ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ರೈಲು ಸಮಯ ಬದಲಾವಣೆ

|

Updated on: Nov 08, 2024 | 7:49 AM

ಹುಬ್ಬಳ್ಳಿ ಮತ್ತು ಬೆಂಗಳೂರಿನ ನಡುವೆ ಸಂಚರಿಸುವ ಕೆಲವು ರೈಲುಗಳ ಸಮಯ ಬದಲಾವಣೆಯಾಗಿದೆ. ದೊಡ್ಡಬೆಲೆ-ನಿಡವಂದ ನಿಲ್ದಾಣಗಳ ನಡುವಿನ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲ ರೈಲುಗಳ ಸಮಯ ಬದಲಾವಣೆಯಾಗಿದೆ.

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ರೈಲು ಸಮಯ ಬದಲಾವಣೆ
ಹುಬ್ಬಳ್ಳಿ ರೈಲು ನಿಲ್ದಾಣ
Follow us on

ಹುಬ್ಬಳ್ಳಿ, ನವೆಂಬರ್​ 08: ಎಸ್​ಎಸ್​ಎಸ್​ ಹುಬ್ಬಳ್ಳಿ (SSS Hubballi) ಮತ್ತು ಕೆಎಸ್​ಆರ್​ ಬೆಂಗಳೂರು (KSR Bengaluru) ನಡುವೆ ಸಂಚರಿಸುವ ರೈಲು (Train) ಸಮಯದಲ್ಲಿ ಬದಲಾವಣೆಯಾಗಿದೆ. ಈ ಕುರಿತು ನೈಋತ್ಯ ರೈಲ್ವೆ ವಲಯ ಎಕ್ಸ್​ ಖಾತೆ ಮುಖಾಂತರ ತಿಳಿಸಿದೆ.

ಬೆಂಗಳೂರು ವಿಭಾಗದ ದೊಡ್ಡಬೆಲೆ-ನಿಡವಂದ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣೆ ಮತ್ತು ಮೂಲಸೌಕರ್ಯ ನವೀಕರಣದ ಕಾಮಗಾರಿ ನಡೆಯಲಿದೆ. ಹೀಗಾಗಿ, ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲ ರೈಲುಗಳ ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

  1. ನವೆಂಬರ್ 10 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
  2. ನವೆಂಬರ್ 7 ಮತ್ತು 10 ರಂದು ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07340 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರಿನಿಂದ 120 ನಿಮಿಷ ತಡವಾಗಿ ಹೊರಡಲಿದೆ. ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
  3. ನವೆಂಬರ್ 8 ಮತ್ತು 11 ರಂದು ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ. ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ಹುಬ್ಬಳ್ಳಿ ಮತ್ತು ಯಶವಂತಪುರ ನಡುವೆ ವಿಶೇಷ ರೈಲು

ಪ್ರಯಾಗ್​ರಾಜ್​ಗೆ ವಿಶೇಷ ರೈಲು

  1. ರೈಲು ಸಂಖ್ಯೆ: 04131 ಪ್ರಯಾಗ್‌ರಾಜ್-ಎಸ್​ಎಮ್​ವಿಟಿ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ನವೆಂಬರ್​​ 10 ರಿಂದ 17ರವರೆಗೆ ಭಾನುವಾರದಂದು ಮಾತ್ರ ಸಂಚರಿಸುತ್ತದೆ.
  2. ರೈಲು ಸಂಖ್ಯೆ: 04132 ಎಸ್​ಎಮ್​ವಿಟಿ ಬೆಂಗಳೂರು-ಪ್ರಯಾಗರಾಜ್ ವೀಕ್ಲಿ ಎಕ್ಸ್‌ಪ್ರೆಸ್ ನವೆಂಬರ್​​ 13 ರಿಂದ 20ರವರೆಗೆ ಬುಧವಾರದಂದು ಮಾತ್ರ ಸಂಚರಿಸುತ್ತದೆ.

ಈ ರೈಲು ಎರಡು ಎಸಿ ಸೆಕೆಂಡ್​​ ಕ್ಲಾಸ್​ ಬೋಗಿ, ಐದು ಎಸಿ ತ್ರಿ ಟೈಯರ್​ ಬೋಗಿ, ಐದು ಎಸಿ-ತ್ರಿ ಟೈಯರ್​ ಎಕನಾಮಿಕ್​ ಕ್ಲಾಸ್​​ ಬೋಗಿ, ನಾಲ್ಕು ಸ್ಲೀಪರ್ ಕ್ಲಾಸ್​ ಮತ್ತು ಎರಡು ಲಗೇಜ್ ಬ್ರೇಕ್‌ ಮತ್ತು ಜನರಲ್​ ಬೋಗಿಗಳು ಸೇರಿದಂತೆ ಪ್ರಸ್ತುತ ಸಂಯೋಜನೆಯು 18 ಬೋಗಿಗಳನ್ನು ಒಳಗೊಂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