
ಧಾರವಾಡ: ಹುಬ್ಬಳ್ಳಿ (Hubli) ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ಡಿಸೆಂಬರ್ 2 ರಿಂದ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹೆಸ್ಕಾಂನ (HESCOM) 11 ಕೆ.ವಿ. ಮಾರ್ಗದ ಹುಬ್ಬಳ್ಳಿ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಅಂಚಟಗೇರಿ, ಬ್ಯಾಹಟ್ಟಿ, ಶಿರಗುಪ್ಪಿ ಮತ್ತು ನೂಲ್ವಿ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಫೀಡರ್ಗಳ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಡಿಸೆಂಬರ್ 2 ರಿಂದ 6 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 pm, Wed, 30 November 22