ಹಸಿರು ವಿಮಾನ ನಿಲ್ದಾಣ ಸ್ಥಾನಮಾನದೊಂದಿಗೆ ಗಗನದೆತ್ತರ ಬೆಳೆದಿದೆ ನೋಡಾ ಹುಬ್ಬಳ್ಳಿಯ ಸಾಮರ್ಥ್ಯ, ಖ್ಯಾತಿ!

Solar-powered Hubballi Airport: ಸೋಲಾರ್ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವ ನೈಋತ್ಯ ರೈಲ್ವೆ ಹಾಗೂ ವಿಮಾನ ನಿಲ್ದಾಣ ವಿದ್ಯುತ್ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ಮಹತ್ವದ ನಿರ್ಧಾರಕ್ಕೆ ಮುಂದಾಗಿವೆ. ಹೀಗಾಗಿ ಟ್ರೈನ್ ಮತ್ತು ಪ್ಲೈನ್ ಎರಡರಲ್ಲೂ ಹುಬ್ಬಳ್ಳಿ ವಿಶಿಷ್ಟ ರೀತಿಯಲ್ಲಿ ಹೆಸರು ಮಾಡುತ್ತಿದೆ.

ಹಸಿರು ವಿಮಾನ ನಿಲ್ದಾಣ ಸ್ಥಾನಮಾನದೊಂದಿಗೆ ಗಗನದೆತ್ತರ ಬೆಳೆದಿದೆ ನೋಡಾ ಹುಬ್ಬಳ್ಳಿಯ ಸಾಮರ್ಥ್ಯ, ಖ್ಯಾತಿ!
ಹಸಿರು ವಿಮಾನ ನಿಲ್ದಾಣ ಸ್ಥಾನಮಾನದೊಂದಿಗೆ ಗಗನದೆತ್ತರ ಬೆಳೆದಿದೆ ನೋಡಾ ಹುಬ್ಬಳ್ಳಿಯ ಸಾಮರ್ಥ್ಯ, ಖ್ಯಾತಿ!
Edited By:

Updated on: Dec 07, 2022 | 2:49 PM

ಒಂದು ಕಡೆಗೆ ಟ್ರೇನ್ ಮತ್ತೊಂದು ಕಡೆಯಲ್ಲಿ ಪ್ಲೇನ್ ಎರಡು ಕೂಡ ಅವಳಿನಗರಕ್ಕೆ ವರವಾಗಿ ಪರಿಣಮಿಸಿದೆ. ಸಾಕಷ್ಟು ಜನಪರ ಕಾರ್ಯಗಳ ಮೂಲಕ ಹಾಗೂ ಹೊಸ ಹೊಸ ಯೋಜನೆ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿಯ (Hubballi) ವಿಮಾನ ನಿಲ್ದಾಣ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಹುಬ್ಬಳ್ಳಿ ಏರ್‌ಪೋರ್ಟ್‌ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ. ಅಲ್ಲದೇ ನೈಋತ್ಯ ರೈಲ್ವೆ ಕೂಡ ಪರಿಸರ ಸ್ನೇಹಿಯಾಗಿ (green airport) ಹೊರ ಹೊಮ್ಮಿದೆ.

ಹುಬ್ಬಳ್ಳಿ ಕೇವಲ ವಾಣಿಜ್ಯ ನಗರವಾಗಿ ಮಾತ್ರವೇ ಉಳಿದಿಲ್ಲ. ಅಭಿವೃದ್ಧಿಯಲ್ಲಿ ಬಡಾ ಮುಂಬೈ ಜೊತೆ ಹುಬ್ಬಳ್ಳಿ ಸ್ಪರ್ಧೆಗಿಳಿದಿದೆ. ದೇಶವೇ ಹಿಂದಿರುಗಿ ನೋಡುವಂತೆ ಮಾಡುತ್ತಿದೆ. ರೈಲ್ವೆ ಡಬ್ಲಿಂಗ್ ಹಾಗೂ ಎಲೆಕ್ಟ್ರಿಕಲ್ ಸೇವೆಯನ್ನು ವೃದ್ಧಿಸುವ ಮೂಲಕ ಕಾರ್ಯವೈಖರಿ ಚುರುಕುಗೊಳಿಸಿರುವ ನೈಋತ್ಯ ರೈಲ್ವೆ ಸೋಲಾರ್ ಪ್ಲಾಂಟ್ ಅನುಷ್ಠಾನ ಮಾಡಿ ಪರಿಸರ ಸ್ನೇಹಿಯಾಗಿ ಹೊರ ಹೊಮ್ಮಿದೆ (Solar-powered Hubballi Airport).

