Updated on: Dec 10, 2022 | 2:07 PM
ಗ್ರಾಮೀಣ ಕ್ರೀಡೆ ಮರೆಯಾಗುವ ಸಮಯದಲ್ಲಿ ಹುಬ್ಬಳ್ಳಿಯ ಉಳವೇಶ್ವರ ದೇವಸ್ಥಾನದ ವತಿಯಿಂದ ಖಾಲಿ ಕಬ್ಬಿಣದ ಚಕ್ಕಡಿ ಓಡಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಒಂದು ನಿಮಿಷದ ಸಮಯದಲ್ಲಿ ಯಾರೂ ಹೆಚ್ಚು ದೂರ ಚಕ್ಕಡಿ ಎಳೆಯುತ್ತಾರೋ ಅವರಿಗೆ ಬಹುಮಾನ ಕೋಡಲಾಗತ್ತದೆ.
ಉಳುವೇಶ್ವರ ಕಾರ್ತಿಕೋತ್ಸವದ ಹಿನ್ನಲೆ ಹುಬ್ಬಳ್ಳಿಯ ಬೈರಿದೇವರಕೊಪ್ಪ ಹೊರವಲಯದ ಕಬ್ಬಿಣದ ಖಾಲಿ ಚಕ್ಕಡಿ ಎಳೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಒಬ್ಬರಿಗೆ ಒಂದು ಬಾರಿ ಎಳೆಯುವ ಅವಕಾಶವನ್ನ ನೀಡಲಾಗಿತ್ತು.
ಪ್ರತಿ ಸಲ ಎತ್ತಿನ ಬಂಡಿ ಸ್ಪರ್ಧೆ ಆಯೋಜನೆ ಮಾಡುತ್ತಿದ್ದ ಆಯೋಜಕರು, ಇದೇ ಮೊದಲ ಬಾರಿಗೆ ಕಾಲಿ ಚಕ್ಕಡಿಯನ್ನ ಎಳೆಯುವ ಸ್ಪರ್ಧೆ ಆಯೋಜನೆ ಮಾಡಿದ್ದಾರೆ. ಇದರ ಹಿಂದೆ ಒಂದು ಕಾರಣವು ಇದೆ. ಚಕ್ಕಡಿ ಎಳೆಯೋದು ಎತ್ತುಗಳಿಗೆ ಹೇಗೆ ಕಷ್ಟ ಆಗತ್ತದೆ ಎನ್ನುವುದು ಗೊತ್ತಾಗಲಿ ಎಂದು ಈ ಬಾರಿ ಮನುಷ್ಯ ಚಕ್ಕಡಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಖಾಲಿ ಕಬ್ಬಿಣದ ಚಕ್ಕಡಿ ಸ್ಪರ್ಧೆ ನೋಡುಗರಿಗೆ ಕೆಲ ಕಾಲ ಖುಷಿ ಕೊಟ್ಟಿತು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆ ಮರೆಯಾಗುವ ಹಿನ್ನಲೆ ಜನ ಚಕ್ಕಡಿ ಸ್ಪರ್ಧೆ ನೋಡಿ ಖುಷಿ ಪಟ್ಟರು.
ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವಾರು ಕಡೆಗಳಿಂದ ಬಂದು ನೂರಾರು ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹೀಗೆ ಚಕ್ಕಡಿ ಎಳೆಯುವ ವೇಳೆ ಕೆಲ ಯುವಕರು ಕೆಳಗೆ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿದ್ವು, ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನಗದು ಬಹಮಾನವನ್ನ ನೀಡಲಾಗುತ್ತದೆ.
ಹುಬ್ಬಳ್ಳಿಯಲ್ಲಿ ಖಾಲಿ ಕಬ್ಬಿಣದ ಚಕ್ಕಡಿ ಓಡಿಸೋ ಸ್ಪರ್ಧೆಯನ್ನ ಇದೇ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆ ವೇಳೆ ಕೆಲ ನಿಯಮಗಳನ್ನ ಆಯೋಜಕರು ಹಾಕಿದ್ದು, ಆಕಸ್ಮಾತ್ ಯಾರಾದರೂ ಬಿದ್ದು ಅನಾಹುತವಾದರೆ ನಾವು ಹೊಣೆ ಅಲ್ಲ ಎಂದು ಮೊದಲೇ ಹೇಳಿತ್ತು, ಇನ್ನು ಚಕ್ಕಡಿ ಸ್ಪರ್ಧೆಯಲ್ಲಿ ಬೈಲಹೊಂಗಲದಿಂದ ಬಂದ ಯುವಕ 10 ಸಾವಿರ ಬಹುಮಾನ ಗೆದ್ದಿದ್ದಾನೆ.