ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ನಗರದಲ್ಲಿ ಜನವರಿ 12ರಂದು ನಡೆಯುತ್ತಿರುವ 26ನೇ ಯುವಜನೋತ್ಸವ-2023 ಕಾರ್ಯಕ್ರಮದಲ್ಲಿ(National Youth Festival) ಪಾಲ್ಗೊಳ್ಳುತ್ತಿರುವ ನಿಮಿತ್ತ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ.
ನವಲಗುಂದ ಕಡೆಯಿಂದ ಬರುವ ಬಸ್ಸುಗಳು ಕೆ.ಎಚ್. ಪಾಟೀಲ ರಸ್ತೆ ಶೃಂಗಾರ ಕ್ರಾಸ್ ಬಳಿ ಇಳಿಸಬೇಕು. ಗದಗ ರಸ್ತೆ ವಿನೋಭಾ ನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ನವಲಗುಂದ ರಸ್ತೆ ಕಡೆಯಿಂದ ಸರ್ವೋದಯ ಸರ್ಕಲ್, ಶೃಂಗಾರ ಕ್ರಾಸ್, ಸೇಂಟ್ ಎಂಡ್ರಿಯೋ ಸ್ಕೂಲ್, ಆರ್‌ಪಿಎಫ್ ಕ್ರಾಸ್ ಮೂಲಕ ವಿನೋಭಾ ನಗರ ಮೈದಾನ ತಲುಪಬೇಕು. ಗದಗ ಕಡೆಯಿಂದ ಬರುವ ಬಸ್ಸುಗಳು ಗದಗ ಕೆಳ ಸೇತುವೆ ಅಂಬೇಡ್ಕರ ಮೂರ್ತಿಯ ವೃತ್ತದಲ್ಲಿ ಜನರನ್ನು ಇಳಿಸಬೇಕು. ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಗದಗ ರಸ್ತೆ ಕೆಳ ಸೇತುವೆ ಮೂಲಕ ಅಂಬೇಡ್ಕರ ಮೂರ್ತಿ ಸುತ್ತುವರೆದು ಗದಗ ರಸ್ತೆಯ ಚಿಲ್ಲಿ ಮೈದಾನ ತಲುಪಬೇಕು.
ಗಬ್ಬೂರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಪೋಲೀಸ್ ಕ್ವಾರ್ಟರ್ಸ್ ಹತ್ತಿರ ಜನರನ್ನು ಇಳಿಸಬೇಕು. ಗಿರಣಿಚಾಳ ಮೈದಾನ ಹಾಗೂ ಎಂ.ಟಿ. ಮಿಲ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಬಂಕಾಪುರ ಚೌಕ್, ಕಮರಿಪೇಟೆ, ಮಿರ್ಜಾನಕರ ಪೆಟ್ರೋಲ್ ಪಂಪ್ ಸುತ್ತುವರೆದು ಗಿರಣಿಚಾಳ ಮೈದಾನ ಅಥವಾ ಎಂ.ಟಿ. ಮಿಲ್ ಮೈದಾನ ತಲುಪಬೇಕು.
ಇದನ್ನೂ ಓದಿ: PM Modi Hubballi Visit: ಜ. 12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ
ಕಾರವಾರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಗ್ಲಾಸ್ ಹೌಸ್ ಭಾವಿ ಹತ್ತಿರ ಜನರನ್ನು ಇಳಿಸಬೇಕು. ಗ್ಲಾಸ್ ಹೌಸ್ ಭಾವಿಯ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಕಾರವಾರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಎಂ.ಟಿ. ಮಿಲ್, ಗ್ಲಾಸ್ ಹೌಸ್ ಬಾವಿ ಮೈದಾನ ತಲುಪಬೇಕು. ಧಾರವಾಡ ನಗರ ಕಡೆಯಿಂದ ಬರುವ ಬಸ್ಸುಗಳು ಹಳೇಬಸ್ ನಿಲ್ದಾಣದ ಮುಂದೆ ಜನರನ್ನು ಇಳಿಸಬೇಕು. ಹೊಸೂರನ ರಾಯ್ಕರ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ನವನಗರ, ಬಿವಿಬಿ, ಹೊಸೂರ, ಲಕ್ಷ್ಮೀ ವೇ ಬ್ರಿಡ್ಜ್ ಮೂಲಕ ಗ್ಲಾಸ್ ಹೌಸ್ ಬಾವಿ ತಲುಪಬೇಕು.
ಜನವರಿ 11ಮತ್ತು 12ರಂದು ಮಧ್ಯಾಹ್ನ 01ರಿಂದ ಸಂಜೆ 7 ಗಂಟೆ ವರೆಗೆ ಗೋಕುಲ ರಸ್ತೆ ಮಾಪ್ಸಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರ ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತಸಿಂಗ್ ವೃತ್ತ, ಪ್ರವಾಸಿ ಮಂದಿರ ಎದುರು (ಐಬಿ), ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.
