ರೋಗಿಯ ಕೈಗೇ ಗ್ಲುಕೋಸ್ ಬಾಟಲಿ ನೀಡಿದ ವೈದ್ಯರು! ಕಿಮ್ಸ್ ಮಾನ ಮೂರು ಕಾಸಿಗೆ ಹರಾಜು
ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ. ರೋಗಿಯ ಕೈಗೇ ಗ್ಲುಕೋಸ್ ಬಾಟಲ್ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್ ಬಾಟಲ್ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್ ಸೌಲಭ್ಯ […]
ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ.
ರೋಗಿಯ ಕೈಗೇ ಗ್ಲುಕೋಸ್ ಬಾಟಲ್ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್ ಬಾಟಲ್ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್ ಸೌಲಭ್ಯ ಇಲ್ಲದಿರುವುದಕ್ಕೆ ರೋಗಿಗಳು ಅನಾನುಕೂಲ ಅನುಭವಿಸುವಂತಾಗಿದೆ.
ವೈದ್ಯರ ಬೇಜವಾದ್ಬಾರಿ ವಿಡಿಯೇದಲ್ಲಿ ದಾಖಲು ಆದ್ರೆ ರೋಗಿಯ ಕೈಗೆ ಗ್ಲುಕೋಸ್ ಬಾಟಲಿ ನೀಡಿದ ಘಟನೆಯ ವಿಡಿಯೋ ಈಗ ಟಿವಿ9 ಗೆ ಸಿಕ್ಕಿದೆ. ಈ ವಿಡಿಯೋದಲ್ಲಿ ವೈದ್ಯರು ರೋಗಿಯ ಕೈಗೆ ಗ್ಲುಕೋಸ್ ಬಾಟಲ್ ಕೊಟ್ಟಿರೋದು, ಕೆಲವರಿಗೆ ಸ್ಟ್ರೇಚರ್‌ನಲ್ಲೇ ಚಿಕಿತ್ಸೆ ನೀಡಿರೋದು ಕಾಣುತ್ತೆ. ಇಷ್ಟೇ ಅಲ್ಲ, ರಾತ್ರಿ ವೇಳೆ ಯಾವುದೇ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರೋದೇ ಇಲ್ಲ. ಸರಿಯಾದ ಬೆಡ್‌ಗಳಿರೋದಿಲ್ಲ ಎನ್ನುವ ಆರೋಪಗಳು ಕಿಮ್ಸ್ ಸಿಬ್ಬಂದಿಯ ಮೇಲೆ ಕೇಳಿ ಬರುತ್ತಿವೆ.