ವಿಶೇಷ ಚೇತನರಿಗಾಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ

ಅವರು ವಿಶೇಷಚೇತನರು, ಎಲ್ಲರಂತೆ ಎಲ್ಲ ಅಂಗಾಂಗಳು ಸದೃಢವಾಗಿಲ್ಲದಿದರೂ ಯಾರಿಗೇನು ಕಡಿಮೆ ಇಲ್ಲ ಅನ್ನೋ ಹಾಗೆ ಬದುಕುತ್ತಿದ್ದಾರೆ. ಅಂಗವೈಖಲ್ಯ ಅಂತ ಬದುಕು ಮುಗಿದು ಹೋಯ್ತು ಅಂತ ಕುಗ್ಗಿ ಹೋಗಿ ಮನೆಯಲ್ಲೇ ಕೂತಿರೋವರಿಗೆ ಇವರೇ ಪ್ರೇರಣೆಯಾಗಿ ನಿಂತಿದ್ದಾರೆ.‘

ವಿಶೇಷ ಚೇತನರಿಗಾಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ
ವಿಶೇಷ ಚೇತನರಾಗಿಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ
Follow us
TV9 Web
| Updated By: Rakesh Nayak Manchi

Updated on:Dec 04, 2022 | 5:56 PM

‌ದೇವನಹಳ್ಳಿ: ಅಂಗವೈಕಲ್ಯ ಆದರೆ ಸಾಕು ಮನೆಯಲ್ಲೇ ಬದುಕು ಮುಗಿದು ಹೋಗುತ್ತದೆ ಅಂತ ಕುಗ್ಗಿ ಹೋಗೋವರೆ ಬಹುತೇಕರು‌. ನಾಲ್ಕು ಗೋಡೆಗಳ ಮಧ್ಯೆಯೇ ನಮ್ಮ ಜೀವನ ಕಳೆದು ಹೋಗುತ್ತದೆ ಅಂತ ನೊಂದು ನೋವುಂಡುತ್ತಾ ಕಾಲ ಕಳೆಯುತ್ತಾರೆ. ಆದರೆ ಅಂತಹವರಿಗೆ ಮಾದರಿಯೇ ಈ ಮಿಟ್ಟಿ ಕೆಫೆಯ (Mitti Cafe) ವಿಶೇಷಚೇತನರು. ವಿಶ್ವವಿಶೇಷ ಚೇತನರ ದಿನ (International Day of Persons with Disabilities) (ಡಿಸೆಂಬರ್ 3)ದ ಅಂಗವಾಗಿ ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳ ಆರಂಭವಾಗಿದೆ. ಕಾಫಿ, ಟೀ, ಚಾಟ್ಸ್, ಬರ್ಗರ್, ಪಿಜ್ಜಾ ಸೇರಿದಂತೆ ತರಹೇವಾರಿ ತಿನಿಸುಗಳನ್ನ ತಯಾರಿ ಮಾಡುವುದರಿಂದ ಆರಂಭಿಸಿ ಸರ್ವ್ ಮಾಡೋದು ಸಹ ವಿಶೇಷಚೇತನರೇ‌. ಅಡುಗೆ ಕೆಲಸ ಹಾಗೂ ಕ್ಯಾಷಿಯರ್ ಕೆಲಸ ಮಾಡುವುದು ಕೂಡ ಅವರೇ. ಅಂಗವೈಕಲ್ಯದಿಂದ ನಮ್ಮ ಬದುಕು ಇಷ್ಟೇ ಅಂತ ನೊಂದು ಬೆಂದು ಹೋಗಿದ್ದ ಜೀವಗಳಿಗೆ ಮಿಟ್ಟಿ ಕೆಫೆ ಹೊಸ ಪ್ರಪಂಚವನ್ನ ಸೃಷ್ಟಿ ಮಾಡಿ ಬದುಕು ರೂಪಸಿದ್ದು ಅವರ ಖುಷಿ ವರ್ಣಿಸಲು ಪದಗಳೇ ಸಾಲದು. ಅವರ ಖುಷಿ ಆತ್ಮವಿಶ್ವಾಸಕ್ಕೆ ಸಾಟಿಯೇ ಯಾರೂ ಇಲ್ಲ.

ಮಿಟ್ಟಿ ಕೆಫೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆ. ನನ್ನ ಜೀವನ ಸಂಪೂರ್ಣ ಬದಲಾಗಿದೆ. ಮೊದಲು ನನಗೆ ಒಂದು ಕಪ್ ಕಾಫಿ ಕೈಯಲ್ಲಿ ಹಿಡಿಯಲು ಕಷ್ಟವಾಗುತ್ತಿತ್ತು. ನಾನು ಕೆಲಸ ಮಾಡುತ್ತೇನೆ ಅಂತ ನನಗೆ ಭರವಸೆಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನನ್ನೊಳಗೂ ಒಂದು ಶಕ್ತಿ ಇದೆ ಅಂತ ತೋರಿಸಿಕೊಟ್ಟಿದ್ದು ಮಿಟ್ಟಿ ಕೆಫೆ ಎಂದು ವಿಶೇಷಚೇತನರ ಮಿಟ್ಟಿ ಕೆಫೆ ಕ್ಯಾಷಿಯರ್  ಕೀರ್ತಿ ತಮ್ಮ ಅಭಿಪ್ರಾಯವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಬಂತು ಲಸಿಕೆ: ಶಾಲೆಗಳಲ್ಲಿ ಲಸಿಕಾಕರಣದ ಬಗ್ಗೆ ಸಚಿವ ಸುಧಾಕರ್ ಮಾಹಿತಿ

