ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಗರ ಪಾಲಿಕೆ ಚುನಾವಣೆಯು ಸಪ್ಟೆಂಬರ್ 3 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದಿಂದ (AAP) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಉತ್ತಮ ದರ್ಜೆಯ ಶಾಲೆ, ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ , ಎಲ್ಲಾ ಮನೆಗಳಿಗೆ ಪ್ರತೀ ತಿಂಗಳು 20 ಸಾವಿರ ಲೀಟರ್ ನೀರು ನೀಡುವ ಭರವಸೆಯನ್ನು ಆಮ್ ಆದ್ಮಿ ಪಕ್ಷ ನೀಡಿದೆ. ಆಮ್ ಆದ್ಮಿ ಪಕ್ಷ ಆಶ್ವಾಸನೆ ನೀಡುತ್ತಿಲ್ಲ, ಖಾತ್ರಿ ಪಡಿಸಲಿದೆ ಎಂದು ಹೇಳಿದ್ದಾರೆ. ಸ್ಮಾರ್ಟ್ ಸಿಟಿ, ಬಿಆರ್ಟಿಸಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಅಭ್ಯರ್ಥಿಗಳ 3 ಪಟ್ಟಿಗಳನ್ನ ಬಿಡುಗಡೆ ಮಾಡಿದ್ದೇವೆ. ಇನ್ನೊಂದು ಪಟ್ಟಿಯನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೆವೆ. ಉತ್ತಮ ದರ್ಜೆಯ ಶಾಲೆಯ ಜೊತೆ ಪ್ರತಿ ಮಕ್ಕಳಿಗೆ ಉಚಿತ ಲ್ಯಾಪ್ಟ್ಯಾಪ್ ನೀಡುತ್ತೇವೆ. ಪ್ರತಿ ತಿಂಗಳು 20 ಸಾವಿರ ಲೀಟರ್ ಪ್ರತಿ ಮನೆಗೆ ಕುಡಿಯವ ನೀರು ಸೇರಿದಂತೆ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಪ್ ಚುನಾವಣೆಯ ಪ್ರಣಾಳಿಕೆಯಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಸೆಪ್ಟೆಂಬರ್ 3ಕ್ಕೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಎಲೆಕ್ಷನ್; ಇಂದಿನಿಂದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಗೆಲ್ಲುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್: ಸತೀಶ್ ಜಾರಕಿಹೊಳಿ
(Hubballi Dharwad Municipality Elections AAP Manifesto promises Education Health Water facilities)