AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Youth Fest: ರಾಷ್ಟ್ರೀಯ ಯುವಜನೋತ್ಸಕ್ಕೆ 600 ಬಾಣಸಿಗರಿಂದ ತಯಾರಾಗುತ್ತಿದೆ ವಿವಿಧ ರಾಜ್ಯಗಳ ತರಹೇವಾರಿ ಆಹಾರ; ಮೆನು ಓದಿದರೇ ಬಾಯಲ್ಲಿ ನೀರು ಬಾರದೆ ಇರದು

Hubli-Dharwad: ಜನವರಿ 12 ರಿಂದ 16 ರ ವರೆಗೆ ಹುಬ್ಬಳ್ಳಿ - ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕಾಗಿ ದೇಶದ ವಿವಿಧ ಭಾಗಗಳ ಸ್ವಾದಿಷ್ಟ ಭಕ್ಷ್ಯಗಳು ತಯಾರಾಗುತ್ತಿವೆ.

National Youth Fest: ರಾಷ್ಟ್ರೀಯ ಯುವಜನೋತ್ಸಕ್ಕೆ 600 ಬಾಣಸಿಗರಿಂದ ತಯಾರಾಗುತ್ತಿದೆ ವಿವಿಧ ರಾಜ್ಯಗಳ ತರಹೇವಾರಿ ಆಹಾರ; ಮೆನು ಓದಿದರೇ ಬಾಯಲ್ಲಿ ನೀರು ಬಾರದೆ ಇರದು
ಯುವಜನೋತ್ಸವಕ್ಕೆ ಊಟ ತಯಾರಿಸುತ್ತಿರುವುದು
TV9 Web
| Updated By: ವಿವೇಕ ಬಿರಾದಾರ|

Updated on: Jan 10, 2023 | 7:23 PM

Share

ಹುಬ್ಬಳ್ಳಿ-ಧಾರವಾಡ: ಜನವರಿ 12 ರಿಂದ 16 ರ ವರೆಗೆ ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ದೇಶದ ವಿವಿಧ ಭಾಗಗಳ ಸ್ವಾದಿಷ್ಟ ಭಕ್ಷ್ಯಗಳು ತಯಾರಾಗುತ್ತಿವೆ. 600 ಜನ ಬಾಣಸಿಗರು 1 ಲಕ್ಷ ಜನರಿಗಾಗಿ ಗುಣಮಟ್ಟದ ವೈವಿಧ್ಯಮಯ ತಿಂಡಿ, ತಿನಿಸುಗಳ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಧಾರವಾಡದ ಕೃಷಿ ವಿವಿ ಆವರಣದ ಐದು ಎಕರೆ ವಿಶಾಲ ಪ್ರದೇಶದಲ್ಲಿ ಆಹಾರ ತಯಾರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕೃಷಿ ವಿವಿಯ ಸಭಾಂಗಣದಲ್ಲಿ ಊಟ ಬಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ದೇಶದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಈ ಯುವ ಜನೋತ್ಸವದಲ್ಲಿ ಆಹಾರ ವೈವಿಧ್ಯೆದ್ಯತೆಗೂ ಒತ್ತು ನೀಡಲಾಗಿದೆ. ಎಲ್ಲಾ ಬಗೆಯ ಭಕ್ಷ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತಿದೆ. ಆಹಾರ ವಸ್ತುಗಳು, ಪಾತ್ರೆ, ಪಗಡೆಗಳು 12 ಲಾರಿಗಳಲ್ಲಿ ಸಾಮಗ್ರಿಗಳು ಬಂದಿಳಿದಿವೆ. ತರಕಾರಿಗಳನ್ನು ಸ್ಥಳೀಯ ಮಾರಾಟಗಾರರಿಂದ ಖರೀದಿಸಲಾಗಿದೆ. ಆಹಾರ ತಯಾರಿಕೆಗಾಗಿ ಸಿದ್ಧತೆ ತೀವ್ರಗತಿಯಲ್ಲಿ ಸಾಗಿದೆ.

