ ನವೀನ್ ಎಂಬುವವರಿಗೆ ಹೈಕೋರ್ಟ್ ₹ 10 ಲಕ್ಷ ದಂಡ ವಿಧಿಸಿದೆ. ಅವರ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸದೆ ವಜಾ ಮಾಡಿದೆ.
ಈ ಮೊದಲು ಕಂಪನಿಯೊಂದಿಗೆ ವಹಿವಾಟು ನಡೆಸುತ್ತಿದ್ದ ಪ್ರಶಾಂತ್ ಅಮೀನ್ ಕೆಲ ಸಮಯದ ನಂತರ ದೂರಾಗಿದ್ದರು. ಈ ವಿಚಾರವನ್ನು ಗಮನಿಸಿದ ಹೈಕೋರ್ಟ್, ಖಾಸಗಿ ಹಿತಾಸಕ್ತಿಯ ಪಿಐಎಲ್ ಎಂದು ಪರಿಗಣಿಸಿ ಅರ್ಜಿದಾರರಿಗೆ 10 ಲಕ್ಷ ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿತು.
(High Court Cancels Circular of Election Commission Zilla Panchayat Election Postponement Necessary)
ಇದನ್ನೂ ಓದಿ: ಚುನಾವಣೆ ಸಂದರ್ಭ ವೈದ್ಯರ ನಿವೃತ್ತಿ ವಯಸ್ಸನ್ನು ಏಕ್ದಂ 5 ವರ್ಷ ಏರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಇದನ್ನೂ ಓದಿ: ‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್