ಇಂತಹ ವಿಶೇಷಚೇತನರಾಗಿಯೇ ಈ ಮಿಟ್ಟಿ ಕೆಫೆ ಕಾನ್ಸೆಫ್ಟ್ ಮಾಡಿರುವುದು ಕೊಲ್ಕತ್ತಾ ಮೂಲದ ಅಲಿನಾ ಎಂಬ ಯುವತಿ. ಕಾಲೇಜು ದಿನಗಳಿಂದಲೇ ವಿಶೇಷ ಚೇತನರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅಲಿನಾ ವಿಶೇಷಚೇತನರಾಗಿಗಿಯೇ ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು, ಹುಬ್ಬಳ್ಳಿ ಸೇರಿ ಇದುವರೆಗೂ 25 ಮಿಟ್ಟಿ ಕೆಫೆಗಳನ್ನ ಆರಂಭಿಸಿದ್ದಾರೆ. ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳನ್ನ ಆರಂಭಿಸಿದ್ದಾರೆ.

ದೇಶದ ನಾನಾ ಮೂಲೆಗಳಲ್ಲಿ 25 ಮಿಟ್ಟಿ ಕೆಫೆಗಳಲ್ಲಿ 250ಕ್ಕೂ ಹೆಚ್ಚು ಮಂದಿ ವಿಶೇಷಚೇತನರು ಕೆಲಸ ಮಾಡುತ್ತಿದ್ದಾರೆ. ಎನ್​ಜಿಒ ಸಂಸ್ಥೆಗಳು, ಸ್ವಯಂಪ್ರೇರಿತ ಉದ್ಯೋಗ ಹರಸಿ ಬರುವ ವಿಶೇಷಚೇತನರು ಸೇರಿದಂತೆ ರಸ್ತೆ ಬದಿ ಅಸಹಾಯಕರಾಗಿ ಕಾಣುವ ವಿಶೇಷಚೇತನರನ್ನ ಕರೆತಂದು ಅವರಿಗೆ ಒಂದೆರೆಡು ತಿಂಗಳ ಕಾಲ‌ ವಿಶೇಷ ತರಬೇತಿ ನೀಡಿ ಕೆಲಸ ಕೊಡಲಾಗುತ್ತದೆ. ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ. ಮನೆ, ಕೆಲಸಕ್ಕೆ ಪಿಕ್ ಅಫ್ ಅಂಡ್ ಡ್ರಾಪ್ ಸೌಲಭ್ಯಗಳು, ಸೇರಿದಂತೆ ಭಡ್ತಿಗಳು ಸಹ ಈ ಕೆಲಸದಲ್ಲಿರಲಿವೆ. ಎಲ್ಲದಕ್ಕೂ ಹೆಚ್ಚಾಗಿ ವಿಶೇಷಚೇತನರಿಗೊಂದು ವಿಶೇಷ ಗೌರವ ಸಿಗಲಿದೆ. ಇಲ್ಲಿ ವಿಶೇಷ ಚೇತನರಿಗೆ ಐಡೆಂಟಿಟಿ ಸಿಗಲಿದ್ದು ಯಾರ ಹಂಗು ಇಲ್ಲದೆ ಸ್ವಾಭಿಮಾನಿಗಳಂತೆ ಸಂತೋಷದ ಬದುಕು ಸಾಗಿಸುತ್ತಿದ್ದಾರೆ.

ಕಣ್ಣು ಕಾಣದ ಕಿವಿ ಕೇಳದ ಕಾಲು ಕೈ ಇರದ ಸಂಪೂರ್ಣವಾಗಿ ಮಾತನಾಡಲು ಸಹ ಆಗದ ಮಾನಸಿಕವಾಗಿ ಸದೃಢವಾಗಿರದವನ್ನ ಸಹ ಕೆಲಸ ಮಾಡುವಂತಹ ಸಮರ್ಥರನ್ನಾಗಿ ಮಾಡಿ ಮಿಟ್ಟಿ ಕೆಫೆಯಲ್ಲಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ. ಇದು ಅವರಿಗೆ ಕೆಲಸ ಕೋಡುವ ಉದ್ದೇಶ ಅಲ್ಲ. ಅವರಿಗೊಂದು ಸಮಾಜದಲ್ಲಿ ಗೌರವ ಕೋಡಿಸುವುದು, ಎಲ್ಲರಂತೆ ಸಮಾನರಾಗಿ ಅವರನ್ನ ಕಾಣಬೇಕು, ಅವರು ಸಹ ಸಂತೋಷದಿಂದ ಸಾರ್ಥಕತೆಯ ಜೀವನ ನಡೆಸಬೇಕು ಎಂಬ ಮಹಾದಾಸೆ ಈ ಮಿಟ್ಟಿ ಕೆಫೆ ಸಂಸ್ಥಾಪಕಿ ಅಲಿನಾ ಅಶಯ‌‌ ಅವರದ್ದಾಗಿದೆ. ಏನೇ ಅಗಲಿ ಎಲ್ಲವೂ ಇದ್ದು ಕೈಲಾಗದವರಂತೆ ಉದ್ಯೋಗ ಇಲ್ಲ ಅಂತ ಕೈ ಕಟ್ಟಿ ಕುಳಿತಿರುವ ಯುವ ಸಮುದಾಯ ಸಮಾಜಕ್ಕೆ ಇವರು ಸ್ಪೂರ್ತಿಯಾಗಿ ನಿಂತಿದ್ದಾರೆ.

ವರದಿ: ನವೀನ್, ಟಿವಿ9 ದೇವನಹಳ್ಳಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Sun, 4 December 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್