ಹುಬ್ಬಳ್ಳಿ ಗಲಭೆ ಖಂಡಿಸಿದ ಮೌಲ್ವಿ: ಪೊಲೀಸರಿಂದ ಕಿಡಿಗೇಡಿಗಳ ಮೇಲೆ ಮತ್ತೆರೆಡು ಪ್ರಕರಣ ದಾಖಲು

‘ನಮಗೆ ಮುತ್ತಿಗೆ ಹಾಕಿದಾಗ ಜೀಪ್​​ನಲ್ಲಿ ಹತ್ತಿ ಕುಳಿತೆವು. ಅವರು ಕೊಲೆ ಮಾಡುವ ಮತ್ತು ಕರ್ತವ್ಯಕ್ಕೆ ಅಡಿಪಡಿಸುವ ಉದ್ದೇಶದಿಂದ ನಮ್ಮ (ಪೊಲೀಸ್) ವಾಹನದ ಮೇಲೆ ಕಲ್ಲು ತೂರಾಟ ಮಾಡಿದರು’ ಎಂದು ದೂರಿನಲ್ಲಿ ಹೇಳಲಾಗಿದೆ.

ಹುಬ್ಬಳ್ಳಿ ಗಲಭೆ ಖಂಡಿಸಿದ ಮೌಲ್ವಿ: ಪೊಲೀಸರಿಂದ ಕಿಡಿಗೇಡಿಗಳ ಮೇಲೆ ಮತ್ತೆರೆಡು ಪ್ರಕರಣ ದಾಖಲು
ಹುಬ್ಬಳ್ಳಿ ಗಲಭೆ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 17, 2022 | 12:35 PM

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸ್ಯಾಪ್​ ಸ್ಟೇಟಸ್​ ಕಾರಣದಿಂದ ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೆರೆಡು ಪ್ರಕರಣಗಳು ದಾಖಲಾಗಿವೆ. ಕೇಶ್ವಾಪುರದ ಇನ್​ಸ್ಪೆಕ್ಟರ್ ಜಗದೀಶ್ ನೀಡಿದ್ದ​​​ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವಹೇಳನಕಾರಿ ಸ್ಟೇಟಸ್​ ಹಾಕಿದ್ದವನನ್ನು ನಿಮ್ಮ ಪೊಲೀಸರು ಈವರೆಗೂ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದಿದ್ದರೆ ನಿಮ್ಮನ್ನು ಕೊಲ್ಲುತ್ತೇವೆ ಎಂಬ ಬೆದರಿಕೆಯನ್ನು ದೂರು ನೀಡಿರುವ ಇನ್​ಸ್ಪೆಕ್ಟರ್ ಜಗದೀಶ್ ಉಲ್ಲೇಖಿಸಿದ್ದಾರೆ. ‘ನಮಗೆ ಮುತ್ತಿಗೆ ಹಾಕಿದಾಗ ಜೀಪ್​​ನಲ್ಲಿ ಹತ್ತಿ ಕುಳಿತೆವು. ಅವರು ಕೊಲೆ ಮಾಡುವ ಮತ್ತು ಕರ್ತವ್ಯಕ್ಕೆ ಅಡಿಪಡಿಸುವ ಉದ್ದೇಶದಿಂದ ನಮ್ಮ (ಪೊಲೀಸ್) ವಾಹನದ ಮೇಲೆ ಕಲ್ಲು ತೂರಾಟ ಮಾಡಿದರು’ ಎಂದು ದೂರಿನಲ್ಲಿ ಹೇಳಲಾಗಿದೆ.

