ಹುಬ್ಬಳ್ಳಿ, ಜನವರಿ 04: ಕರಸೇವಕ ಶ್ರೀಕಾಂತ ಪೂಜಾರಿ (Srikanta Pujari) ಜಾಮೀನು ಅರ್ಜಿಯನ್ನು ಹುಬ್ಬಳ್ಳಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದ್ದು, ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿ ನಾಳೆ ಮುಂದೂಡಲಾಗಿದೆ. ಆರೋಪಿ ಪರ ಸಂಜೀವ ಬಡಸ್ಕರ ವಾದ ಮಂಡನೆ ಮಾಡಿದ್ದಾರೆ. ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಶ್ರೀಕಾಂತಗೆ ನ್ಯಾಯಾಲಯ ವಾರಂಟ್ ಹೊರಡಿಸಿದೆ. 31 ವರ್ಷಗಳ ಬಳಿಕ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದರು.
ಶ್ರೀಕಾಂತ ಪೂಜಾರಿ 1992 ಗಲಭೆಯ ಆರೋಪಿ. ಹಜರೇಸಾಬ್ ಅಂಗಡಿ ಎಂಬುವರಿಗೆ ಸೇರಿದ್ದ ಅಡಿಕೆ ಮಾರಾಟ ಮಳಿಗೆಗೆ ಬೆಂಕಿ ಹಚ್ವಿದ ಆರೋಪ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡಬಾರದೆಂದು ತಕರಾರು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಶ್ರೀಕಾಂತ ಇಲ್ಲಿಯವರಿಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಒಂದು ವೇಳೆ ಈಗ ಜಾಮೀನು ನೀಡಿದರೆ ಮುಂದೆ ಅದೇ ರೀತಿ ಮಾಡಬಹುದು. ಈಗಾಗಲೇ ಆರೋಪಿ ಮೇಲೆ 13 ಪ್ರಕರಣ 3 ಮುನ್ನೆಚ್ಚರಿಕೆ ಪ್ರಕರಣಗಳಿವೆ.
ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ರಾಮಭಕ್ತನ ಸೋಗಿನಲ್ಲಿರುವ ವೃತ್ತಿಪರ ಕ್ರಿಮಿನಲ್: ದಿನೇಶ್ ಗುಂಡೂರಾವ್
ಈಗ ಜಾಮೀನು ನೀಡಿದರೆ ಮುಂದೆ ನ್ಯಾಯಾಲಯಕ್ಕೆ ಗೈರಾಬಹುದೆಂಬ ಕಾರಣವನ್ನು ಇನ್ಸ್‌ಪೆಕ್ಟರ್ ನೀಡಿದ್ದಾರೆ. ಈ ಕಾರಣದಿಂದ ಆರೋಪಿಗೆ ಜಾಮೀನು ನೀಡಬಾರದೆಂದು 5 ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಶಹರ ಠಾಣೆ ಇನ್ಸ್‌ಪೆಕ್ಟರ್ ಅರ್ಜಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಇಂದೂ ಕೂಡ ಬಿಜೆಪಿ ಪ್ರತಿಭಟನೆಯನ್ನು ಮುಂದುವರಿಸಿದೆ. ಬೆಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿಯಲ್ಲಿ ಕೇಸರಿ ಪಡೆ ಮತ್ತೆ ಕೆರಳಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಬಾಬುಡನ್ಗಿರಿಯಲ್ಲಿ ಗೋರಿ ಧ್ವಂಸ ಕೇಸ್ ರೀ ಓಪನ್: ಇದು ಅಪ್ಪಟ ಸುಳ್ಳು: ಸಿಎಂ ಸಿದ್ದರಾಮಯ್ಯ
ಸಾಮಾಜಿಕ ಜಾಲಾತಣಗಳಲ್ಲಿ ಪೋಸ್ಟರ್ ಚೇಂಜ್ ಮಾಡಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:01 pm, Thu, 4 January 24