ಕಾರವಾರ ರಸ್ತೆಯಿಂದ ಬರುವ ಬಸ್ಸುಗಳಿಗೆ ಕಾರವಾರ ರಸ್ತೆ ಪ್ಲಾಜಾ (ಅಂಡರ್ ಬ್ರಿಡ್ಜ್) ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ನಗರದ ಒಳಗಡೆ ಸಂಚಾರ ನಿಷೇಽಸಲಾಗಿದೆ. ಲಾಂಗ್ ರೂಟ್‌ಬಸ್ಸುಗಳು ರಿಂಗ್ ರೋಡ್ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ಬೆಂಗಳೂರು ರಸ್ತೆಯಿಂದ ಬರುವ ಬಸ್ಸುಗಳಿಗೆ ಗಬ್ಬೂರ ಬಪಾಸ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ರಿಂಗ್ ರೋಡ್ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು. ಗದಗ ರಸ್ತೆಯಿಂದ ಬರುವ ಬಸ್ಸುಗಳಿಗೆ ಗದಗ ರಸ್ತೆ ರೈಲ್ವೆ ಲೋಕೋ ಶೆಡ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ರಿಂಗ್ ರಸ್ತೆ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ನವಲಗುಂದ ಕಡೆಯಿಂದ ಬರುವ ಬಸ್ಸುಗಳಿಗೆ ಆಕ್ಸಫರ್ಡ್ ಕಾಲೇಜ್ ರೈಲ್ವೆ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದ್ದು, ಲಾಂಗ್ ರೂಟ್‌ಬಸ್ಸುಗಳು ರಿಂಗ್ ರಸ್ತೆ ಹಾಗೂ ಬೈಪಾಸ್ ಮುಖಾಂತರ ಸಂಚರಿಸಬೇಕು.
ಧಾರವಾಡ ಕಡೆಯಿಂದ ತಾರಿಹಾಳ ಬ್ರಿಡ್ಜ್ ಕಡೆಗೆ ಬರುವ ಲಾಂಗ್ ರೂಟ್ ಬಸ್ಸುಗಳಿಗೆ ತಾರಿಹಾಳ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ಬಪಾಸ್ ಮುಖಾಂತರ ಸಂಚರಿಸಬೇಕು. ಹುಬ್ಬಳ್ಳಿ-ಧಾರವಾಡ ನಗರದ ಮಧ್ಯೆ ಸಂಚರಿಸುವ ಚಿಗರಿ ಬಸ್ಸುಗಳು, ಬೇಂದ್ರೆ ಬಸ್ಸುಗಳು, ನಗರ ಸಾರಿಗೆ ಬಸ್ಸುಗಳು ಧಾರವಾಡ ಕಡೆಯಿಂದ ಬಂದು ಕೆಎಂಸಿ ಆಸ್ಪತ್ರೆಯ ಒಳಗಡೆ ಹೋಗಿ ಟರ್ನ್ ಮಾಡಿಕೊಂಡು ಮರಳಿ ಧಾರವಾಡ ಕಡೆಗೆ ಹೋಗಬೇಕು.
ಇತರೆ ವಾಹನಗಳ ಮಾರ್ಗ ಬದಲಾವಣೆ: ಧಾರವಾಡದಿಂದ ಬರುವ ಲಘು ವಾಹನಗಳಿಗೆ ಪ್ರೆಸಿಡೆಂಟ್ ಹೋಟೆಲ್ ಮುಖಾಂತರ ಸಾಯಿನಗರ, ಜೆ.ಕೆ ಸ್ಕೂಲ್, ಗೋಪನಕೊಪ್ಪ ಮೂಲಕ ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಹಾಯ್ದು ಹೋಗಬೇಕು.
ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ ಒಳಗೆ ಹಾಯ್ದು ಗಾಮನಗಟ್ಟಿ ಕೈಗಾರಿಕಾ ವಸಾಹತು ಮೂಲಕ ತಾರಿಹಾಳ ಬೈಪಾಸ್ ಸೇರಬೇಕು. ನವಲಗುಂದ, ಗದಗ ಕಡೆಯಿಂದ ಬರುವ ಭಾರಿ ವಾಹನಗಳಿಗೆ ನಗರದಲ್ಲಿ ಸಂಚಾರ ನಿಷೇದಿಸಲಾಗಿದ್ದು, ರಿಂಗ್ ರಸ್ತೆ ಮೂಲಕ ಸಂಚರಿಸಬೇಕೆಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ
Published On - 11:54 am, Wed, 11 January 23