ಊಟದ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರಿನ ಕೇಟರಿಂಗ್ ಕಂಪನಿಯಿಂದ ಒಂದು ಬಾರಿಗೆ 7 ರಿಂದ 8 ಸಾವಿರ ಪ್ರತಿನಿಧಿಗಳಿಗೆ ಮುಂಜಾನೆ ತಿಂಡಿ, ಮಧ್ಯಾಹ್ನದ ಊಟ, ಸಾಯಂಕಾಲ ಚಹಾ ಹಾಗೂ ರಾತ್ರಿಯ ಊಟ ಸಿದ್ಧಪಡಿಸಲಾಗುವುದು. ಪ್ರತಿ ದಿನವೂ ಆಹಾರದಲ್ಲಿ ವೈವಿಧ್ಯತೆ ಇರಲಿದೆ. ಒಂದು ದಿನ ಉತ್ತರ ಕರ್ನಾಟಕ ಕಡಕ್ ರೊಟ್ಟಿ, ವೈವಿದ್ಯಮಯ ಪಲ್ಯವನ್ನೊಳಗೊಂಡ ವಿಶೇಷ ಆಹಾರ ಸಿದ್ಧಪಡಿಸಲಾಗುವುದು. ಉತ್ತರ ಭಾರತ, ದಕ್ಷಿಣ ಭಾರತ ಶೈಲಿಯ ಖಾದ್ಯಗಳು ವಿಶೇಷವಾಗಿರಲಿವೆ. ಪ್ರತಿದಿನ ಒಂದೊಂದು ರೀತಿಯ ಪಾಯಸ ಇರಲಿದ್ದು, ಅಗತ್ಯಕ್ಕೆ ತಕ್ಕಂತೆ ಆಹಾರದ ಮೆನು ಬದಲಾವಣೆಗೂ ಸಿದ್ದರಾಗಿದ್ದಾರೆ. ಅಡುಗೆ ತಯಾರಿಸಲು ಮಲಪ್ರಭಾ ನದಿಯಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ಇದನ್ನೂ ಓದಿ: ಸರ್ಕಾರ, ಖಾಸಗಿ ಸಂಘ ಸಂಸ್ಥೆಗಳಿಂದ ಹರಿದು ಬಂದ ದೇಣಿಗೆ; ಅವಳಿ ನಗರದ ಹೃದಯ ಶ್ರೀಮಂತಿಕೆ ಅನಾವರಣ

ಆರೋಗ್ಯ ರಕ್ಷಣೆ, ಗುಣಮಟ್ಟ, ಸ್ವಾದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಊಟ ಬಡಿಸಲು ಪ್ರತಿಯೊಂದು ಕೌಂಟರ್​ಗೆ ಒಂದೊಂದು ತಂಡವನ್ನು ನೇಮಿಸಿದ್ದು, 20 ಕೌಂಟರ್​ಗಳನ್ನು ತೆರೆಯಲಾಗಿದೆ. ಒತ್ತಡ ಹೆಚ್ಚಾದಲ್ಲಿ ಊಟದ ಕೌಂಟರ್​ಗಳ ಸಂಖ್ಯೆ ಹೆಚ್ಚಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆರು ದಿನಗಳ ಕಾಲ ಊಟೋಪಚಾರದ ಆತಿಥ್ಯ ವಹಿಸಿಕೊಂಡಿದ್ದು, ಪ್ರತಿಯೊಂದು ದಿನವೂ ವಿಶೇಷವೇ. ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನದಲ್ಲೂ ನಾವೀನ್ಯತೆ ಇರಲಿದ್ದು, ಮಧ್ಯಾಹ್ನ ಮಾಂಸಾಹಾರ ಇರುವುದಿಲ್ಲ. ರಾತ್ರಿ ಭೋಜನದಲ್ಲಿ ಪ್ರತಿ ದಿನ ಒಂದೊಂದು ಬಗೆಯ ಮಾಂಸಾಹಾರ ಖಾದ್ಯವಿರಲಿದೆ.

