ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ (Hubli) ಇಂದು (ಅ. 30) ಎಲ್ಲಿ ನೋಡಿದರೂ ಅಲ್ಲಿ ಹೆಣ್ಣುಮಕ್ಕಳು (Woman’s) ಕೇಸರಿ ಉಡುಗೆಯಲ್ಲಿ ಕಾಣಿಸಿಕೊಂಡರು. ಇಡೀ ಹುಬ್ಬಳ್ಳಿ ನಗರ ಕೇಸರಿಮಯವಾಗಿತ್ತು. ಹೆಣ್ಣುಮಕ್ಕಳು ಉತ್ಸಾಹದಿಂಣದ ಹನುಮನ ಜಪ ಹಾಗೂ ಜೈಕಾರಕರ ಹಾಕುತ್ತಾ ನಡೆಯುತ್ತಿದ್ದರೇ ನೋಡುಗರು ರೋಮಾನಂಚನಗೊಂಡಿದ್ದರು. ಹುಬ್ಬಳ್ಳಿಯಲ್ಲಿ ಇಂದು ಹೆಣ್ಣುಮಕ್ಕಳು ನಡೆಸಿಕೊಟ್ಟ ಹನುಮಾನ್ ಚಾಲೀಸಾ ಶೋಭಾ ಯಾತ್ರೆ (Hanuman Chalisa Shobha yatra) ಮೈ ನವಿರೇಳಿಸುವಂತಿತ್ತು.
ಯಾತ್ರೆಯುದ್ದಕ್ಕೂ ಮೊಳಗಿದ ಹನುಮಾನ ಮಹಾರಾಜ್ ಕೀ ಜೈ ಎಂದು ಜಯಘೋಷ. ಶ್ರೀರಾಮ, ಹನುಮನ, ಲಕ್ಷ್ಮಣ, ಸೀತಾ ಮಾತೆಯ ವೇಷ ತೊಟ್ಟು ಮಹಿಳೆಯರು ಗಮನ ಸೆಳೆದರು. ಕೋಲಾಟ, ಜಾಂಜ್, ಪೂರ್ಣಕುಂಭ, ಭರತನಾಟ್ಯ, ದಾಂಡಿಯಾ ಹೀಗೆ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಶೋಭಾಯಾತ್ರೆ ಉದ್ದಕ್ಕೂ ಗಮನ ಸೆಳೆದವು.
ಶ್ರೀ ಹನುಮಾನ ಪರಿವಾರ ವತಿಯಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹನುಮಾನ ಚಾಲೀಸಾ ಶೋಭಾಯಾತ್ರೆಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯು ಮೂರುಸಾವಿರ ಮಠದ ಗಂಗಾಧರ ಶಾಲೆಯ ಆವರಣದಿಂದ ಆರಂಭವಾಗಿ, ದಾಜಿಬಾನ್ ಪೇಟೆ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಲ್ಯಾಮಿಂಗ್ಟನ್ ಶಾಲೆ ಆವರಣ ತಲುಪಿತು. ದಾರಿಯುದ್ದಕ್ಕೂ ಹನುಮಾನ ಮಹಾರಾಜ್ ಕೀ ಜೈ ಎಂದು ಜಯಘೋಷ ಮೊಳಗಿದವು.
ಶೋಭಾಯಾತ್ರೆಯಲ್ಲೊ ಶ್ರೀ ಭಗ್ವವತ್ಪಾದಂ ಆಧ್ಯಾತ್ಮಿಕ ಸಂಸ್ಥೆಯ ಅವಧೂತ ಶ್ರೀ ರಮೇಶ ಗುರೂಜಿ, ಶಿಲ್ಪಾ ಶೆಟ್ಟರ್, ಸುಮಿತ್ರಾ ದೇಶಪಾಂಡೆ ಸೇರಿದಂತೆ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Sun, 30 October 22