ಅಲ್ಲದೇ ಕೋಟ್ಯಾಂತರ ರೂಪಾಯಿ ವಿದ್ಯುತ್ ಹೊರೆಯನ್ನು ತಗ್ಗಿಸಲು ಮುಂದಾಗಿದೆ. ಏಷಿಯಾದ ಅತ್ಯಂತ ದೊಡ್ಡ ರೈಲ್ವೇ ಪ್ಲಾಟ್ ಫಾರಂ ಹೊಂದಿರುವ ಕೀರ್ತಿ ನಮ್ಮ ಹುಬ್ಬಳ್ಳಿಗೆ ಸಲ್ಲುತ್ತದೆ. ಇದೆಲ್ಲಾ ಟ್ರೈನ್ ವಿಚಾರ ಒಂದು ಕಡೆಯಾದರೆ ಇನ್ನೂ ಪ್ಲೈನ್ ವಿಚಾರದಲ್ಲೂ ಹುಬ್ಬಳ್ಳಿ ಗಗನದೆತ್ತರ ಬೆಳೆದಿದೆ. ಹಸಿರು ವಿಮಾನ ನಿಲ್ದಾಣ ಎಂಬುವಂತ ಈ ಸ್ಥಾನಮಾನ ಪಡೆದ ದೇಶದ ಕೆಲವೇ ಕೆಲ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಕೂಡ ಒಂದಾಗಿದ್ದು, ರಾಜ್ಯದಲ್ಲಿಯೇ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಠಾಕ್ರೆ ಮಾಹಿತಿ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆ. ವ್ಯಾ. ಗ್ರಿಡ್‌-ಸಂಪರ್ಕಿತ ಸೌರ ವಿದ್ಯುತ್‌ ಸ್ಥಾವರದಿಂದಾಗಿ ಏರ್‌ಪೋರ್ಟ್‌ ಶೇ. 100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ. ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿಂದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ ಶೇ. 50ರಷ್ಟು ಇಂಧನ ಉತ್ಪಾದಿಸುವ ಪ್ರಧಾನಿ ಮೋದಿ ಅವರ ಕನಸನ್ನು ನನಸಾಗಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣ ಮೊದಲ ಹೆಜ್ಜೆ ಇಟ್ಟಿದೆ.

ಒಟ್ಟಿನಲ್ಲಿ ರೈಲು ಮತ್ತು ವಿಮಾನ ನಿಲ್ದಾಣವು ಪರಿಸರ ಸ್ನೇಹಿಯಾಗಿದೆ‌. ಸೋಲಾರ್ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವ ನೈಋತ್ಯ ರೈಲ್ವೆ ಹಾಗೂ ವಿಮಾನ ನಿಲ್ದಾಣ ವಿದ್ಯುತ್ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ಮಹತ್ವದ ನಿರ್ಧಾರಕ್ಕೆ ಮುಂದಾಗಿವೆ.ಹೀಗಾಗಿ ಟ್ರೈನ್ ಮತ್ತು ಪ್ಲೈನ್ ಎರಡರಲ್ಲೂ ಹುಬ್ಬಳ್ಳಿ ವಿಶಿಷ್ಟ ರೀತಿಯಲ್ಲಿ ಹೆಸರು ಮಾಡುತ್ತಿದೆ. (ವರದಿ- ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ)

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