ಊಟದ ಮೆನು

1 ನೇ ದಿನ: ಬೆಳಿಗ್ಗೆ- ಬಾಳೆ ಹಣ್ಣು, ಕಲ್ಲಂಗಡಿ, ಬ್ರೆಡ್, ಬಟರ್, ಜಾಮ್, ಕಾರ್ನ್ ಫ್ಲಕ್ಸ್, ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಆಲೂ ಪರೋಟ, ಶಾವಿಗೆ ಉಪ್ಪಿಟ್ಟು, ಕಾಫಿ, ಟೀ, ಮಿನಿ ರಸ್ಕ್ ಮತ್ತು ಖಾರಿ, ಬಿಸಿ ಮತ್ತು ತಂಪಾದ ಬಾದಾಮಿ ಹಾಲು. ಮಧ್ಯಾಹ್ನ- ಬಿಂದಿ ಮಸಾಲ, ಪನ್ನೀರ್ ಮಟ್ಟರ್, ದಾಲ್ ಮಖಾನಿ, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ, ಕ್ಯಾರೇಟ್ ಹಲ್ವಾ. ಸಂಜೆ- ಹೈ ಟೀಗೆ ತರಕಾರಿ ಮಿಶ್ರಣದ ಪಕೋಡ, ಕುಕೀಸ್, ಕಾಫಿ ಟೀ. ರಾತ್ರಿ – ಮಟನ್, ಮೇಥಿಮತರ್ ಮಲೈ, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಪಾಸ್ತಾ, ಟೊಮೊಟೋ ರೈಸ್, ಜಿಲೇಬಿ ಡಬ್ಡಿ,

2 ನೇ ದಿನ: ಬೆಳಿಗ್ಗೆ- ಪರಂಗಿ/ಸೇಬು ಹಣ್ಣು, ಇಡ್ಲಿ, ವಡೆ, ಚೋಲೆ ಬತುರಾ ಪೊಹ ಮತ್ತು ದೋಕ್ಲಾ ಮಧ್ಯಾಹ್ನ- ಪನೀರ್ ಬಟರ್ ಮಸಾಲ, ಆಲೂ ಗೋಬಿ, ದಾಲ್ ತಡ್ಕ, ಗೋಧಿ ರೋಟಿ, ಕುಲ್ಚಾ, ತಂದೂರಿ ರೋಟಿ, ಫ್ರೈಡ್ ರೈಸ್, ಶೆಜ್ವಾನ್ ಫ್ರೈಡ್ ರೈಸ್, ಮೂಂಗ್ ದಾಲ್ ಹಲ್ವಾ. ಸಂಜೆ- ವಡಾಪಾವ್, ಕುಕೀಸ್. ರಾತ್ರಿ- ಮೀನು, ಮಲಾಯ್ ಕೋಪ್ತಾ, ಬೆಂಡ್ ದಾಲ್ ಪಾಲಾಕ್, ವಿವಿಧ ರೋಟಿಗಳು, ನೂಡಲ್ಸ್, ತುಪ್ಪದ ಅನ್ನ, ಶಶಿ ತುಡ್ಕಾ,

3 ನೇ ದಿನ : ಬೆಳಿಗ್ಗೆ- ಕಿತ್ತಲೆ/ಬಾಳೆ ಹಣ್ಣು, ಬ್ರೆಡ್, ಬಟರ್, ಜಾಮ್, ಬೇಯಿಸಿದ ಮೊಟ್ಟ, ಪಲ್ಯ. ಆಮ್ಲೆಟ್, ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್. ಮಧ್ಯಾಹ್ನ-ರಾಜ್ಮಾ ಮಸಾಲ, ಶಿಮ್ಲಾ ಮಿರ್ಚಿ ಆಲೂ ಕಿ ಸಬ್ಜಿ, ಪಾಲಕ್ ಪನ್ನೀರ್, ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ವೆಜ್ ಬಿರಿಯಾನಿ, ಗುಲಾಬ್ ಜಾಮೂನ್ ; ಸಂಜೆ ಮೈಸೂರು ಬಜ್ಜಿ, ಕುಕೀಸ್. ರಾತ್ರಿ-ಮೊಟ್ಟೆ ಸಾರು, ಪನ್ನೀರ್ ಬುರ್ಜಿ, ದಾಲ್ ಕೊಲ್ಹಾಪುರಿ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಜೀರಾ ರೈಸ್.

