ಹುಬ್ಬಳ್ಳಿಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಮತಾಂತರ ವಿವಾದ; ಮತಾಂತರವಾಗುವಂತೆ ಪತ್ನಿಯಿಂದ ಪತಿಗೆ ಒತ್ತಡ
ಹಳೇ ಹುಬ್ಬಳ್ಳಿಯಲ್ಲಿ ಶಿಕ್ಕಲಿಗಾರ ಸಮುದಾಯವನ್ನು ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ (Hubli) ಮತ್ತೆ ಮತಾಂತರ (Conversion) ವಿವಾದ ಮುನ್ನೆಲೆಗೆ ಬಂದಿದೆ. ಹಳೇ ಹುಬ್ಬಳ್ಳಿಯಲ್ಲಿ ಶಿಕ್ಕಲಿಗಾರ ಸಮುದಾಯವನ್ನು ಟಾರ್ಗೆಟ್ ಮಾಡಿ ಕ್ರೈಸ್ತ (Christian) ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಶಿಕ್ಕಲಿಗಾರ ಸಮುದಾಯದ ಒಂದು ಕುಟಂಬದ ನಡುವೆ ಮತಾಂತರದ ವಿಚಾರವಾಗಿ ದಂಪತಿ ನಡುವೆ ಬಿರುಕು ಮೂಡಿದೆ. ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪತಿಗೆ ಒತ್ತಡ ಹಾಕುತ್ತಿದ್ದಾಳೆ. ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲವೆಂದು ಪತ್ನಿ ಬೆದರಿಕೆ ಹಾಕಿದ್ದಾಳಂತೆ.
ದಂಪತಿ ಇದೇ ವಿಚಾರವಾಗಿ ಹಲವು ಬಾರಿ ಠಾಣೆ ಮೆಟ್ಟಿಲೇರಿದ್ದರು. ಪೊಲೀಸ್ ಸಿಬ್ಬಂದಿ ಪ್ರತಿ ಬಾರಿ ರಾಜಿಸಂಧಾನ ಮಾಡಿ ಕಳುಹಿಸುತ್ತಿದ್ದರು. ಆದರೆ ಈಗ ಪತ್ನಿ, ಪತಿಗೆ ಹೆಚ್ಚಿಗೆ ಒತ್ತಡ ಹಾಕುತ್ತಿದ್ದಾಳೆ ಎಂದು ಪತಿ ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದಾನೆ.
ಹೀಗಾಗಿ ಪೊಲೀಸ್ ಠಾಣೆ ಎದುರು ಶಿಕ್ಕಲಿಗಾರ ಸಮುದಾಯದಿಂದ ಪ್ರತಿಭಟನೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮದನ್ ಬುಗುಡಿ ಸೇರಿದಂತೆ 15 ಜನರ ವಿರುದ್ಧ ದೂರು ದಾಖಲಾಗಿದೆ. ಮದನ್ ಬುಗುಡಿ ಶಿಕ್ಕಲಿಗಾರ ಸಮುದಾಯದ ರೌಡಿಶೀಟರ್ ಆಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