ಕೆಲ ಜನರು ಗುಂಪು ಸೇರಿಕೊಂಡು ಗಲಾಟೆ ಮಾಡುತ್ತಿದ್ದಾರೆ. ಕೂಡಲೇ ಹಳೇ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ಬನ್ನಿ ಮೇಲಧಿಕಾರಿಗಳ ಆದೇಶಿಸಿದ್ದರು. ಅದರಂತೆ ನಿನ್ನೆ ರಾತ್ರಿ 10.30 ಗಂಟೆಯ ಸುಮಾರಿಗೆ ಸರ್ಕಾರಿ ಜೀಪ್ ತೆಗೆದುಕೊಂಡು ಅರವಿಂದ ನಗರ ಕ್ರಾಸ್ ಸಮೀಪ ಬಂದಾಗ ಸುಮಾರು 100 ರಿಂದ 150 ಜನರು ಗುಂಪು ಸೇರಿ ನಮಗೆ ಮುಂದೆ ಸಾಗಲು ಅವಕಾಶ ನೀಡದೆ ಅಡ್ಡಪಡಿಸಿದರು. ಕೈಯಲ್ಲಿ ಕಟ್ಟಿಗೆ ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಮುತ್ತಿಗೆ ಹಾಕಿದರು. ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿದವನನ್ನು ಈವರೆಗೆ ಬಂಧಿಸಿಲ್ಲ. ಪೋಸ್ಟ್ ಹಾಕಿದವನನ್ನು ಬಂಧಿಸದಿದ್ದರೆ ನಿಮ್ಮೆಲ್ಲರನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು. ನಾವು ಜೀಪ್ ಹತ್ತಿ ಬಾಗಿಲು ಲಾಕ್ ಮಾಡಿಕೊಂಡೆವು. ನಮ್ಮನ್ನು ಕೊಲೆ ಮಾಡುವ ಮತ್ತು ಕರ್ತವ್ಯಕ್ಕೆ ಅಡಿಪಡಿಸುವ ಉದ್ದೇಶ ಅವರಿಗೆ ಇತ್ತು. ಕಲ್ಲಿನಿಂದ ನಮ್ಮ ವಾಹನದ ಹಿಂಬದಿ ಗ್ಲಾಸ್, ಬಲಬದಿಯ ಸೈಡ್ ಗಾಸ್, ಡ್ರೈವರ್ ಸಮೀಪದ ಡೋರ್ ಗಾರ್ಡಗೆ ಹೊಡೆದರು ಎಂದು ದೂರಿನಲ್ಲಿ ಹೇಳಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಈವರೆಗೆ 6 ಪ್ರಕರಣಗಳು ದಾಖಲಾಗಿವೆ.

ಆಡಿಯೊ ವೈರಲ್ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ ಆಡಿಯೊ ಒಂದು ವೈರಲ್ ಆಗಿದೆ. ಕಲ್ಲು ತೂರಾಟದ ಬಗ್ಗೆ ನಿಮ್ಮ ಮೊಬೈಲ್​ಗಳಲ್ಲಿ ಇರಬಹುದಾದ ದೃಶ್ಯಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಲಾಗಿದೆ. ಈ ಆಡಿಯೊ ಮುಸ್ಲಿಂ ಸಮಾಜದ ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ವೈರಲ್ ಆಗಿದೆ. ಕಲ್ಲು ತೂರಾಟ ವಿಷ್ಯುವಲ್ ಹಂಚಿಕೊಳ್ಳುವುದರಿಂದ ಪೊಲೀಸರು ನಮ್ಮನ್ನು ಗುರುತಿಸುತ್ತಾರೆ. ಜೈಲಿಗೂ ಕಳಿಸಬಹುದು. ನಿನ್ನೆ ಏನೆಲ್ಲಾ ಆಗಿದೆಯೋ ಅದಕ್ಕೆ ಅಲ್ಲಾಹ್​ನ ಸೂಚನೆ ಕಾರಣ. ಕಲ್ಲು ತೂರಾಟ ನಡೆಸಿದವರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ ಎಂಬ ಆಡಿಯೊ ಸಂದೇಶ ವೈರಲ್ ಆಗಿದೆ.

ಎಂಟು ತಂಡ ರಚನೆ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ನಡೆದ ಪ್ರಕರಣದ ತನಿಖೆ ನಡೆಸಲು 8 ಮಂದಿಯ ಪ್ರತ್ಯೇಕ ತಂಡವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಲಾಭುರಾಮ್ ರಚಿಸಿದ್ದಾರೆ. ಸರ್ಕಾರಿ ಆಸ್ತಿಪಾಸ್ತಿ ಹಾನಿ, ಪೊಲೀಸ್ ವಾಹನ ಜಖಂ ಹಾಗೂ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ 6 ಎಫ್​​ಐಆರ್​​ ದಾಖಲಾಗಿದೆ.

