75ರ ವಯಸ್ಸಿನಲ್ಲೂ ಮತ್ತೊಂದು ಮದ್ವೆಯಾದ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್, ಮೃತ ಪತ್ನಿಯ ಅಕ್ಕನನ್ನೇ ಕೈಹಿಡಿದ

| Updated By: ರಮೇಶ್ ಬಿ. ಜವಳಗೇರಾ

Updated on: Nov 16, 2022 | 9:46 PM

ಮಾಜಿ ಮೇಯರ್ ಒಬ್ಬರು 75ರ ವಯಸ್ಸಿನಲ್ಲೂ ಮತ್ತೊಂದು ಮದುವೆಯಾಗಿ ಹುಬ್ಬೇರುವಂತೆ ಮಾಡಿದ್ದಾರೆ. ಅದರಲ್ಲೂ ಮೃತಪಟ್ಟ ಮೊದಲ ಪತ್ನಿಯ ಸಹೋದರಿಯನ್ನು ವಿವಾಹವಾಗಿದ್ದು ವಿಶೇಷ.

75ರ ವಯಸ್ಸಿನಲ್ಲೂ ಮತ್ತೊಂದು ಮದ್ವೆಯಾದ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್, ಮೃತ ಪತ್ನಿಯ ಅಕ್ಕನನ್ನೇ ಕೈಹಿಡಿದ
75ರ ವಯಸ್ಸಿನಲ್ಲೂ ಮತ್ತೊಂದು ಮದ್ವೆಯಾದ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್
Follow us on

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ (Hubballi Dharwad ex mayor) ಡಿ.ಕೆ. ಚವ್ಹಾಣ ತಮ್ಮ 75ರ ವಯಸ್ಸಿನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮೊದಲ ಪತ್ನಿ ಮೂರು ತಿಂಗಳ ಹಿಂದೆ ತೀರಿ ಹೋಗಿದ್ದರು. ಇದೀಗ ಡಿ.ಕೆ. ಚವ್ಹಾಣ ಅವರು ಮೃತ ಪತ್ನಿಯ ಅಕ್ಕನನ್ನು ವಿವಾಹವಾಗಿದ್ದಾರೆ(marriage). ಈ ಮೂಲಕ ಎರಡನೇ ಸಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಮಾಜಿ ಮೇಯರ್ ಮದುವೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅದ್ಧೂರಿಯಾಗಿ ಮದುವೆ ನಡೆದಿದೆ. ಈ ವಿವಾಹ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಭಾಗಿಯಾಗಿದ್ದು ವಿಶೇಷ.

ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ತೀರಿಹೋಗಿದ್ದರು. ಪತ್ನಿ ತೀರಿದ ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾರನ್ನ ಡಿ.ಕೆ. ಚವ್ಹಾಣ. ಮದುವೆಯಾಗಿದ್ದಾರೆ. ಡಿ.ಕೆ. ಚವ್ಹಾಣ ಇದು ಎರಡನೇ ಮದುವೆಯಾಗಿದ್ರೆ, ಅನಸೂಯಾ ಅವರಿಗೆ ಇದು ಮೊದಲ ಮದುವೆಯಾಗಿದೆ.

ಮೃತ ಮೊದಲ ಪತ್ನಿಯ ಮಕ್ಕಳು ಉದ್ಯೋಗದ ನಿಮಿತ್ತ ಬೇರೆ-ಬೇರೆ ಕಡೆಗಳಲ್ಲಿ ಇದ್ದಾರೆ. ಇದರಿಂದ ಮಾಜಿ ಮೇಯರ್ ಡಿ.ಕೆ. ಚವ್ಹಾಣ ಅವರನ್ನು ಮನೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಸಂಬಂಧಿಕರು ಸೇರಿ ಮಾತುಕತೆ ಮಾಡಿಯೇ ಎಲ್ಲರ ಒಪ್ಪಿಗೆ ಮೇರೆಗೆ ಡಿ.ಕೆ. ಚವ್ಹಾಣ ಅವರಿಗೆ ಮತ್ತೊಂದು ಮದುವೆ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Wed, 16 November 22