ಇದನ್ನೂ ಓದಿ: ಯುವಜನೋತ್ಸವ ಅತಿಥಿಗಳಿಗೆ ನೋಂದಣಿ ಕಿಟ್; ಪ್ರಧಾನಿ ಮೋದಿಗಾಗಿ ತಯಾರಾಗಿದೆ ವಿಶೇಷ ರಾಷ್ಟ್ರ ಧ್ವಜ

4 ನೇ ದಿನ: ಬೆಳಿಗ್ಗೆ- ಪರಂಗಿ/ಸೀಬೆ ಹಣ್ಣು, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲಾಕ್ಸ್, ಬೇಯಿಸಿದ ಮೊಟ್ಟ, ಪಲ್ಯ. ಆಮ್ಲೆಟ್, ಇಡ್ಲಿ, ವಡೆ, ಸಬೂದನ ಕಿಚ್ಡಿ ಮಧ್ಯಾಹ್ನ- ಶಾಹಿ ಪನ್ನೀರ್, ಮಶ್ರೂಮ್ ಮಸಾಲ, ರೋಟಿಗಳು, ಜೀರಾ ರೈಸ್, ಶಾವಿಗೆ ಪಾಯಸ. ಸಂಜೆ- ಸಾಬೂದಾನಾ ವಡೆ, ಕುಕೀಸ್. ರಾತ್ರಿ- ಮೀನು, ಪನ್ನೀರ್ ಬುರ್ಜಿ, ಬೀಟ್ ರೋಟ್ ಮಸಾಲ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ರಸ್ಮಲೈ

5 ನೇ ದಿನ: ಬೆಳಿಗ್ಗೆ- ಕಲ್ಲಂಗಡಿ/ಕಿತ್ತಲೆ, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲೆಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಟೊಮೊಟೋ ರೈಸ್. ಮಧ್ಯಾಹ್ನ- ಉತ್ತರ ಕರ್ನಾಟಕದ ವಿಶೇಷ, ಎಣ್ಣೆಗಾಯಿ ಬದನೆಕಾಯಿ, ಜುಂಕಾ, ಸಂಜ್ಕಾ, ಹೆಸರು ಕಾಳು ಪಲ್ಯ, ಸಜ್ಜಿ/ಖಾಕಡ್ ರೋಡಿ, ಚಪಾತಿ, ಮೂರು ರೀತಿಯ ಚಟ್ನಿ ಪೌಡರ್, ನಿಂಬೆ ಹಣ್ಣಿನ ಚಿತ್ರಾನ್ನ, ಅನ್ನ, ಕಟ್ಟು ಸಾರು, ರಸಂ, ಸಾಂಬಾರ್, ಗೋಧಿ ಹುಗ್ಗಿ: ಸಂಜೆ ಗುರ್ಮಿಟ್, ಮಿರ್ಚಿ. ರಾತ್ರಿ-ಕೋಳಿ ಖಾದ್ಯ, ಅಲಸಂದೆ ಕಾಳು ಪಲ್ಯ, ಪನ್ನೀರ್ ಮಿಕ್ಸ್ ವೆಜ್, ವಿವಿಧ ರೋಟಿಗಳು, ರೆಡ್ ಸಾಸ್/ ವೈಟ್ ಸಾಸ್ ಪಾಸ್ತಾ, ಪಾಲಕ್ ರೈಸ್, ಹೆಸರು ಬೇಳೆ ಪಾಯಿಸ,

6 ನೇ ದಿನ: ಬೆಳಿಗ್ಗೆ-ಬಾಳೆ ಹಣ್ಣು/ಸೇಬು, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲಾಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಗೋಭಿ, ಆಲೂ ಪರೋಟ, ಪುಳಿಯೊಗರೆ ಅಥವಾ ಪೊಂಗಲ್. ಮಧ್ಯಾಹ್ನ-ವೆಜ್ ಹಂಡಿ, ದಾಲ್ ಮೇಥಿ, ಪನ್ನೀರ್, ರೋಟಿಗಳು, ಮಹಾರಾಷ್ಟ್ರ ಮಸಾಲ ಬಾತ್ ಅಥವಾ ಗ್ರೀನ್ ಪಲಾವ್, ಫೀರ್ನಿ, ಸಂಜೆ ದಾಲ್ ವಡಾ, ಕುಕೀಸ್. ರಾತ್ರಿ-ಮಟನ್ ಖೀಮಾ, ಪನ್ನೀರ್ ಧಮ್ ಆಲೂ, ಗೋಬಿ ಬಜಾರ್ ಮಟರ್, ವಿವಿಧ ರೋಟಿಗಳು, ದೋಸೆ, ಸಾಲಡ್, ದಾಲ್ ಕಿಚಡಿ ಮತ್ತು ಗುಜರಾತಿಖಾದಿ, ಫ್ರೈಡ್ ರೈಸ್, ಕರದಂಟು/ಕುಂದಾ ಇರಲಿದೆ.

ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ-9, ಧಾರವಾಡ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