ಧಾರ್ಮಿಕ ಮುಖಂಡರಿಂದ ಹಿಂಸಾಚಾರ ಖಂಡನೆ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಖಂಡಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿದ ಮೌಲ್ವಿ ಸುಬಾನಿ, ಹಿಂಸಾಚಾರಕ್ಕೆ ಇಸ್ಲಾಂ ಯಾವತ್ತೂ ಕುಮ್ಮಕ್ಕು ನೀಡಲ್ಲ. ಕಲ್ಲು ತೂರಾಟ ನಡೆಸಿದ್ದನ್ನ ನಾನು ಬಲವಾಗಿ ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸುತ್ತೇನೆ. ರಂಜಾನ್ ಮಾಸದಲ್ಲಿ ಇಂತಹ ಘಟನೆ ಬೇಸರ ತಂದಿದೆ. ಗಲಾಟೆ ಮಾಡಿದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.

ರಾತ್ರಿ ನಮಾಝ್ ಮುಗಿಯುತ್ತಿದ್ದಂತೆ ಎಲ್ಲರೂ ಪೊಲೀಸ್ ಠಾಣೆ ಎದುರು ಸೇರುತ್ತಿದ್ದರು. ವಿಚಾರ ಗಮನಿಸಿ ನಾನು ಮೈಕಿನಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿದೆ. ಪೊಲೀಸ್ ಆಯುಕ್ತರು ನಮ್ಮ ಜೊತೆಯಲ್ಲಿ ಗುಂಪಾಗಿ ಸೇರದಂತೆ ಕೇಳಿಕೊಂಡರು. ವಿವಾದಿತ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಬಂಧನವಾಗಿದೆ. ಅವನನ್ನು ಜೈಲಿಗೆ ಕಳಿಸುತ್ತೇವೆ ಅಂತ ಪೊಲೀಸ್ ಆಯುಕ್ತರು ಹೇಳಿದರು. ಆದರೂ ಅವರೆಲ್ಲಾ ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾನು ನಿರಂತರವಾಗಿ ಮೈಕಿನಲ್ಲಿ ಮನವಿ ಮಾಡುತ್ತಲೇ ಇದ್ದೆ. ಆದರೂ ಈ ದುರ್ಘಟನೆ ನಡೆದಿದ್ದು ವಿಷಾದನೀಯ. ದೇವಸ್ಥಾನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನ ನಾನು ಬಲವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಹಾಜರು ಆರೋಪಿಗಳನ್ನು ಪೊಲೀಸರು ಭಾನುವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ವಾಗ್ವಾದ ನಡೆಸಿದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಗಲಾಟೆ ಪ್ರಕರಣಕ್ಕೆ ಸಂಭಂದಿಸಿದಂತೆ 17 ವರ್ಷದ ಬಾಲಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಕ್ಕೆ ತಾಯಿ ರಜಿಯಾ ಕಣ್ಣೀರು ಹಾಕಿದರು. ಕಟಿಂಗ್ ಅಂಗಡಿಯಲ್ಲಿದ್ದ ಬಾಲಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಕೇಳಿದರೆ ಸಂಜೆ ಬನ್ನಿ ಎನ್ನುತ್ತಿದ್ದಾರೆ. ಅಕಸ್ಮಾತ್ ನನ್ನ ಮಗನಿಗೆ ಏನಾದರೂ ಆದರೆ ಅದಕ್ಕೆ ಅದಕ್ಕೆ ಪೊಲೀಸರೇ ಕಾರಣ ಎಂದು ತಾಯಿ ಅಳಲು ತೋಡಿಕೊಂಡರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಇದನ್ನೂ ಓದಿ: ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ: ಗಲಭೆಕೋರರಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ

Published On - 12:34 pm, Sun, 17 April 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?