ನೈಋತ್ಯ ರೈಲ್ವೆಯಿಂದ ಮತ್ತೊಂದು ದಾಖಲೆ; ಆದಾಯದಲ್ಲಿಯೂ ಶೇ 30.78ರಷ್ಟು ಹೆಚ್ಚಳ

| Updated By: Rakesh Nayak Manchi

Updated on: Dec 04, 2022 | 8:02 PM

ಸಾಕಷ್ಟು ಜನಪರ ಯೋಜನೆ ಅನುಷ್ಠಾನದ ಮೂಲಕ ಜನಮನ್ನಣೆ ಪಡೆದ ನೈಋತ್ಯ ರೈಲ್ವೆಯು ಮತ್ತೊಂದು ಸಾಧನೆ ಮಾಡಿದೆ. ತನ್ನ ಜವಾಬ್ದಾರಿಯ ಜೊತೆಗೆ ಈಗ ಆದಾಯದಲ್ಲಿಯೂ ಕೂಡ ದಾಖಲೆ ನಿರ್ಮಿಸಿದೆ.

ನೈಋತ್ಯ ರೈಲ್ವೆಯಿಂದ ಮತ್ತೊಂದು ದಾಖಲೆ; ಆದಾಯದಲ್ಲಿಯೂ ಶೇ 30.78ರಷ್ಟು ಹೆಚ್ಚಳ
ನೈಋತ್ಯ ರೈಲ್ವೆಯಿಂದ ಮತ್ತೊಂದು ದಾಖಲೆ; ಆದಾಯದಲ್ಲಿಯೂ ಶೇ 30.78ರಷ್ಟು ಹೆಚ್ಚಳ
Follow us on

ಹುಬ್ಬಳ್ಳಿ: ಸಾಕಷ್ಟು ಜನಪರ ಯೋಜನೆ ಅನುಷ್ಠಾನದ ಮೂಲಕ ಜನಮನ್ನಣೆ ಪಡೆದ ನೈಋತ್ಯ ರೈಲ್ವೆ (South Western Railway)ಯು ಮತ್ತೊಂದು ಸಾಧನೆ ಮಾಡಿದೆ. ತನ್ನ ಜವಾಬ್ದಾರಿಯ ಜೊತೆಗೆ ಈಗ ಆದಾಯದಲ್ಲಿಯೂ ಕೂಡ ದಾಖಲೆ ನಿರ್ಮಿಸಿದೆ. ನೈಋತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದ ನವೆಂಬರ್​ವರೆಗೆ 4,447.67 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ 3,400.83 ಕೋಟಿ ರೂ. ಆದಾಯ ಕ್ರೋಡೀಕರಣವಾಗಿತ್ತು. ಆ ಮೂಲಕ ಈ ಬಾರಿಯ ಆದಾಯದಲ್ಲಿ ಶೇ. 30.78ರಷ್ಟು ಹೆಚ್ಚಳ ಕಂಡಿದೆ. ಅಲ್ಲದೇ ಹೊಸ ಹೊಸ ಯೋಜನೆ ಮೂಲಕ ಕೋವಿಡ್ ನಂತರದಲ್ಲಿ ದಾಖಲೆಯ ಆದಾಯವನ್ನು ತನ್ನ ಬೊಕ್ಕಸಕ್ಕೆ ಜಮಾ ಮಾಡಿಕೊಂಡಿದೆ.

ಇನ್ನೂ ಈ ವರ್ಷದ ನವೆಂಬರ್‌ವರೆಗೆ ಪ್ರಯಾಣಿಕರ ಸಂಚಾರದಿಂದ 1,813.58 ಕೋಟಿ ರೂ. ಆದಾಯ ಗಳಿಕೆಯಾಗಿದ್ದು, ಕಳೆದ ವರ್ಷ 927.31 ಕೋಟಿ ರೂಪಾಯಿ ಆದಾಯವಾಗಿತ್ತು. ಕಳೆದ ಬಾರಿಗಿಂತ ಶೇ. 95.57ರಷ್ಟು ಹೆಚ್ಚಿನ ಆದಾಯ ಪ್ರಯಾಣಿಕರ ಸಂಚಾರದಿಂದ ಆಗಿದೆ.

ಇದನ್ನೂ ಓದಿ: ವಿಶೇಷ ಚೇತನರಿಗಾಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ

ಟಿಕೆಟ್ ಪರಿಶೀಲನೆಯಿಂದ ಕಳೆದ ಬಾರಿ 15.72 ಕೋಟಿ ರೂ. ದಂಡ ವಸೂಲಿಯಾಗಿತ್ತು. ಈ ಬಾರಿ 37.74 ಕೋಟಿ ರೂ. ಸಂಗ್ರಹಣೆಯಾಗಿದ್ದು, ಇದರಲ್ಲಿಯೂ ಶೇ 104.08ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಿಂದ ಬರುವ ಆದಾಯ ಶೇ 16.32ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ರಸ್ತೆ, ಬಸ್ ಸಮಸ್ಯೆ ನಡುವೆ ಶಾಲೆಗೆ ಹೋಗಲು ಮಕ್ಕಳಿಗೆ ಚಿರತೆ ಭಯ

ಸರಕು ಸಾಗಣೆಯಿಂದ ಕಳೆದ ವರ್ಷ 80.20 ಕೋಟಿ ರೂ. ಆದಾಯ ಸಂಗ್ರಹಣೆಯಾಗಿದ್ದರೆ, ಈ ಬಾರಿ 93.29 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ. ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ನೈಋತ್ಯ ವಲಯ ಉತ್ತಮ ಆದಾಯ ಗಳಿಸಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕುಮಾರ ತಿಳಿಸಿದ್ದಾರೆ.

ವರದಿ: ರಹಮತ್ ಕೆ, ಟಿವಿ9 ಹುಬ್ಬಳ್ಳಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Sun, 4 December 22