ಹುಬ್ಬಳ್ಳಿ: ಖಾಸಗಿ ಕಾಲೇಜಿನ (College) ವಿದ್ಯಾರ್ಥಿನಿಯರ (Students) ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮನಲ್ಲಿ (Instagram) ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಠಾಣೆಯ ಪೊಲೀಸರು (Police) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ನವೀನ ಅಕ್ಕಿ ಹಾಗೂ ಹ್ಯಾಕರ್ ಕಿರಣ ಚೌಹಾನಗೌಡರ ಬಂಧಿತ ಆರೋಪಿಗಳು. ಇತ್ತೀಚಿಗೆ ಪೊಲೀಸರು ಇದೇ ಕಾಲೇಜಿನ ಹಳೇ ವಿದ್ಯಾರ್ಥಿ, ಆರೋಪಿ ರಂಜನಿಕಾಂತ್ನನ್ನು ಬಂಧಿಸಿದ್ದರು.
ಈ ಮೂವರಲ್ಲಿ ಮಾಸ್ಟರ್ ಮೈಂಡ್ ಕಿರಣ ಚೌಹಾನಗೌಡರ್ ಎಂಬುವುದು ತಿಳಿದುಬಂದಿದೆ. ಹ್ಯಾಕರ್ ಕಿರಣ ಚೌಹಾನಗೌಡರ್ ವಿದ್ಯಾರ್ಥಿನಿಯ ಇನ್ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದನು. ಕಿರಣ ಮಾಡುತ್ತಿದ್ದ ಹ್ಯಾಕ್ಗೆ ನವೀನ್ ಹಾಗೂ ರಜನಿಕಾಂತ್ ಸಾಥ್ ನೀಡುತ್ತಿದ್ದರು.
ಇದನ್ನೂ ಓದಿ: ತನ್ನೊಂದಿಗೆ ಮಾತನಾಡದ ಹುಡುಗಿಯರೇ ಇವನ ಟಾರ್ಗೆಟ್; ಆರೋಪಿ ಬಗ್ಗೆ ಸ್ಫೋಟಕ ಅಂಶ ಬಿಚ್ಚಿಟ್ಟ ಪೊಲೀಸ್ ಆಯುಕ್ತ
ಕಿರಣ್ ಚೌಹಾನಗೌಡರ್ ಈವರೆಗೂ ಅನೇಕ ಜನರ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದನು. ಇದೀಗ ವಿದ್ಯಾರ್ಥಿನಿಯರ ಇನ್ಸ್ಟಾಗ್ರಾಮ್ ಹ್ಯಾಕ್ ಮಾಡಿದ್ದನು. ಸೈಬರ್ ಪೊಲೀಸರು ಮೂವರು ಆರೋಪಿಗಳನ್ನು ಪ್ರತಿಯೊಂದು ಆಯಾಮದಲ್ಲಿ ತನಿಖೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.
ಆರೋಪಿ ರಜನಿಕಾಂತ್ ಕಳೆದ ಕೆಲದಿನಗಳ ಹಿಂದೆ ಇನ್ಸ್ಟಾಗ್ರಾಮನಲ್ಲಿ Kashmira1990_0 ಹೆಸರಿನ ನಕಲಿ ಖಾತೆ ತೆರೆದು ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದನು. ಅಲ್ಲದೇ ತಾಕತ್ ಇದ್ದರೇ ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲ್ ಹಾಕಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